Advertisement

ನೀಟ್‌ ಕೃಪಾಂಕ ಗೊಂದಲ ಸಾಧ್ಯತೆ?

06:25 AM Jul 12, 2018 | Team Udayavani |

ಬೆಂಗಳೂರು: ತಮಿಳು ಭಾಷೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಬರೆದ ಎಲ್ಲ  ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ನೀಡಿರುವ ತೀರ್ಪು ಈಗ ರಾಜ್ಯದ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ.

Advertisement

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬುಧವಾರ ವೈದ್ಯಕೀಯ,ದಂತ ವೈದ್ಯಕೀಯ ಸೀಟುಗಳ ಅಣಕು ಹಂಚಿಕೆಯ ಫ‌ಲಿತಾಂಶ ಪ್ರಕಟಿಸಲಾಗಿದೆ. 

ಅಭ್ಯರ್ಥಿಗಳು ದಾಖಲಿಸಿರುವ ಇಚ್ಛೆ ಅಥವಾ ಆಯ್ಕೆಯನ್ನು ಬದಲಿಸಲು, ಹೊಸದಾಗಿ ಸೇರಿಸಲು/ಅಳಿಸಲು
ಜು.12ರ ಸಂಜೆ 5.30ರ ತನಕ ಅವಕಾಶ ಇದೆ. ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in ನೋಡಬಹುದಾಗಿದೆ.

ಮದ್ರಾಸ್‌ ಹೈಕೋರ್ಟ್‌ ಆದೇಶದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಅಖೀಲ ಭಾರತ ಮಟ್ಟದಲ್ಲಿ ಸೀಟು ಪಡೆಯಲು ಇಚ್ಛಿಸುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೊಂದಲ ಏಕೆ?: ತಮಿಳು ಭಾಷೆಯಲ್ಲಿ ನೀಟ್‌ ಬರೆದಿರುವವರಿಗೆ ಕೃಪಾಂಕ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ಸಿಬಿಎಸ್‌ಇಗೆ ಸೂಚಿಸಿತ್ತು. ತಮಿಳು ಭಾಷೆಯಲ್ಲಿ ಸುಮಾರು 24 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 196 ಅಂಕ ತನಕ ಕೃಪಾಂಕ ಸಿಗಲಿದೆ. ಇದರಿಂದ ಅಖೀಲ ಭಾರತ ಮಟ್ಟದಲ್ಲಿ ರ್‍ಯಾಂಕ್‌ ಲಿಸ್ಟ್‌ ಬದಲಾಗುವ ಸಾಧ್ಯತೆಯಿದೆ.

Advertisement

ಕೃಪಾಂಕ ನೀಡಿರುವ ಬಗ್ಗೆ ಸಿಬಿಎಸ್‌ಇ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಹೀಗಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಇದೆ.

ಎಂಜಿನಿಯರಿಂಗ್‌ ಸೀಟು ಹಂಚಿಕೆ ವೇಳಾಪಟ್ಟಿ
ಸಿಇಟಿ-2018ರ ಎಂಜಿನಿಯರಿಂಗ್‌,ಆರ್ಕಿಟೆಕ್ಚರ್‌ ಕೃಷಿ ವಿಜ್ಞಾನ, ಪಶುವೈದ್ಯಕೀಯ ವಿಜ್ಞಾನ ಮೊದಲಾದ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಜು.15ರ ಬೆಳಗ್ಗೆ 10.30ರ ತನಕ ಅಭ್ಯರ್ಥಿಗಳು ಆಪ್ಷನ್‌ ಎಂಟ್ರಿ ಮಾಡಬಹುದು. 16ರ ಸಂಜೆ 6 ಗಂಟೆಗೆ ಅಣಕು ಸೀಟು ಹಂಚಿಕೆ ನಡೆಯಲಿದೆ. 18ರ ಮಧ್ಯಾಹ್ನ 2.30ರ ವರೆಗೆ ಆಯ್ಕೆ ಬದಲಿಸಲು, ಹೊಸದಾಗಿ ಸೇರಿಸಲು, ಅಳಿಸಲು ಅವಕಾಶ ನೀಡಲಾಗುತ್ತದೆ.

ಜುಲೈ 19ರಂದು ಸೀಟು ಹಂಚಿಕೆಯ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಸುತ್ತಿನದಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಂಡು, ಜುಲೈ 23ರ ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜಿಗೆ ದಾಖಲಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next