ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ), ತನ್ನ ಆ್ಯರಿಯನ್ ಬಾಹ್ಯಾಕಾಶ ನೌಕೆಯ ಮೂಲಕ 2023ರಲ್ಲಿ ಚಂದ್ರನ ಅಧ್ಯಯನಕ್ಕೆ ತೆರಳಲು ಉದ್ದೇಶಿಸಿದೆ.
ಅಲ್ಲಿಗೆ, ದಶಕಗಳ ನಂತರ ಚಂದ್ರನ ಅಧ್ಯಯನಕ್ಕೆ ವಿಜ್ಞಾನಿಗಳು ಖುದ್ದಾಗಿ ತೆರಳುವ ಪ್ರಕ್ರಿಯೆಗೆ ಪುನಃ ಚಾಲನೆ ಸಿಗಲಿದೆ. ಆ ಯೋಜನೆ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿ, ಪ್ರಸಾರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ, “ನ್ಯಾಷನಲ್ ಜಿಯಾಗ್ರಾಫಿಕ್’ ಜತೆಗೆ ನಾಸಾ ಒಪ್ಪಂದ ಮಾಡಿಕೊಂಡಿದೆ.
ಮುಂದಿನ ವರ್ಷಗಳಲ್ಲಿ ಗಗನಯಾತ್ರಿಗಳಾಗಬೇಕು ಎಂಬ ಉತ್ಸಾಹಿಗಳಿಗೆ ಈ ಸಾಕ್ಷ್ಯಚಿತ್ರದಿಂದ ಮಾರ್ಗದರ್ಶಿಯಾಗುವಂತೆ ಇರಬೇಕು ಎಂಬ ಆಶಯದೊಂದಿಗೆ ನಾಸಾ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಕ್ಷ್ಯಚಿತ್ರಕ್ಕೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಅಗತ್ಯ ಮಾಹಿತಿಗಳನ್ನು ನಾಸಾ ನೀಡಲಿದ್ದು, ಸಾಕ್ಷ್ಯಚಿತ್ರವನ್ನು ಸಾಮಾಜಿಕ ಜಾಲತಾಣ, ಮುದ್ರಣ, ವೆಬ್‌ಸೈಟ್, ಚಾನೆಲ್‌ಗಳಲ್ಲಿ ಪ್ರಸಾರ ಮಾಡುವಂತೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಜ್ ಯಾತ್ರೆಗೆ ಮತ್ತೆ ಚಾಲನೆ : ನೋಂದಣಿ ಪ್ರಕ್ರಿಯೆ ಆರಂಭ
ಅಂದಹಾಗೆ, ಈಗ ಯೋಜಿಸಿರುವಂತೆ, “ಆರ್ಟಿಮಸ್’ನ ಮೊದಲ ಭಾಗ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.