Advertisement
ಇದೇ 13ರಂದು ಈ ಆನ್‌ಲೈನ್ ಪೋರ್ಟಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಗಾಗಿ, 100 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾಸ್ಕರಾಚಾರ್ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಷನ್ಸ್ ಆ್ಯಂಡ್ ಜಿಯೋ- ಇನ್ಫಾರ್ಮೇಟಿಕ್ಸ್ ಸಂಸ್ಥೆಯ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಸಂಸ್ಥೆಯೇ ಅದನ್ನು ನಿರ್ವಹಿಸಲಿದೆ. ಪ್ರತಿಯೊಂದು ರಾಜ್ಯದ ಭೌಗೋಳಿಕ ವ್ಯಾಪ್ತಿಯ ಸಮಗ್ರ ಮಾಹಿತಿಯುಳ್ಳ, ಜಿಯೋಗ್ರಾಫಿಕ್ ಇನ್ಫಾರ್ಮೇಷನ್ ಸಿಸ್ಟಂ ತಂತ್ರಜ್ಞಾನದ ಮೂಲಕ ಇಡೀ ದೇಶದ ಭೌಗೋಳಿಕ ವಿಶೇಷತೆಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಎಲ್ಲಾ ರಾಜ್ಯಗಳೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
Related Articles
Advertisement
2020-21ರವರೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಯೋಜನೆಗ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಯೋಜನೆಗಳೊಂದಿಗೆ ಸಮ್ಮಿಳಿತಗೊಳಿಸಲಾಗಿದೆ. ಜೊತೆಗೆ, ಈ ಯೋಜನೆಗಳನ್ನು 2025ರೊಳಗೆ ಮುಗಿಸುವ ನಿಟ್ಟಿನಲ್ಲಿ ಕೇಂದ್ರದ 16 ಇಲಾಖೆಗಳಿಂದ ಸಹಾಯ ಮತ್ತು ಸಹಕಾರಗಳ ವಿವರಣೆಗಳೂ ಇಲ್ಲಿ ಲಭ್ಯವಾಗಲಿವೆ.
ಭಾಷಣದಲ್ಲಿ ಪ್ರಸ್ತಾಪಿಸಿದ್ದ ಮೋದಿಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಗತಿಶಕ್ತಿ ಯೋಜನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದರು. ರೈಲ್ವೆ, ರಸ್ತೆ ಮತ್ತು ಹೆದ್ದಾರಿ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ಇಂಧನ, ಟೆಲಿಕಾಂ, ಹಡಗು, ನಾಗರಿಕ ವಿಮಾನಯಾನ ಸೇರಿ 16 ಕೇಂದ್ರ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಪೋರ್ಟಲ್ ಕೆಲಸ ಮಾಡುತ್ತದೆ. ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುವ ಕೈಗಾರಿಕಾ ಪಾರ್ಕ್‌ಗಳನ್ನೂ ಈ ಪೋರ್ಟಲ್‌ನ ವ್ಯಾಪ್ತಿಗೆ ತರಲಾಗುತ್ತದೆ. ಎಲ್ಲಾ ರಾಜ್ಯ ಸರ್ಕಾರಗಳೂ ಈ ಯೋಜನೆಗೆ ಕೈ ಜೋಡಿಸುತ್ತವೆ ಎಂದು ವಿವರಿಸಿದ್ದರು.