Advertisement

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

01:19 PM Dec 20, 2024 | Team Udayavani |

ಹರಿಯಾಣ: ಭಾರತೀಯ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ಅವರು ಗುರುಗ್ರಾಮ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ(ಡಿ.20) ನಿಧನಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

Advertisement

ಶುಕ್ರವಾರ ತಮ್ಮ ನಿವಾಸದಲ್ಲೇ ಹೃದಯ ಸ್ತಂಭನದದಿಂದ ನಿಧನ ಹೊಂದಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಏಳು ಬಾರಿ ಶಾಸಕರಾಗಿರುವ ಚೌಟಾಲಾ ಅವರು ಡಿಸೆಂಬರ್ 1989 ರಲ್ಲಿ ಪ್ರಾರಂಭವಾಗಿ 1999 ರಿಂದ 2005 ರವರೆಗೆ ದಾಖಲೆಯ ನಾಲ್ಕು ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಭಾರತದ ಮಾಜಿ ಉಪ ಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರ ಓಂ ಪ್ರಕಾಶ್ ಚೌತಾಲಾ ಅವರು ಹರಿಯಾಣದ ಏಳನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಚೌಟಾಲಾ ಅವರು ನಾಲ್ಕು ವರ್ಷಗಳ ಕಾಲ ತಿಹಾರ್ ಜೈಲಿನಲ್ಲಿದ್ದರು.

Advertisement

ಈ ವರ್ಷದ ಅಕ್ಟೋಬರ್ 5 ರಂದು ನಡೆದ ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಓಂ ಪ್ರಕಾಶ್ ಚೌತಾಲಾ ಕೊನೆಯ ಬಾರಿಗೆ ಸಿರ್ಸಾದ ಚೌತಾಲಾ ಗ್ರಾಮದ ಮತಗಟ್ಟೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಚೌಟಾಲಾ ಅವರು ಇಬ್ಬರು ಪುತ್ರರಾದ ಅಭಯ್ ಸಿಂಗ್ ಚೌತಾಲಾ ಮತ್ತು ಅಜಯ್ ಸಿಂಗ್ ಚೌತಾಲಾ ಸೇರಿದಂತೆ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ: Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Advertisement

Udayavani is now on Telegram. Click here to join our channel and stay updated with the latest news.

Next