Advertisement

ಜಿಲ್ಲೆ ಅಭಿವೃದ್ದಿಗೆ ಶ್ರಮ ವಹಿಸಿ: ಸಿಇಒ ನಸೀಮ್‌

04:44 PM Apr 09, 2022 | Team Udayavani |

ಬೀದರ: ಆಡಳಿತ ಸಹಾಯಕ ಸಿಬ್ಬಂದಿ, ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರಿಗೆ ನರೇಗಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಜವಾಬ್ದಾರಿಗಳ ನಿರ್ವಹಣೆಯಲ್ಲಿ ನೆರವಾಗಲು ಪರಿಶೀಲನಾ ವರದಿಗಳ ತಯಾರಿಕೆ, ಪ್ರಗತಿ ವರದಿ ಸಿದ್ಧಪಡಿಸುವುದು, ಹೀಗೆ ಜಿಲ್ಲೆಯ ಅಭಿವೃದ್ಧಿಗಾಗಿ ತಾವೆಲ್ಲರೂ ಶ್ರಮವಹಿಸಬೇಕು ಎಂದು ಜಿಪಂ ಸಿಇಒ ಜಹೀರಾ ನಸೀಮ್‌ ಹೇಳಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಆಡಳಿತ ಸಹಾಯಕ ಸಿಬ್ಬಂದಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬಿಎಪ್ಟಿ, ಗ್ರಾಮ ಕಾಯಕ ಮಿತ್ರರಿಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆ ಮಾಡಬೇಕು. ನರೇಗಾ ಯೋಜನೆಗೆ ಸಂಬಂಧಿಸಿದ ಸಾಮಗ್ರಿಗಳ ಖರೀದಿ ಮತ್ತು ಸೇವೆಗಳಿಗೆ ಸಂಬಂಧಿಸಿದ ದಾಖಲೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ನರೇಗಾ ಯೋಜನೆಗಳಿಗೆ ಸಂಬಂಧಿಸಿದ ದಾಖಲಾತಿಗಳ ನಿರ್ವಹಣೆ ಜವಾಬ್ದಾರಿ ಪೂರ್ವಕವಾಗಿ ಮಾಡಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ ಮಾತನಾಡಿದರು. ಜಿಪಂ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಅಧಿಕಾರಿ ಬೀರೇಂದ್ರ ಸಿಂಗ್‌ ಠಾಕೂರ್‌ ಮಾತನಾಡಿ, ಸಿಬ್ಬಂದಿಗಳ ದಿನಚರಿ ಹಾಗೂ ಸರಿಯಾದ ಸಮಯದಲ್ಲಿ ಕೂಲಿ ಪಾವತಿ ಆಗಿದೆಯೇ ಇಲ್ಲವೆಂಬುದನ್ನು ಎಲ್ಲರೂ ಖಚಿತ ಪಡಿಸಿಕೊಳ್ಳಬೇಕು. ಯೋಜನೆ ಅನುಷ್ಠಾನ, ಸಾಮಾಜಿಕ ಪರಿಶೋಧನೆ, ಹೊರಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಣೆ ಸಂಬಂಧಿಸಿದ ಇಲಾಖೆಗಳಿಗೆ ಸಮನ್ವಯ ಸಾಧಿಸಬೇಕು ಎಂದರು.

ಜಿಪಂ ಎಡಿಪಿಸಿ ದೀಪಕ ಕಡಿಮನಿ ಹಾಗೂ ಡಿಎಂಐಎಸ್‌ ಕೋಮಲ ಕಿರಣ್‌ ಆಡಳಿತ ಸಹಾಯಕರಿಗೆ ತರಬೇತಿ ನೀಡಿದರು. ಈ ವೇಳೆ ಜಿಪಂ ಐಇಸಿ ಸಂಯೋಜಕ ಮರೆಪ್ಪ ಹರವಾಳಕರ್‌ ಸೇರಿದಂತೆ ಆಡಳಿತ ಸಹಾಯಕ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next