Advertisement

ಇಂದಿನಿಂದ ನವರಾತ್ರಿ ಉತ್ಸವ 

10:10 AM Sep 21, 2017 | Team Udayavani |

ಉಡುಪಿ: ಕರಾವಳಿಯಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಸೆ. 21ರಿಂದ 30ರ ವರೆಗೆ ನವರಾತ್ರಿ ಉತ್ಸವ ಜರಗಲಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಯಾಗ, ಪುನಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

Advertisement

ನವರಾತ್ರಿ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ತೀವ್ರ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಶಂಕರಪುರ ಮಲ್ಲಿಗೆಯ ಬೆಲೆಯೂ ಏರಿಕೆ ಕಂಡಿದೆ.

ದೇವರ ಅಲಂಕಾರಕ್ಕೆ ಹೆಚ್ಚಿನ ಹೂವುಗಳ ಬೇಡಿಕೆ ಇರುತ್ತದೆ. ಅದರಲ್ಲೂ ಮಲ್ಲಿಗೆಗಂತೂ ಬೇಡಿಕೆ ಹೆಚ್ಚಾಗಿರುತ್ತದೆ.  ಮಲ್ಲಿಗೆ ಇಳುವರಿ ಕುಂಠಿತ ಶಂಕರಪುರ ಮಲ್ಲಿಗೆ ಬೆಳೆಗೆ ಈ ಬಾರಿ ಹೆಚ್ಚೇನೂ ಹಾನಿಯಾಗದಿದ್ದರೂ ಮಳೆ ಬಿಟ್ಟು ಬಿಟ್ಟು ಸುರಿಯುತ್ತಲೇ ಇರುವ ಕಾರಣದಿಂದ ಬೆಳೆಯ ಇಳುವರಿ ಅಲ್ಪ ಕುಂಠಿತವಾಗಿದೆ. ಸದ್ಯ ಚಳಿ ಇಲ್ಲದ ಕಾರಣ ಇಳುವರಿಗೆ ಅಂತಹ ಸಮಸ್ಯೆ ಇಲ್ಲ. ಸಾಮಾನ್ಯ ರೋಗಗಳು ಈಗಲೂ ಇವೆ. ಅದಕ್ಕೆ ತಕ್ಕಂತಹ ಕೀಟನಾಶಕ ಮಾರುಕಟ್ಟೆಯಲ್ಲಿರುವ ಕಾರಣ ಈ ಸಮಸ್ಯೆಯೂ ಹೆಚ್ಚಿಲ್ಲ. ನವರಾತ್ರಿ ಸಂದರ್ಭ ಬೇಡಿಕೆ ಹೆಚ್ಚಿರುವ ಕಾರಣ ಮಲ್ಲಿಗೆ ದರ ಏರಿಕೆಯಾಗುವುದು ಸಹಜ ಎಂದು ಮಲ್ಲಿಗೆ ಬೆಳೆಗಾರ ಪಡುಬಿದ್ರಿಯ ಮನೋಹರ ಪೂಜಾರಿ ಹೇಳಿದ್ದಾರೆ.

ಪ್ರಸ್ತುತ ಶಂಕರಪುರ ಮಲ್ಲಿಗೆಗೆ ಚೆಂಡಿಗೆ 180ರಿಂದ 220 ರೂ., ಅಟ್ಟೆಗೆ 700ರಿಂದ 850 ರೂ. ವರೆಗೆ ಇದೆ. ಭಟ್ಕಳ ಮಲ್ಲಿಗೆ ಚೆಂಡಿಗೆ 120 ರೂ. ನಿಂದ 150 ರೂ.ವರೆಗೆ ಇದೆ. ಬೇಡಿಕೆ ಹೆಚ್ಚಾದಂತೆ ದರವೂ ಏರು ಪೇರಾಗುತ್ತದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಮಲ್ಲಿಗೆಯನ್ನು ಹೆಚ್ಚು ದಿನ ಇಡಲು ಬರುವುದಿಲ್ಲ. ಆದರೂ ಮಾರಾಟಗಾರರು ಫ್ರಿಡ್ಜ್ನಲ್ಲಿ ಇಟ್ಟು ಒಂದೆರಡು ದಿನ ಶೇಖರಿಸಿಡುತ್ತಾರೆ. ಶಂಕರಪುರ ಮಲ್ಲಿಗೆ ಬದಲಿಗೆ ಭಟ್ಕಳ ಮಲ್ಲಿಗೆ, ಜಾಜಿಯನ್ನು ಹೆಚ್ಚಿಗೆ ಮಾರಾಟಗಾರರು ಮಾರಾಟ ಮಾಡು ತ್ತಿದ್ದಾರೆ. ಅನಿವಾರ್ಯವಾಗಿ ಕೆಲವರು ಬೇರೆ ಹೂವುಗಳನ್ನು ಖರೀದಿಸುತ್ತಿದ್ದಾರೆ. ಸೇವಂತಿಗೆ, ಕಾಕಡ, ಗುಲಾಬಿ, ಹಿಂಗಾರ, ಗೊಂಡೆ ಹೂಗಳ ದರವೂ ಹೆಚ್ಚಾಗಿದೆ. ಎಲ್ಲೆಡೆ ಹೂವಿನ ವ್ಯಾಪಾರ ಭರ್ಜರಿಯಾಗಿದೆ.

Advertisement

ತೆಂಗಿನಕಾಯಿ ಬೆಲೆಯೂ ಹೆಚ್ಚಳ
ನವರಾತ್ರಿ ಪೂಜೆ, ಉಪವಾಸ ಆಚರಿಸುವ ಸಮಯ ದಲ್ಲಿ ಹೆಚ್ಚಿನವರು ಸಸ್ಯಾಹಾರ ಸೇವಿಸುವ ಕಾರಣ ಮುಂದಿನ 2 ವಾರ ತರಕಾರಿಗೂ ಬೇಡಿಕೆ ಹೆಚ್ಚಿರುತ್ತದೆ. ಇದರಿಂದಾಗಿ ಕೆಲವು ನಿರ್ದಿಷ್ಟ   ತರಕಾರಿಗಳನ್ನು  ಹೊರತು ಪಡಿಸಿ ಉಳಿ ದೆಲ್ಲ  ರೀತಿಯ ತರಕಾರಿಗಳ ಬೆಲೆ ಯಲ್ಲಿ  ಹೆಚ್ಚಳವಾಗತೊಡಗಿದೆ. ಅದರೊಟ್ಟಿಗೆ ತೆಂಗಿನಕಾಯಿ ಬೆಲೆಯೂ ಏರಿದ್ದು, 1 ತೆಂಗಿನ ಕಾಯಿಗೆ 22 ರೂ. ಆಗಿದೆ. ಬೇಡಿಕೆ ಏರಿ, ಸರಬರಾಜು ಕಮ್ಮಿ ಯಾದರೆ 25 ರೂ.ಗೆ ಏರಿದರೂ ಆಶ್ಚರ್ಯ ವಿಲ್ಲ  ಎಂದು ಮಾರಾಟಗಾರರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next