ನರಗುಂದ: ಲಿಂಗೈಕ್ಯರಾಗಿದ್ದ ತಾಲೂಕಿನ ಶಿರೋಳ ತೋಂಟದಾರ್ಯ ಮಠದ ಶ್ರೀ ಮನಿಪ್ರ ಗುರುಬಸವ ಮಹಾಸ್ವಾಮಿಗಳ ಅಂತ್ಯಕ್ರಿಯೆ ಗದಗ ತೋಂಟದಾರ್ಯ ಮಠದ ಡಾ|ಸಿದ್ಧರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬಸವ ತತ್ವದ ಪ್ರಕಾರ ವಚನ ಘೋಷಣೆದೊಂದಿಗೆ ನೆರವೇರಿತು.
ಬೆಳಗಾವಿ ಜಿಲ್ಲೆಯ ಚಿಂಚಣಿಯಿಂದ ರವಿವಾರ ರಾತ್ರಿ 9-30 ಸುಮಾರಿಗೆ ಶಿರೋಳ ಗ್ರಾಮದ ಆಗಮಿಸಿದ ಪೂಜ್ಯರ ಪಾರ್ಥಿವ ಶರೀರದ ಅಂತಿಮ ಯಾತ್ರೆ ತೆರೆದ ವಾಹನದಲ್ಲಿ ನೆರವೇರಿತು. ಈ ಮೊದಲೇ ನಿರ್ಮಿಸಲಾಗಿದ್ದ ಸಮಾಧಿಯಲ್ಲಿ ಅಂದು ತಡರಾತ್ರಿ 11-35 ರ ಸುಮಾರಿಗೆ ತೋಂಟದ ಜ.ಡಾ|ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸನ್ನಿಧಾನ ಹಾಗೂ ಹರ ಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು, ಸೊಂಡೂರ ಪ್ರಭು ಸ್ವಾಮಿಗಳು, ಹರ್ತಿಕೇರಿ ಶಾಂತಲಿಂಗ ದೇಶೀಕೇಂದ್ರ ಸ್ವಾಮಿಗಳು, ಆಡಿ ಸಿದ್ದೇಶ್ವರ ಸ್ವಾಮಿಗಳು, ಅವರಾದಿ ಶಿವಕುಮಾರ ಸ್ವಾಮಿಗಳು, ಬಾದಾಮಿ ಶಿವಪೂಜಾ ಶಿವಾಚಾರ್ಯರು, ಸಿಂಧನೂರ ಸಿದ್ಧಲಿಂಗ ಶಿವಾಚಾರ್ಯರು, ಗದಗ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮಿಗಳು, ಮುದಗಲ್ಲ ಮಹಾಂತ ಸ್ವಾಮಿಗಳು, ಕಿತ್ತಲಿ ಮಂಜುನಾಥ ಸ್ವಾಮಿಗಳು, ಬೆಂಡವಾಡ ಸೇರಿದಂತೆ ವಿವಿಧ ಪೂಜ್ಯರು ಪಾಲ್ಗೊಂಡಿದ್ದರು.
ಸಂಸದ ಪಿ.ಸಿ.ಗದ್ದಿಗೌಡ್ರ, ಮಾಜಿ ಶಾಸಕ ಬಿ.ಆರ್ .ಯಾವಗಲ್ಲ, ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಗದಗ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ಟಿ, ಸಾಹಿತಿ ಚಂದ್ರಶೇಖರ ವಸ್ತ್ರದ, ಚಿಂಚಣಿಯ ಬಾಬಾಸಾಹೇಬ ಪಾಟೀಲ, ಎಸ್. ಎಸ್.ಹರ್ಲಾಪೂರ, ನಾಗನಗೌಡ ತಿಮ್ಮನಗೌಡ್ರ ಸೇರಿದಂತೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಅಲ್ಲಮಪ್ರಭು ಸಂಸ್ಥಾನಮಠ ಮತ್ತು ಶಿರೋಳ ತೋಂಟದಾರ್ಯ ಮಠದ ಅಸಂಖ್ಯಾತ ಭಕ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಡಿ.2ರಂದು ಪುಣ್ಯತಿಥಿ: ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ತೋಂಟದ ಜಗದ್ಗುರು ಡಾ|ಸಿದ್ಧರಾಮ
ಮಹಾಸ್ವಾಮಿಗಳು, ಲಿಂಗೈಕ್ಯ ಪೂಜ್ಯರ ಪ್ರಥಮ ಪುಣ್ಯ ಸ್ಮರಣೆಯನ್ನು ಡಿ. 2ರಂದು ನೆರವೇರಿಸಲಾಗುವುದು. ರಾಜ್ಯದ ಮಠಾ ಧೀಶರು, ಜನಪ್ರತಿನಿಧಿಗಳು, ಶ್ರೀಮಠದ ಭಕ್ತರು ಪಾಲ್ಗೊಳ್ಳುವರು ಎಂದು ತಿಳಿಸಿದರು.