Advertisement
ಶನಿವಾರ ಮಾತನಾಡಿದ ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ, ‘ಅಮ್ಮ’ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಈಗ ‘ಅಮ್ಮ’ ಬದುಕಿಲ್ಲ. ‘ಅಮ್ಮನ’ ಅನುಪಸ್ಥಿತಿಯಲ್ಲಿ ಮೋದಿ ನಮ್ಮ ‘ತಂದೆ’. ಹಾಗಾಗಿ ಮೋದಿಯವರ ನಾಯಕತ್ವವನ್ನು ನಾವು ಒಪ್ಪುತ್ತೇವೆ ಎಂದರು.
ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಂಡಿವೆ. ತಮಿಳುನಾಡಿನ ಐದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಲಿದೆ.