Advertisement

Mangaluru ಹಿರಿಯ ರಂಗಕರ್ಮಿ ವಸಂತ ವಿ.ಅಮೀನ್‌ಗೆ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ

12:48 AM Aug 09, 2024 | Team Udayavani |

ಮಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಮಂಗಳೂರಿನ ವಸಂತ ವಿ.ಅಮೀನ್‌ ಆಯ್ಕೆಯಾಗಿದ್ದಾರೆ.

Advertisement

ನಿರಂತರ 56 ವರ್ಷಗಳಿಂದ ಕಲಾಕ್ಷೇತ್ರದಲ್ಲಿ ದುಡಿದಿರುವ ವಸಂತ ಅಮೀನ್‌ ಅವರು ಕಥೆ, ಕವನ ಹಾಗೂ ಸಾಮಾಜಿಕ, ಚಾರಿತ್ರಿಕ, ಐತಿಹಾಸಿಕ ಸಹಿತ 21 ನಾಟಕ ರಚನೆ ಮಾಡಿದ್ದಾರೆ. ತುಳು ನಾಟಕಕ್ಕೆ ಇಲ್ಲಿಯವರೆಗೆ 2 ಸಾವಿರಕ್ಕೂ ಅಧಿಕ ಸಾಹಿತ್ಯ ರಚಿಸಿದ್ದಾರೆ.

ಕಿಶೋರ್‌ ಡಿ. ಶೆಟ್ಟಿ ಅವರ “ಲಕುಮಿ’ ನಾಟಕ ತಂಡದ ಎಲ್ಲ ನಾಟಕಕ್ಕೆ ಸಾಹಿತ್ಯ ರಚಿಸಿರುವ ಅವರು, ಎಲ್ಲ ನಾಟಕದಲ್ಲಿ ಅಭಿನಯಿಸಿದ್ದಾರೆ.

“ಒರಿಯರ್ದೊರಿ ಅಸಲ್‌’ ಸಹಿತ ಕೆಲವು ನಾಟಕ ನಿರ್ದೇಶನ ಮಾಡಿದ್ದಾರೆ. ತುಳು ಚಲನಚಿತ್ರದ ತಾಂತ್ರಿಕ ವರ್ಗದಲ್ಲಿ ದುಡಿದಿದ್ದಾರೆ. 24 ಗಂಟೆಯಲ್ಲಿ ತಯಾರಾದ “ಸೆಪ್ಟಂಬರ್‌ 8′ ತುಳು ಸಿನೆಮಾದ ಸಂಭಾಷಣೆ, ಗೀತ ಸಾಹಿತ್ಯ ಬರೆದಿದ್ದಾರೆ.

“ಕಲಾಭಿಮಾನಿಗಳ ನಿರಂತರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಕಲಾರಂಗದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಎಲ್ಲರ ಸಹಕಾರದಿಂದ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಇದೀಗ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ’ ಎನ್ನುತ್ತಾರೆ ವಸಂತ ವಿ.ಅಮೀನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next