Advertisement

ಬಂಟಕಲ್‌ ತಾಂತ್ರಿಕ ಕಾಲೇಜು: ರಾಷ್ಟ್ರೀಯ ಮಟ್ಟದ ಐಡಿಯಾ ಪ್ರಸ್ತುತಿ ಸ್ಪರ್ಧೆ; ಐಡಿಯಾಥಾನ್‌ – 2022

04:25 PM Dec 10, 2022 | Team Udayavani |

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಐಡಿಯಾ ಪ್ರಸ್ತುತ ಪಡಿಸುವ ಸ್ಪರ್ಧೆ ಐಡಿಯಾಥಾನ್‌ 2022 ಡಿ.10ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರ್ಯೂಬಾ ಇಂಡಿಯಾ ಸಾಫ್ಟ್‌ವೇರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಸ್ಥ ದಿನೇಶ್‌ ಕಾರ್ಣಿಕ್‌ ಮಾತನಾಡಿ, ವಿದ್ಯಾರ್ಥಿಗಳು ಆಲೋಚನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಶ್ರಮಿಸುವ ವಿದ್ಯಾರ್ಥಿಗಳು ಪದವಿ ಮುಗಿಸಿದ ಕೂಡಲೇ ಉದ್ಯಮಿಗಳಾಗಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್‌ ಮಾತನಾಡಿ ಮನುಕುಲದ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಹೊಸ ಆಲೋಚನೆಗಳನ್ನು ಹುಟ್ಟುಹಾಕಲು ಐಡಿಯಾಥಾನ್‌ ನಂತಹ ಕಾರ್ಯಕ್ರಮಗಳು ಸಹಾಯ ಮಾಡುವುದರಿಂದ ಇಂತಹ ಸ್ಪರ್ಧೆಗಳು ನಿರಂತರ ನಡೆಯಲಿ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ, ಉಡುಪಿ ಪ್ರಿಮಿಯರ್‌ ಇನ್‌ವೆಸ್ಟ್‌ಮೆಂಟ್‌ನ ಪ್ರವರ್ತಕ ಹರೀಶ್‌ ಬೆಳ್ಮಣ್‌ ಮತ್ತು ಕಾಲೇಜಿನ ಉಪಪ್ರಾಂಶುಪಾಲ ಡಾ| ಗಣೇಶ್‌ ಐತಾಳ್‌ ವೇದಿಕೆಯಲ್ಲಿದ್ದರು. ಅಂಕಿತಾ ಭಟ್‌ ಅತಿಥಿ ಪರಿಚಯ ಮಾಡಿದರು. ಕಾಲೇಜಿನ ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉದ್ಯಮಶೀಲತೆ ಅಭಿವೃದ್ಧಿ ಘಟಕದ ಸಂಯೋಜಕ ಅರುಣ್‌ ಉಪಾಧ್ಯಾಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರುತಾ ಎ. ಭಟ್‌ ನಿರೂಪಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಉಷಾ ಪಾರ್ವತಿ ವಂದಿಸಿದರು.

Advertisement

ಪ್ರಡಿಕ್ಟಿವ್‌ ಹೆಲ್ತ್‌ಕೇರ್‌, ಇ-ವಾಹನಗಳು, ತಂತ್ರಜ್ಞಾನ ಆಧಾರಿತ ಕೃಷಿ ತ್ಯಾಜ್ಯದಿಂದ ಸಂಪತ್ತು, ಅನಿಮೇಷನ್‌, ಗೇಮಿಂಗ್‌, ಕ್ಲೌಡ್‌ ಕಂಪ್ಯೂಟಿಂಗ್‌, ವಿಪತ್ತು ನಿರ್ವಹಣೆ ಮತ್ತು ಸುರಕ್ಷತೆಯಂತಹ ವಿವಿಧ ವಿಷಯಗಳ ಅಡಿಯಲ್ಲಿ ಸುಮಾರು 65 ತಂಡಗಳು ಸ್ಪರ್ಧಿಸುತ್ತಿದ್ದು, ಸ್ಪರ್ಧೆಯಲ್ಲಿ ದೇಶದ ವಿವಿಧ ಎಂಜಿನಿಯರಿಂಗ್‌ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next