Advertisement

ನ್ಯಾಶನಲ್‌ ಹೆರಾಲ್ಡ್‌ ಪ್ರಕರಣ: ಇ.ಡಿ. ಬಳಿ ಸಮಯ ಕೇಳಿದ ಸೋನಿಯಾ

01:07 AM Jun 08, 2022 | Team Udayavani |

ಹೊಸದಿಲ್ಲಿ: ನ್ಯಾಶನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಜೂ.8 ರಂದು ಜಾರಿ ನಿರ್ದೇಶನಾಲ ಯದ ಎದುರು ವಿಚಾರಣೆಗೆ ಹಾಜರಾಗ ಬೇಕಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ವಿಚಾರಣೆಗೆ ಹಾಜರಾಗಲು ಇನ್ನಷ್ಟು ಸಮಯ ವನ್ನು ಕೇಳಿದ್ದಾರೆ.

Advertisement

ಅವರಿಗೆ ಕಳೆದ ಗುರುವಾರ ಕೊರೊನಾ ಸೋಂಕು ದೃಢವಾಗಿದ್ದು, ಇನ್ನೂ ಅದರಿಂದ ಚೇತರಿಸಿ ಕೊಳ್ಳುವ ಹಂತದಲ್ಲಿರುವ ಹಿನ್ನೆಲೆ ಕಾಲಾವಕಾಶ ಕೇಳಿರುವುದಾಗಿ ಪಕ್ಷ ತಿಳಿಸಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ವರಿಗೆ ಇ.ಡಿ. ಜೂ. 2ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ ಆ ಸಮಯದಲ್ಲಿ ಅವರು ಭಾರತ ದಲ್ಲಿ ಇರದ ಹಿನ್ನೆಲೆ ಜೂ. 13ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next