Advertisement
ಎರಡು ದಶಕಗಳಾಯಿತು..ಬಾಹ್ಯಾಕಾಶಕ್ಕೆ ಐಎಸ್‌ಎಸ್ ಅನ್ನು ಕಳುಹಿಸಿ ಆಗಲೇ ಎರಡು ದಶಕಗಳಾಗಿವೆ. ಇದು 1984ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದ ರೋನಾಲ್ಡ್ ರೇಗನ್ ಅವರ ಕನಸಿನ ಯೋಜನೆಯಾಗಿದ್ದು, 1998ರಿಂದ ಕಾರ್ಯಾರಂಭ ಮಾಡಿತು. ರಷ್ಯಾದ ರಾಕೆಟ್‌ವೊಂದರ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಸ್ತುವೊಂದನ್ನು ಕಳುಹಿಸಲಾಯಿತು. ಇದಾದ ಎರಡು ವಾರಗಳ ಬಳಿಕ ಅಮೆರಿಕದ ಎಂಡೋವರ್ ಸ್ಪೇಸ್ ಷಟಲ್ ಅನ್ನು ಐಎಸ್‌ಎಸ್‌ಗೆ ಜೋಡಣೆ ಮಾಡಲಾಯಿತು. ಎರಡು ವರ್ಷಗಳ ತರುವಾಯ ಬಾಹ್ಯಾಕಾಶ ನಿಲ್ದಾಣ ಸಂಪೂರ್ಣವಾಗಿ ತಯಾರಾಯಿತು.
2031ರ ಜನವರಿಗೆ ಬಾಹ್ಯಾಕಾಶ ನಿಲ್ದಾಣ ಭೂಮಿಗೆ ಬರಲಿದೆ. ಮೊದಲಿಗೆ ಮಿಷನ್ ಕಂಟ್ರೋಲ್ ಅನ್ನು ಕೆಳಗಿನ ಹಂತಕ್ಕೆ ತರಲಾಗುತ್ತದೆ. ದಕ್ಷಿಣ ಪೆಸಿಫಿಕ್‌ನ ಜನವಸತಿ ಇಲ್ಲದ ಪ್ರದೇಶದಲ್ಲಿ ಇಳಿಸಲಾಗುತ್ತದೆ. ಭೂಮಿಯ ವಾತಾವರಣದಲ್ಲಿ ಸುಡದಿರುವಂತೆಯೂ ನೋಡಿಕೊಳ್ಳಲಾಗುತ್ತದೆ.
Related Articles
ಹಾಲಿ ಇರುವ ಐಎಸ್‌ಎಸ್ ಅನ್ನು ವಾಪಸ್ ಕರೆಸಿಕೊಂಡ ಮೇಲೆ ಅದೇ ರೀತಿಯ ವಾಣಿಜ್ಯಾತ್ಮಕವಾಗಿ ಮಾಲಕತ್ವ ಹೊಂದಿದ ಮತ್ತು ನಿರ್ವಹಣೆ ಮಾಡುವ ಬಾಹ್ಯಾಕಾಶ ನಿಲ್ದಾಣವನ್ನು ಮಾಡಲಾಗುತ್ತದೆ. ಇದನ್ನು ಗಗನಯಾತ್ರೆ ಮಾಡುವ ದೇಶಗಳಿಗೆ ಬಾಡಿಗೆ ರೀತಿಯಲ್ಲೂ ನೀಡಲಾಗುತ್ತದೆ. ಇದರಿಂದಾಗಿ ನಾಸಾಗೆ 2031ರಲ್ಲೇ 1.3 ಬಿಲಿಯನ್ ಅಮೆರಿಕನ್ ಡಾಲರ್ ಉಳಿತಾಯವಾಗುತ್ತದೆ.
Advertisement