Advertisement

ಫೆ.8ರಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ

04:09 PM Jan 10, 2021 | Team Udayavani |

ಟಿ.ದಾಸರಹಳ್ಳಿ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಫೆ.8 ರಿಂದ 12ರವರೆಗೆ ನಡೆಯುವ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ನೋಂದಾಯಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು ಎಂದು ಮೇಳದ ಅಧ್ಯಕ್ಷ ಹಾಗೂ ಐಐಎಚ್‌ಆರ್‌ ನಿರ್ದೇಶಕ ಎಂ.ಆರ್‌. ದಿನೇಶ್‌ ಹೇಳಿದರು.

Advertisement

ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ತೋಟ ಗಾರಿಕೆ ಮೇಳದ ಲೋಗೊ ಅನಾವರಣ ಗೊಳಿಸಿ ಜಾಲತಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ವರ್ಷ ದೇಶದ ಅತಿದೊಡ್ಡ ತೋಟಗಾರಿಕಾ ಮೇಳವಾಗಿದ್ದರೂ ಈ ಬಾರಿ ವಿಶಿಷ್ಟವಾಗಿರುತ್ತದೆ. ಕೋವಿಡ್‌ ಕಾರಣದಿಂದ ಮೇಳಕ್ಕೆ ಮುಕ್ತ ಪ್ರವೇಶವನ್ನು ನಿಬಂìಧಿಸಲಾಗುತ್ತಿದ್ದು, ಭೌತಿಕ ಮತ್ತು ವರ್ಚುವಲ್‌ ಸ್ವರೂಪಗಳಲ್ಲಿರುತ್ತದೆ. ಖುದ್ದಾಗಿ ಭೇಟಿ ನೀಡುವವರ ಸಂಖ್ಯೆಯನ್ನು 30 ಸಾವಿರಕ್ಕೆ ಮಿತಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಜನದಟ್ಟಣೆ ತಡೆಯಲು ನೋಂದಣಿ ಕಡ್ಡಾಯ ಮಾಡಲಾಗಿದೆ. ಮೇಳ ನಡೆಯುವ 5 ದಿನಗಳ ಕಾಲ ಪ್ರತಿನಿತ್ಯ ಕೇವಲ ಆರು ಸಾವಿರ ನೋಂದಾ ಯಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ತಂತ್ರಜ್ಞಾನ ಆಧಾರಿತ ವರ್ಚುವಲ್‌ ವಿಧಾನದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 25 ಲಕ್ಷ ಮಂದಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಸಂಸ್ಥೆಯ ವೆಬ್‌ಸೈಟ್‌ //nhf2021.iihr.res.in ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ:ಅಂಜನಾದ್ರಿ ಕ್ಷೇತ್ರ ಅಯೋಧ್ಯೆಯಷ್ಟೇ ಖ್ಯಾತಿ ಪಡೆಯಬೇಕು: ರಾಜ್ಯಪಾಲ ವಜುಭಾಯಿ ವಾಲಾ

ನವೋದ್ಯಮ ಮತ್ತು ಸದೃಢ ಭಾರತಕ್ಕೆ ತೋಟಗಾರಿಕೆಯನ್ನು ಪ್ರಮುಖ ಸಾಧನವನ್ನಾಗಿಸುವುದು ಮೇಳದ ಮುಖ್ಯ ಧ್ಯೇಯವಾಗಿದೆ. ಒಟ್ಟಾರೆ ರೈತರ ಆದಾಯವನ್ನು ದ್ವಿಗುಣಗೊಳಿಸಿ ತೋಟಗಾರಿಕೆಯನ್ನು ವ್ಯಾಪಾರ, ಉದ್ಯಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮೇಳ ಪ್ರಮುಖ ಪಾತ್ರ ವಹಿಸಲಿದೆ. ಜತೆಗೆ ಕೋವಿಡ್‌ ನಿಂದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಆಸಕ್ತರನ್ನು ತೋಟಗಾರಿಕೆಯತ್ತ ಆಕರ್ಷಿಸಲು ಇದು ಸಹಕಾರಿಯಾಗಲಿದೆ ಎಂದರು.

Advertisement

ಮೇಳದ ಸಂಘಟನಾ ಕಾರ್ಯದರ್ಶಿ ಮತ್ತು ಐಐಎಚ್‌ಆರ್‌ ಪ್ರಧಾನ ವಿಜ್ಞಾನಿ ಡಾ.ಎಂ.ವಿ. ಧನಂಜಯ, ಸಂಸ್ಥೆ ಅಭಿವೃದ್ಧಿಪಡಿಸಿದ ಸುಮಾರು 216 ತಂತ್ರಜ್ಞಾನ ಗಳನ್ನು ಮೇಳದಲ್ಲಿ ಪ್ರದರ್ಶಿಸ ಲಾಗುವುದು. ವಿಜ್ಞಾನಿ ಗಳೊಂದಿಗೆ ರೈತರು ಈ ಸಂಬಂಧ ಸಂವಾದ ನಡೆಸಬಹುದು. ಜತೆಗೆ ನೂರು ಮಳಿಗೆಗಳ ಮೂಲಕ ಮಾಹಿತಿ ಪಡೆಯಬ ಹುದು. ಪ್ರಗತಿಪರ ರೈತರ ಸಂದರ್ಶನಗಳ

ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು. ದೇಶದ 23 ರಾಜ್ಯಗಳ ರೈತರಿಗೆ ಈಗಾಗಲೇ ಬೀಜಗಳನ್ನು ಮಾರಾಟ ಮಾಡಲಾಗಿದೆ. ಕೇವಲ ನಾಲ್ಕು ತಿಂಗಳಲ್ಲಿ ಸಂಸ್ಥೆ 45 ಲಕ್ಷ ವ್ಯವಹಾರ ನಡೆಸಿದೆ. ಸುಮಾರು 60 ಬೆಳೆ ಪ್ರಭೇದಗಳ ಬೀಜಗಳು ಪೋರ್ಟಲ್‌ ಮೂಲಕ ಸಿಗುತ್ತವೆ. ಐಐಎಚ್‌ಆರ್‌ ಸದ್ಯ ಬೀಜ ಮಾರಾಟದ ಪ್ರಮಾಣವನ್ನು ವಾರ್ಷಿಕ 20 ಟನ್‌ ನಿಂದ 50 ಟನ್‌ ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ಐಐಎಚ್‌ಆರ್‌ ವಿಜ್ಞಾನಿಗಳಾದ ಡಾ.ಬಿ.ನಾರಾಯಣ ಸ್ವಾಮಿ, ಡಾ.ಕೆ.ಕೆ.ಉಪ್ರೇತಿ, ಡಾ.ಶ್ರೀಧರ್‌ ಗುಟ್ಟಮ್‌ ಹಾಗೂ ದೇಶಾದ್ಯಂತ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next