Advertisement

ಎಲ್ಲೆಮಾಳದಲ್ಲಿ ಪ್ರಕೃತಿ ಮಾಹಿತಿ ಕೇಂದ್ರ

11:36 AM Jul 05, 2018 | |

ಚಾಮರಾಜನಗರ: ಸ್ಥಳೀಯ ಪ್ರಾಣಿ, ಪಕ್ಷಿ, ಸಸ್ಯಗಳನ್ನು ಪರಿಚಯಿಸುವ ಸದುದ್ದೇಶದಿಂದ ಕಾಡಂಚಿನ ಮಕ್ಕಳು, ವಿದ್ಯಾರ್ಥಿಗಳು, ಸ್ಥಳೀಯರನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಎಲ್ಲೆಮಾಳದಲ್ಲಿ ಪ್ರಕೃತಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ.

Advertisement

ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ ಸಂಸ್ಥೆ, ನಿಸರ್ಗ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ಒಕ್ಕೂಟ ಮತ್ತು ಜರ್ಮನ್‌ ಸರ್ಕಾರ ಬೆಂಬಲಿತ ಇಂಟಿಗ್ರೇಟೆಡ್‌ ಟೈಗರ್‌ ಹ್ಯಾಬಿಟಾಟ್‌ ಕನ್ಸರ್ವೇಷನ್‌ ಪ್ರಾಜೆಕ್ಟ್ ಅಡಿಯಲ್ಲಿ ಮಾಹಿತಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದೆ. 

ಹೊಳೆಮತ್ತಿ ಎಂದರೇನು?: ಕಾವೇರಿ, ಪಾಲಾರ್‌ ನದಿ, ಉಡತೊರೆಹಳ್ಳ, ದೊಡ್ಡಹಳ್ಳ ಮತ್ತು ಇತರ ನದಿ ಪಾತ್ರಗಳಲ್ಲಿ ಮಾತ್ರ ಬೆಳೆಯುವ ಸುಂದರ, ಬೃಹತ್‌ ಮರವಾದ ಹೊಳೆಮತ್ತಿಯ ಹೆಸರನ್ನೇ ಈ ಮಾಹಿತಿ ಕೇಂದ್ರಕ್ಕಿಡಲಾಗಿದೆ. ಈ ಮರ, ನಮ್ಮ ನದಿ ಮತ್ತು ನೀರಿನ ಸಂಕೇತವಾಗಿದೆ ಹಾಗೂ ಚಾಮರಾಜನಗರ ಜಿಲ್ಲೇಯ ಕೆಲ ಭಾಗಗಳಲ್ಲಿ ಯಥೇತ್ಛವಾಗಿ ಬೆಳೆಯುವುದರಿಂದ ಈ ಮಾಹಿತಿ ಕೇಂದ್ರಕ್ಕೆ ಹೊಳೆಮತ್ತಿ ಹೆಸರಿಡಲಾಗಿದೆ.

ಮಾಹಿತಿ ಕೇಂದ್ರದಲ್ಲಿ ಸ್ಥಳೀಯ ಪ್ರಾಣಿ ಪಕ್ಷಿ, ಮರಗಿಡ, ಕೀಟ, ಮಲೈ ಮಹದೇಶ್ವರ ವನ್ಯಜೀವಿ ಧಾಮದಲ್ಲಿರುವ ವಿವಿಧ ಆವಾಸಗಳು (ಕುರುಚಲು ಕಾಡು, ಎಲೆ ಉದುರುವ ಕಾಡುಗಳು ಮತ್ತು ಅರೆ-ನಿತ್ಯ ಹರಿದ್ವರ್ಣದ ಕಾಡುಗಳು), ಕೀಟ-ಸಸ್ಯ ಸಂಬಂಧ ಹೀಗೆ ಎಲ್ಲ ವಿಚಾರಗಳನ್ನು ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ. ಅದರೊಂದಿಗೆ ಮಕ್ಕಳಿಗೆ ನಿಸರ್ಗದ ಬಗ್ಗೆ ಅರಿವು ಮೂಡಿಸುವ ಆಟಗಳು ಹೀಗೆ ಹಲವಾರು ವಿಷಯಗಳ ಬಗೆಗಿನ ವೈಜ್ಞಾನಿಕ ಮಾಹಿತಿಯನ್ನು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಕನ್ನಡದಲ್ಲಿ ನೀಡಲಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಹುಲಿ ಮತ್ತು ಆನೆಗಳಿರುವ ಹೆಗ್ಗಳಿಕೆ ಚಾಮರಾಜನಗರ ಜಿಲ್ಲೇಗಿದೆ. ಆದುದರಿಂದ ಈ ಎರಡು ವನ್ಯಜೀವಿಗಳ ಬಗ್ಗೆ ತರಕರಡಿ, ನೀರು ನಾಯಿ, ಉರುಗಲು ಮರ, ಕಾಡಿನಲ್ಲಿ ಸಿಗುವ ಸೊಪ್ಪಿನ ಪ್ರಭೇದಗಳು ಹೀಗೆ ಹಲವು ಪ್ರಾಣಿಪಕ್ಷಿ, ಸಸ್ಯಸಂಕುಲದ ಮಾಹಿತಿ ಒದಗಿಸಲಾಗಿದೆ. ಜೊತೆಗೆ ವನ್ಯಜೀವಿಗಳ ಜೀವನಕ್ರಮವನ್ನು ಸರಳವಾಗಿ ಕಥೆಗಳ ಮೂಲಕ ವಿವರಿಸುವ ಪ್ರಯತ್ನ ಮಾಡಲಾಗಿದೆ. 

Advertisement

ಸಂಜಯ್‌ ಗುಬ್ಬಿ ಪರಿಕಲ್ಪನೆ ಯೋಜನೆಯ ಪರಿಕಲ್ಪನೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮತ್ತು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿಯವರದು. ಅವರ ನೇತೃತ್ವದಲ್ಲಿ ಈ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದೆ.

ನಿಸರ್ಗ ಚಿತ್ರ ಕಲಾವಿದೆ ಸಂಗೀತಾ ಈ ಮಾಹಿತಿ ಕೇಂದ್ರಕ್ಕೆ ವಿನ್ಯಾಸ ರೂಪಿಸಿದ್ದಾರೆ. ಅವರೊಂದಿಗೆ ಅಭಿಷೇಕ್‌, ಕೃಷ್ಣ ಗೋಪಾಲ…, ಶಿಲ್ಪಶ್ರೀ, ಸರ್ತಾಜ್‌ ಘುಮನ, ಅವಿನಾಶ್‌, ಅಭಿಜ್ಞಾ ದೇಸಾಯಿ, ವನ್ಯಾ ಜೋಸೆಫ್ ಮತ್ತಿತರ ಚಿತ್ರ ಕಲಾವಿದರು ಹಾಗೂ ಸ್ಥಳೀಯರು ಕೈಜೋಡಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next