ಹೊಸದಿಲ್ಲಿ: ಸುಮಾರು 3,292 ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳು ಇನ್ನೂ ತಮ್ಮ ವಿದೇಶಿ ದೇಣಿಗೆ ಕುರಿತು ಮಾಹಿತಿ ನೀಡಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ. ಆದಾಯದ ವಿವರ ನೀಡದ ಸಂಸ್ಥೆಗಳ ಪೈಕಿ ಜೆಎನ್‌ಯು, ಇಗ್ನೊ, ಐಐಟಿ ದಿಲ್ಲಿ ಮತ್ತು ಮದ್ರಾಸ್‌ನಂಥ ಶಿಕ್ಷಣ ಸಂಸ್ಥೆಗಳು, ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಕೂಡ ಸೇರಿವೆ. ಇವರು ಕಳೆದ ವರ್ಷದ ತಮ್ಮ ವಿದೇಶಿ ಆದಾಯ ಮತ್ತು ವ್ಯಯದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಚಿವಾಲಯ ತಿಳಿಸಿದೆ. ವಿದೇಶಿ ಆದಾಯ ನಿಯಂತ್ರಣ ಕಾಯ್ದೆ (ಎಫ್ಸಿಆರ್‌ಎ) ಅನ್ವಯ ಈ ಸಂಸ್ಥೆಗಳು ಹಲವಾರು ಸಾಲಿನ ತಮ್ಮ ವಿದೇಶಿ ಆದಾಯದ ಕುರಿತು ವರದಿ ನೀಡಿಲ್ಲ ಎಂದು 2011-12ನೆ ಸಾಲಿನಿಂದ 2016-17ನೇ ಸಾಲಿನ ದಾಖಲೆಗಳನ್ನು ಪರಿಶೀಲಿಸಿದ ವೇಳೆ ತಿಳಿದುಬಂದಿದೆ ಎಂದು ಸಚಿವಾಲಯ ತಿಳಿಸಿದೆ. ಈ ಸಂಸ್ಥೆಗಳಿಗೆ ಆನ್ ಲೈನ್ ಮೂಲಕ ಆದಾಯ ವಿವರವನ್ನು ಒದಗಿಸಲು ಸೂಚಿಸಲಾಗಿದೆ. ಟಿಸ್ ನೀಡಿದ 15 ದಿನಗಳೊಳಗೆ ದಾಖಲೆ ನೀಡದಿದ್ದರೆ ಎಫ್ಸಿಆರ್‌ಎ ಅಡಿ ದೂರು ದಾಖಲಿಸಲಾಗುವುದು ಎಂದೂ ಹೇಳಿದೆ.