Advertisement

Natasa Stankovic: ಹಾರ್ದಿಕ್‌ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ನತಾಶ

12:14 PM Jun 03, 2024 | Team Udayavani |

ಮುಂಬಯಿ: ಕಳೆದ ಕೆಲ ದಿನಗಳಿಂದ ಟೀಂ ಇಂಡಿಯಾ ಆಲ್‌ ರೌಂಡಲ್‌ ಹಾರ್ದಿಕ್‌ ಪಾಂಡ್ಯ ಹಾಗೂ ಅವರ ಪತ್ನಿ ನತಾಶ ನಡುವಿನ ವೈವಾಹಿಕ ಜೀವನದ ಬಗ್ಗೆ ನಾನಾ ಸುದ್ದಿಗಳು ಹರಿದಾಡಿತ್ತು. ಇಬ್ಬರು ಪರಸ್ಪರ ದೂರವಾಗಲಿದ್ದಾರೆ ಎನ್ನುವ ವಿಚಾರ ಎಲ್ಲೆಡೆ ಹಬ್ಬಿತ್ತು.

Advertisement

ನತಾಶಾ ಸ್ಟಾನ್ಕೊವಿಕ್ – ಹಾರ್ದಿಕ್‌ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಕಳೆದ 6 ತಿಂಗಳಿನಿಂದ ಇಬ್ಬರು ನಡುವಿನ ಮನಸ್ತಾಪ ಹೆಚ್ಚಾಗಿದ್ದು, ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನುವ ಊಹಾಪೋಹಾಗಳು ಎಲ್ಲೆಡೆ ಹರಿದಾಡಿದೆ.

ಡೇಟಿಂಗ್‌ ನಲ್ಲಿದ್ದ ಸಂದರ್ಭದಲ್ಲಿ ಹಾಗೂ ಮದುವೆ ಬಳಿಕ ಹಾರ್ದಿಕ್‌ – ನತಾಶಾ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದರು. ನತಾಶಾ ಹಾರ್ದಿಕ್‌ ಅವರ ಎಲ್ಲಾ ಹಳೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾ ಖಾತೆಯಿಂದೆ ತೆಗೆದು ಹಾಕಿದ್ದು ವಿಚ್ಚೇದನದ ವದಂತಿಗೆ ಪುಷ್ಟಿ ನೀಡಿತ್ತು.

ಇದೀಗ ಈ ಬಗ್ಗೆ ಲೇಟೆಸ್ಟ್‌ ವರದಿಯೊಂದು ಹೊರಬಿದ್ದಿದೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಿಂದ ಹಾರ್ದಿಕ್‌ ಜೊತೆಗಿನ ಫೋಟೋವನ್ನು ತೆಗೆದುಹಾಕಿದ್ದ ನತಾಶ ಇದೀಗ ಮತ್ತೆ ಹಾರ್ದಿಕ್‌ ಜೊತೆಗಿನ ಹಳೆಯ ಫೋಟೋಗಳನ್ನು ರೀಸ್ಟೋರ್‌ ಮಾಡಿರುವುದು ಅವರ ಇನ್ಸ್ಟಾಗ್ರಾಮ್‌ ಖಾತೆಯಿಂದ ಗೊತ್ತಾಗಿದೆ.

ಈ ಹಿಂದೆ ಮದುವೆ ಹಾಗೂ ಡೇಟಿಂಗ್‌ ಸಂದರ್ಭದಲ್ಲಿನ ಹಾರ್ದಿಕ್‌ ಜೊತೆಗಿನ ಫೋಟೋವನ್ನು ನತಾಶ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisement

ವಿಚ್ಚೇದನ ನೀಡುತ್ತಾರೆ ಎನ್ನುವ ವದಂತಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ತ್ನಿಯಿಂದ ವಿಚ್ಛೇದನ ಪಡೆದರೆ ಜೀವನಾಂಶದ ಕಾರಣದಿಂದಾಗಿ 70% ಆಸ್ತಿಯನ್ನು ಕಳೆದುಕೊಳ್ಳುತ್ತಾರೆ ಎನ್ನಲಾಗಿತ್ತು.

ಈ ಬಗ್ಗೆ ನತಾಶ ಆಗಲಿ ಹಾರ್ದಿಕ್‌ ಆಗಲಿ ಎಲ್ಲೂ ಕೂಡ ಇದುವರೆಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ.

ವಿಚ್ಚೇದನದ ವಿಚಾರ ಪಿಆರ್‌ ತಂಡ ಮಾಡಿದ ಪಬ್ಲಿಕ್‌ ಸ್ಟಂಟ್‌ ಎಂದು ಹೇಳಲಾಗಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಇನ್ನು ಕೂಡ ಯಾವ ಮಾಹಿತಿಯೂ ಹೊರಬಿದ್ದಿಲ್ಲ.

ಸದ್ಯ ಹಾರ್ದಿಕ್‌ ಟೀಂ ಇಂಡಿಯಾದ ವಿಶ್ವಕಪ್‌ ಟಿ-20 ತಂಡ ಉಪನಾಯಕನಾಗಿ ತಂಡದ ಜೊತೆ ಸೇರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next