Advertisement

ರಾಷ್ಟ್ರೀಯ ರೈತರ ದಿನ: ಶುಭ ಕೋರಿದ ಗಣ್ಯರು

12:41 PM Dec 23, 2021 | Team Udayavani |

ಬೆಂಗಳೂರು: ಇಂದು ರಾಷ್ಟ್ರೀಯ ರೈತರ ದಿನ. ಈ ಸಮಯದಲ್ಲಿ ರಾಜ್ಯದ ಗಣ್ಯರು ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಮತ್ತು ಅನ್ನದಾತ ರೈತರನ್ನು ನೆನದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ರೈತರ ದಿನದ ಮಹತ್ವದ ಬಗ್ಗೆ ಮಾತನಾಡಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದು, ಮಾಜಿ ಪ್ರಧಾನಿ ದಿ. ಚೌಧರಿ ಚರಣ್ ಸಿಂಗ್ ಅವರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಹೃತ್ಪೂರ್ವಕ ಶುಭಾಶಯಗಳು. ಅನ್ನದಾತ ರೈತನೇ ದೇಶದ ಬೆನ್ನೆಲುಬು. ಕೃಷಿಕರ ಬದುಕು ಹಸನಾದಾಗಲೇ ಸಮೃದ್ಧ ರಾಜ್ಯದ ಗುರಿ ನನಸಾಗುವುದು ಎಂದಿದ್ದಾರೆ.

ಇದನ್ನೂ ಓದಿ:ಮತಾಂತರ ಕಾಯಿದೆ : ಒಂದೇ ಕಲ್ಲಲ್ಲಿ ಎರಡು ಹಕ್ಕಿ‌ ಹೊಡೆಯುವ ಲೆಕ್ಕಾಚಾರ

Koo App

ಮಾಜಿ ಪ್ರಧಾನಿ ದಿ. ಚೌಧರಿ ಚರಣ್ ಸಿಂಗ್ ಅವರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಹೃತ್ಪೂರ್ವಕ ಶುಭಾಶಯಗಳು. ಅನ್ನದಾತ ರೈತನೇ ದೇಶದ ಬೆನ್ನೆಲುಬು. ಕೃಷಿಕರ ಬದುಕು ಹಸನಾದಾಗಲೇ ಸಮೃದ್ಧ ರಾಜ್ಯದ ಗುರಿ ನನಸಾಗುವುದು. #ಸಶಕ್ತರೈತಸದೃಢ_ಭಾರತ #kisandiwas2021

Advertisement

Basavaraj Bommai (@bsbommai) 23 Dec 2021

‘ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ‘ ಭಾರತದ ಮಾಜಿ ಪ್ರದಾನ ಮಂತ್ರಿ ಚೌದರಿ ಚರಣ್ ಸಿಂಗ್ ಅವರ ಜನ್ಮದಿನದ ಸಂಕೇತವಾಗಿ ಈ ದಿನವನ್ನು ರಾಷ್ಟ್ರೀಯ ‘ರೈತ ದಿನಾಚರಣೆ’ಯಾಗಿ ಆಚರಿಸಲಾಗುತ್ತದೆ. ರೈತ ಪರ ಪ್ರಪ್ರಥಮ ಬಿಲ್ ಅನ್ನು ಮಂಡಿಸುವ ಮೂಲಕ ಅನ್ನದಾತರ ಹಿತ ಕಾಯುವ ಕೆಲಸ ಅವರು ಮಾಡಿದ್ದರು.  ಭಾರತ ದೇಶವು ಕೃಷಿ ಆಧಾರಿತ ದೇಶ ಹಾಗೂ ಬೇಸಾಯ ಮನುಷ್ಯನ ಜೀವನಾಧಾರ ಎಂಬುದನ್ನು ಸದಾ ನೆನಪಿನಲ್ಲಿಡೋಣ. ಈ ನಿಟ್ಟಿನಲ್ಲಿ ಸರ್ಕಾರಗಳೂ ರೈತರ ಬೆನ್ನೆಲುಬಾಗಿ ನಿಂತು ಅರಿವು ಮೂಡಿಸಿದಾಗ ರೈತ ದಿನಾಚರಣೆ ಸಾರ್ಥಕವಾಗಲಿದೆ.  ಸಮಸ್ತ ಅನ್ನದಾತರಿಗೆ ‘ರೈತ ದಿನಾಚರಣೆ’ಯಂದು ನನ್ನ ಕೃತಜ್ಞತಾ ಪೂರ್ವಕ ನಮನಗಳು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ‘ಕೂ’ ಮಾಡಿದ್ದಾರೆ.

ನಾಡಿನ ಸಮಸ್ತ ರೈತಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು ಹಾಗೂ ನಮ್ಮ ರಾಷ್ಟ್ರದ ಕೃಷಿ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಚೌಧರಿ ಚರಣ್‌ ಸಿಂಗ್‌ ಅವರ ಜಯಂತಿಯಂದು ಆ ಮಹಾನ್‌ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next