ಆಂಧ್ರಪ್ರದೇಶ(ಶ್ರೀಹರಿಕೋಟಾ): ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂವಹನ ಉಪಗ್ರಹ ಜಿಸ್ಯಾಟ್-9 ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಸಂಜೆ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 450 ಕೋಟಿ ರೂಪಾಯಿ ವೆಚ್ಚದ ಉಪಗ್ರಹವನ್ನು ಯಶಸ್ವಿಯಾಗಿ
ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಪಗ್ರಹ ಇದಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂವಹನ ಉ ಪಗ್ರಹದ ಉಡಾವಣೆ ಯಶಸ್ವಿಗೊಳಿಸಿದ ವಿಜ್ಞಾನಿಗಳ ಕೆಲಸಕ್ಕೆ ಹ್ಯಾಟ್ಸ್ ಅಪ್ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ 50 ಮಂದಿ ಅತ್ಯುತ್ತಮ ಬಾಹ್ಯಾಕಾಶ ಇಂಜಿನಿಯರ್ ಗಳು ಮತ್ತು ಇಸ್ರೋದ ವಿಜ್ಞಾನಿಗಳು ಸೇರಿ ಉಪಗ್ರಹ ಉಡಾವಣೆಗೆ ಚಾಲನೆ ನೀಡಿದ್ದರು. ಈ ಸೆಟಲೈಟ್ 2,230 ಕೆಜಿ ತೂಕ ಹೊಂದಿದ್ದು, ಜಿಸ್ಯಾಟ್ 9 ಉಪಗ್ರಹ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂವಹನಕ್ಕೆ ಸಹಕಾರಿಯಾಗಲಿದೆ.