Advertisement

ರಾಷ್ಟ್ರಧ್ವಜ, ರಾಷ್ಟ್ರಗೀತೆ: ತರಬೇತಿ ಕಾರ್ಯಾಗಾರ ಉದ್ಘಾಟನೆ

07:00 AM Aug 22, 2017 | |

ಬೆಳ್ತಂಗಡಿ: ಯಂಗ್‌ ಚಾಲೆಂಜರ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಮುಂಡಾಜೆ ಪ. ಪೂ. ಕಾಲೇಜು ಮುಂಡಾಜೆ, ಎನ್‌ಎಸ್‌ಎಸ್‌ ಘಟಕ ಮುಂಡಾಜೆ, ಲಯನ್ಸ್‌ ಕ್ಲಬ್‌ ಬೆಳ್ತಂಗಡಿ ಮತ್ತು ರೋಟರಿಕ್ಲಬ್‌ ಬೆಳ್ತಂಗಡಿ, ಮಸ್‌ಲಕ್‌ ದಶಮಾನೋತ್ಸವ ಕಾರ್ಯಕ್ರಮಗಳ ಸಮಿತಿ ಇವರ ಸಹಕಾರದೊಂದಿಗೆ ಮುಂಡಾಜೆಯ ಕೀರ್ತಿಶೇಷ ಜಿ.ಎನ್‌. ಭಿಡೆ ಜನ್ಮ ಶತಮಾನೋತ್ಸವ ಸಭಾಂಗಣದಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.

Advertisement

ಭಾರತ್‌ ಸೇವಾದಲದ ರಾಜ್ಯ ತರಬೇತುದಾರ ಅಲೊ#àನ್ಸ್‌ ಫ್ರಾಂಕೋ, ಯೋಗಗುರು ಮತ್ತು ಭಾರತ್‌ ಸೇವಾದಲದ ಉಡುಪಿ ಜಿಲ್ಲಾ ಸಂಘಟಕ ಮಹೇಶ್‌ಎನ್‌. ಪತ್ತರ್‌ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನಡೆಸಿಕೊಟ್ಟರು.
ರಾಷ್ಟ್ರ ಧ್ವಜದ ವಿನ್ಯಾಸ, ವರ್ಣ, ಕಲ್ಪನೆಗಳು, ಹುಟ್ಟಿ ಬಂದ ರೀತಿ, ಬದಲಾವಣೆಗಳು ಆಗಿರುವ ಪರಿ, ಅದನ್ನು ಬಳಸುವ ವಿಧಾನ, ಇಳಿಸುವ ಮತ್ತು ಏರಿಸುವ ರೀತಿ, ಧ್ವಜವನ್ನು ಕಟ್ಟುವ ಬಗೆ, ಗೌರವ ನೀಡಬೇಕಾದ ಅಂಶ, ರಾಷ್ಟ್ರಗೀತೆ ಹಾಡುವ ಕ್ರಮ, ಧ್ವನಿಯ ಏರಿಳಿತಗಳು, ಹಾಡಬೇಕಾದ ಸೆಕುಂಡುಗಳು ಇತ್ಯಾದಿಯಾಗಿ ಪ್ರಾತ್ಯಕ್ಷಿಕೆ ,  ಚಿತ್ರ ಪ್ರದರ್ಶನದ ಮೂಲಕ ತರಬೇತಿಗಳನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಜಾಲಿ ಡಿ’ಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಯಂಗ್‌ ಚಾಲೆಂಜರ್ ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್‌ ಆಲಿಕುಂಞಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ಅಧ್ಯಕ್ಷ ಡಾ| ಸುಧೀರ್‌ ಪ್ರಭು, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ವಿಜಯ ಕುಮಾರ್‌, ಮಸ್‌ಲಕ್‌ ಕಾರ್ಯದರ್ಶಿ ಶಬೀರ್‌ ಬಿ.ಕೆ.ಎಚ್‌., ಯಂಗ್‌ ಚಾಲೆಂಜರ್ ಸಂಚಾಲಕ ನಾಮದೇವ ರಾವ್‌, ಗ್ರಾ. ಪಂ. ಸದಸ್ಯರಾದ ನಾರಾಯಣ ಗೌಡ, ಸುಮನಾ ಗೋಖಲೆ, ಅಶ್ವಿ‌ನಿ ಎ. ಹೆಬ್ಟಾರ್‌, ಸುರೇಶ್‌ ಹೆಗ್ಡೆ, ಯಂಗ್‌ ಚಾಲೆಂಜರ್ ಪದಾಧಿಕಾರಿಗಳಾದ ರಂಜಿನಿ, ವಿಜಯ ಕುಮಾರ್‌,  ಬಾಬು ಪೂಜಾರಿ ಕೂಳೂರು, ಅಬ್ದುಲ್‌ ಮಜೀದ್‌ ಭಾಗವಹಿಸಿದ್ದರು.

ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಅಗರಿ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು. ಉಪನ್ಯಾಸಕಿ ವಸಂತಿ ವಂದಿಸಿದರು. ಉಪನ್ಯಾಸಕ ವೃಂದ ಮತ್ತು ಸಮೂಹ ಸಂಘಟನೆಗಳು ಸಹಕಾರ ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next