Advertisement

ಪ್ರಕೃತಿ ವಿಕೋಪ; ಮುಂಜಾಗ್ರತಾ ಕ್ರಮ ಅಗತ್ಯ

02:01 PM Apr 30, 2022 | Team Udayavani |

ಹರಿಹರ: ನಗರದ ತುಂಗಭದ್ರಾ ನದಿಯಲ್ಲಿ ಗುರುವಾರ ಜಿಲ್ಲಾಡಳಿತ ಸಹಯೋಗದಲ್ಲಿ ಬೆಂಗಳೂರಿನ ಎನ್‌ ಡಿಆರ್‌ಎಫ್‌ ತಂಡದಿಂದ ಅಗ್ನಿ ಅನಾಹುತದಲ್ಲಿ ಮತ್ತು ಪ್ರವಾಹ ಸಂದರ್ಭಗಳಲ್ಲಿ ಜನ-ಜಾನುವಾರಗಳ ರಕ್ಷಣಾ ಕಾರ್ಯದ ಬಗ್ಗೆ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

Advertisement

ಸುಮಾರು 50ಕ್ಕೂ ಹೆಚ್ಚು ಜನರ ತಂಡ ಬೋಟ್‌ ಮತ್ತಿತರ ಪರಿಕರಗಳನ್ನು ಬಳಸಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡವರನ್ನು ಹಾಗೂ ಬೆಂಕಿ ಅವಘಡಗಳು ಸಂಭವಿಸಿದಾಗ ಸಂತ್ರಸ್ತರನ್ನು ರಕ್ಷಣೆ ಮಾಡುವ, ಅವರಿಗೆ ತಕ್ಷಣಕ್ಕೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು.

ನಂತರ ಮಾತನಾಡಿದ ಎನ್‌ಡಿಆರ್‌ಎಫ್‌ ಅಸಿಸ್ಟೆಂಟ್‌ ಕಮಾಂಡರ್‌ ಜೆ.ಸಿಂತಾಲ್‌ ಕುಮಾರ್‌ ಕೇಂದ್ರ ಸರ್ಕಾರದ ಆದೇಶದಂತೆ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯದ ಪ್ರಾತ್ಯಕ್ಷತೆ ನಡೆಸಲಾಗುತ್ತಿದೆ ಎಂದರು.

ಹರಿಹರದ ತುಂಗಭದ್ರಾ ನದಿಯಲ್ಲಿ ದಾವಣಗೆರೆ ಜಿಲ್ಲಾಡಳಿತ ಹಾಗೂ ಸುತ್ತಮುತ್ತಲಿನ ತಾಲೂಕು ಆಡಳಿತದ ಸಿಬ್ಬಂದಿಗಳಿಗೆ ಪ್ರವಾಹದ ಹಾಗೂ ಬೆಂಕಿ ಅವಘಡ ಸಂದರ್ಭದಲ್ಲಿ ನಾವು ಸಾರ್ವಜನಿಕರ ಮತ್ತು ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಯಾವ ರೀತಿಯಲ್ಲಿ ಮುಂಜಾಗ್ರತ ಕ್ರಮಕೈಗೊಳ್ಳಬೇಕು ಎಂಬ ಅರಿವು ಮೂಡಿಸಲಾಗಿದೆ ಎಂದರು.

Advertisement

ತಹಶೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಹರಿಹರ ತಾಲೂಕು ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಪಾತ್ರವೇನು ಎಂಬ ಬಗ್ಗೆ ಎನ್‌ಡಿಆರ್‌ ಎಫ್‌ ತಂಡ ಸೂಕ್ತ ತಿಳಿವಳಿಕೆ ನೀಡಿದೆ ಎಂದರು.

ನಗರ ಯೋಜನಾಧಿಕಾರಿ ನಜ್ಮಾ, ಡಿಎಚ್‌ಒ ಡಾ|ನಾಗರಾಜ್‌, ಸಿಪಿಐ ಸತೀಶ್‌ಕುಮಾರ್‌, ಕುಮಾರ ಪಟ್ಟಣಂ ಮತ್ತು ಹರಿಹರ ನಗರ ಠಾಣೆ, ಕಂದಾಯ, ಅಗ್ನಿಶಾಮಕ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next