Advertisement

ತಾರೆಯರಿಂದ ಕೈಮಗ್ಗ ಚಾಲೆಂಜ್‌ ಸ್ವೀಕಾರ

11:59 AM Aug 08, 2020 | mahesh |

ಹೊಸದಿಲ್ಲಿ: ಭಾರತೀಯ ಬ್ರ್ಯಾಂಡ್‌ಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೈಮಗ್ಗ ದಿನದ ನಿಮಿತ್ತ ಕೈಮಗ್ಗ ಸೀರೆ- ಉಡುಪು ಧರಿಸಿ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ನೀಡಿದ ಕರೆಯನ್ನು ದೇಶದ ಹಲವು ತಾರೆಯರು ಸ್ವೀಕರಿಸಿದ್ದಾರೆ.

Advertisement

ಕೈಮಗ್ಗ ಸೀರೆ- ಉಡುಪು ಧರಿಸಿ, ವೋಕಲ್ 4 ಹ್ಯಾಂಡ್‌ ಮೇಡ್‌ ಹ್ಯಾಷ್‌ಟ್ಯಾಗ್‌ ಸೃಷ್ಟಿಸಿ ಫೋಟೊಗಳನ್ನು ಹಂಚಿಕೊಳ್ಳುವಂತೆ ಸವಾಲು ಹಾಕಿದ್ದರು. ಈ ಸವಾಲನ್ನು ಬಾಲಿವುಡ್‌ ನಟಿಯರು ಸೇರಿದಂತೆ ಹಲವರು ಸ್ವೀಕರಿಸಿದ್ದಾರೆ. ಕಂಗನಾ ರಣಾವತ್‌, ವಿದ್ಯಾ ಬಾಲನ್‌, ಪ್ರಿಯಾಂಕಾ ಚೋಪ್ರಾ, ಝಾನ್ವಿ ಕಪೂರ್‌, ಶಕುಂತಲಾ ದೇವಿ ಸೇರಿದಂತೆ ಹಲವು ತಾರೆಗಳು ಕೈಮಗ್ಗದ ಉಡುಪು ಗಳನ್ನು ಧರಿಸಿ, ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ.

ಕಾಂಜೀವರಂನಲ್ಲಿ ವಿದ್ಯಾ: ಕಾಂಜೀ ವರಂ ಸೀರೆ ಧರಿಸಿ ಚಿತ್ರ ಹಂಚಿ ಕೊಂಡಿದ್ದ ವಿದ್ಯಾ ಬಾಲನ್‌, ಇಂಥ ಸಂದಿಗ್ಧ ಕಾಲ ದಲ್ಲಿ ದೇಶದ ಕೈಮಗ್ಗ ದಲ್ಲಿ ಸೀರೆ, ವಸ್ತ್ರ ತಯಾರಕರ ಕೈಹಿಡಿಯೋಣ. ಅವರು ಸಿದ್ಧಪಡಿ ಸಿದ ಸುಂದರ ಉಡುಪುಗಳನ್ನು ನಿತ್ಯದ ಜೀವನದಲ್ಲಿ ಧರಿಸೋಣ ಎಂದು ಕರೆಕೊಟ್ಟಿದ್ದಾರೆ.

ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಟ್ವಿಟರಿನಲ್ಲಿ ಆಚರಿಸಿ ದ್ದಾರೆ. ನಮ್ಮ ಹಿರಿಮೆಯ ಕೈಮಗ್ಗ ಮತ್ತು ಕರಕುಶಲ ರಂಗಕ್ಕೆ ಕೊಡುಗೆ ನೀಡುತ್ತಿ ರುವ ಎಲ್ಲರಿಗೂ ನನ್ನ ನಮನಗಳು. ನಮ್ಮ ದೇಶದ ಸ್ಥಳೀಯ ಕರಕುಶಲ ಉತ್ಪನ್ನಗಳನ್ನು ಸಂರಕ್ಷಿಸಲು ನೀವೆಲ್ಲ ಶ್ಲಾಘನೀಯ ಪ್ರಯತ್ನ ಮಾಡುತ್ತಿದ್ದೀರಿ ಎಂದು ಹೇಳಿರುವ ಪ್ರಧಾನಿ, ಕೈಯಿಂದ ತಯಾರಿಸಿದ ಉತ್ಪನ್ನಗಳಿಗೆ ಧ್ವನಿಯಾಗ ಬೇಕು ಎಂದು ಕರೆಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next