Advertisement
“ನನ್ನ ಈ ಸಾಧನೆಯ ಹಿಂದೆ ಜಯಪ್ರಕಾಶ್ ಅವರ ಕೊಡುಗೆ ಅಪಾರ. ನಾನು ಇಂದು ಈ ಮಟ್ಟಕ್ಕೆ ಬೆಳೆಯ ಬೇಕಾದರೆ ಅವರೇ ಕಾರಣ. ಬಡತನದಿಂದ ಬೆಳೆದು ಬಂದ ನನ್ನನ್ನು ಪೂರ್ಣ ಪ್ರಮಾಣದ ಕ್ರಿಕೆಟಿಗನನ್ನಾಗಿ ರೂಪಿಸಿದ್ದಲ್ಲಿ ಜಯಪ್ರಕಾಶ್ ಅವರ ಶ್ರಮ ಅಪಾರ. ಆದ್ದರಿಂದ ಈ ಉಡುಗೊರೆ ಅವರಿಗೆ ಸಲ್ಲಬೇಕು’ ಎಂದು ನಟರಾಜನ್ ತಿಳಿಸಿದರು.
ಭಾರತದ ಮತ್ತೋರ್ವ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಕೂಡ ಮಹೀಂದ್ರ ಕಂಪೆನಿ ಗಿಫ್ಟ್ ಆಗಿ ನೀಡಿದ ಜೀಪ್ ಲಭಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೀಪ್ ಜತೆಗೆ ನಿಂತ ಫೋಟೊವನ್ನೂ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯುತ್ತಮ ಸಾಧನೆಗೈದ ಭಾರತದ 6 ಯುವ ಕ್ರಿಕೆಟಿಗರಿಗೆ ಮಹೀಂದ್ರ ಸಂಸ್ಥೆಯ ಆನಂದ ಮಹೀಂದ್ರ ಅವರು ಈ ಉಡುಗೊರೆ ಘೋಷಿಸಿದ್ದರು.