Advertisement

ಕಪ್ಪಣ್ಣ ಅಂಗಳದಲ್ಲಿ ನವ ನಿರ್ದೇಶಕರ ನವರಾತ್ರಿ ಉತ್ಸವ

04:59 PM Sep 20, 2017 | Team Udayavani |

ಆ ಕಡೆ ದಸರಾಗಾಗಿ ಮೈಸೂರಿನಲ್ಲಿ ಚಿತ್ರೋತ್ಸವ ನಡೆದರೆ, ಈ ಕಡೆ ಬೆಂಗಳೂರಿನಲ್ಲೂ ಒಂದು ಚಿತ್ರೋತ್ಸವ ಸದ್ದಿಲ್ಲದೆ ಏರ್ಪಾಡಾಗಿದೆ. ಚಿತ್ತ ಚಿತ್ತಾರ ಚಿತ್ರೋತ್ಸವ ಹೆಸರಿನ ಈ ಚಿತ್ರೋತ್ಸವದಲ್ಲಿ ಒಂಬತ್ತು ದಿನಗಳ ಕಾಲ ಒಂಬತ್ತು ಜನಪ್ರಿಯ ನಿರ್ದೇಶಕರ ಚಿತ್ರೋತ್ಸವಗಳನ್ನು ಪ್ರದರ್ಶಿಸಲಾಗುತ್ತಿದೆ.

Advertisement

ನವ ನಿರ್ದೇಶಕ ನವರಾತ್ರಿ ಉತ್ಸವ ಇಂದಿನಿಂದ ಪ್ರಾರಂಭವಾಗಲಿದೆ. ಬಿ.ಎಸ್‌. ಲಿಂಗದೇವರು ನಿರ್ದೇಶನದ “ನಾನು ಅವನಲ್ಲ ಅವಳು’ ಚಿತ್ರದಿಂದ ಪ್ರಾರಂಭವಾಗುವ ಈ ಉತ್ಸವವು 29ರಂದು ಪ್ರದರ್ಶನವಾಗಲಿರುವ ಗಿರೀಶ್‌ ಕಾರ್ನಾಡರ “ಕಾನೂನು ಹೆಗ್ಗಡತಿ’ ಚಿತ್ರದ ಮೂಲಕ ಮುಕ್ತಾಯವಾಗಲಿದೆ.

ಕ್ಕಂತೆ ಕೆ.ಎಂ. ಚೈತನ್ಯ ನಿರ್ದೇಶನದ “ಆಕೆ’ (ಸೆ 22), ಬಿ. ಸುರೇಶ್‌ ನಿರ್ದೇಶನದ ಪುಟ್ಟಕ್ಕನ ಹೈವೇ (ಸೆ 23), ಟಿ.ಎನ್‌. ಸೀತಾರಾಂ ಅವರ “ಮತದಾನ’ (ಸೆ 24), ಪಿ. ಶೇಷಾದ್ರಿ ಅವರ “ಮುನ್ನುಡಿ’ (ಸೆ 25), ಟಿ.ಎಸ್‌. ನಾಗಾಭರಣರ “ಮೈಸೂರು ಮಲ್ಲಿಗೆ’ (ಸೆ 26), ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ಹಸೀನಾ’ (ಸೆ 27), ಸತ್ಯಪ್ರಕಾಶ್‌ ನಿರ್ದೇಶನದ “ರಾಮಾ ರಾಮಾ ರೇ’ (ಸೆ 28) ಚಿತ್ರಗಳು ಪ್ರದರ್ಶನವಾಗಲಿದೆ.

ಪ್ರತಿ ಸಂಜೆ 6ಕ್ಕೆ ಚಿತ್ರ ಪ್ರದರ್ಶನವಾಗಲಿದ್ದು, ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ನವ ನಿರ್ದೇಶಕರ ನವರಾತ್ರಿ ಉತ್ಸವವು ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳಲದಲ್ಲಿ ಪ್ರದರ್ಶನವಾಗಲಿದ್ದು, ಗುರುಪ್ರಸಾದ್‌ ಮುದ್ರಾಡಿ ಈ ಉತ್ಸವದ ಸಂಚಾಲಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next