Advertisement

ಪಾರ್ವತಮ್ಮ ಅಂತಿಮ ಯಾತ್ರೆ ವೇಳೆ ರಾಷ್ಟ್ರಧ್ವಜ;ಆಕ್ಷೇಪಿಸಿ ಖಾಸಗಿ ದೂರು

04:28 PM Jun 02, 2017 | |

ಬೆಂಗಳೂರು: ಬುಧವಾರ ನಿಧನ ಹೊಂದಿದ ವರನಟ ದಿವಂಗತ ಡಾ.ರಾಜ್‌ಕುಮಾರ್‌ಅವರ ಪತ್ನಿ ಹಾಗೂ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ (78) ಅವರ ಪಾರ್ಥೀವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿರುವುನ್ನು ಆಕ್ಷೇಪಿಸಿ ಬೆಂಗಳೂರಿನ ವಕೀಲರೊಬ್ಬರು ನಗರದ 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶುಕ್ರವಾರ ಖಾಸಗಿ ದೂರು ಸಲ್ಲಿಸಿದ್ದಾರೆ.

Advertisement

ವಿಜಯನಗರದ ವಕೀಲ ಚೇತನ್‌ ರಾಷ್ಟ್ರಧ್ವಜ ನಿಯಮ 5 ರ ಉಲ್ಲಂಘನೆಯಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ ವಿರುದ್ಧ ದೂರು ಸಲ್ಲಿಸಿದ್ದಾರೆ. 

ಪಾರ್ವತಮ್ಮ ಅವರ ರಾಷ್ಟ್ರಧ್ವಜ ಹೊದಿಸಿದ್ದ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋ ಗೆ ಮೆರವಣಿಗೆಯಲ್ಲಿ  ಕೊಂಡೊಯ್ದು  ಡಾ.ರಾಜ್‌ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಈ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಹಲವರು ಪ್ರಶ್ನಿಸಿದ್ದರು. ಸರ್ಕಾರ ಚಿತ್ರರಂಗದ ಹಿರಿಯ ಸಾಧಕಿಗೆ ಗೌರವ ಕೊಟ್ಟಿರುವ ಬಗ್ಗೆ ನಮ್ಮ ಆಕ್ಷೇಪವಿಲ್ಲ .ಆದರೆ ರಾಷ್ಟ್ರ ಧ್ವಜ ಹೊದಿಸುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next