Advertisement

ನರೇಗಲ್‌ ಪಪಂ: 22.68ಲಕ್ಷ ಉಳಿತಾಯ ಬಜೆಟ್‌

12:46 PM Mar 18, 2021 | Team Udayavani |

ಗಜೇಂದ್ರಗಡ: ತಾಲೂಕಿನ ನರೇಗಲ್‌ ಪಪಂನ 2021-22ನೇ ಸಾಲಿನ 22.68 ಲಕ್ಷ ವೆಚ್ಚದ ಉಳಿತಾಯ ಬಜೆಟ್‌ನ್ನುಪಪಂ ಅಧ್ಯಕ್ಷೆ ಅಕ್ಕಮ್ಮ ಮಣ್ಣೋಡ್ಡರ ಮಂಡಿಸಿದರು.

Advertisement

ತಾಲೂಕಿನ ನರೇಗಲ್‌ ಪಪಂ ಸಭಾಭವನದಲ್ಲಿ ನಡೆದ 2021-22ನೇಸಾಲಿನ ಬಜೆಟ್‌ ಮಂಡನೆ ಸಭೆಯಲ್ಲಿಬಜೆಟ್‌ ಪ್ರತಿ ಓದಿದ ಅವರು, ಎಸ್‌ಎಫ್‌ಸಿ ಮುಕ್ತನಿಧಿಯಿಂದ 31.24ಲಕ್ಷ, ಎಸ್‌ಎಫ್‌ಸಿ ಸಿಬ್ಬಂದಿ ವೇತನ82 ಲಕ್ಷ, ಎಸ್‌ಎಫ್‌ಸಿ ವಿದ್ಯುತ್‌ 98 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ1.50 ಕೋಟಿ, ಪಿಂಚಣಿ ಅನುದಾನ4 ಲಕ್ಷ, 15ನೇ ಕೇಂದ್ರ ಹಣಕಾಸುಆಯೋಗದ ಅನುದಾನ 1.34 ಕೋಟಿ,ಕುಡಿಯುವ ನೀರಿನ ಅನುದಾನ 15ಲಕ್ಷ, ರಾಜಸ್ವ ಆದಾಯದಿಂದ 1.34ಕೋಟಿ, ಅಸಾಧಾರಣ ಸ್ವೀಕೃತಿಯಿಂದ28.98 ಲಕ್ಷ, ನಲ್ಮ ಯೋಜನೆಯಡಿ, ಸ್ವತ್ಛಭಾರತ ಯೋಜನೆಯಡಿ 80 ಲಕ್ಷ ರೂ. ನಿರೀಕ್ಷಿಸಲಾಗಿದೆ.

ಕಾಯ್ದಿರಿಸಿದ ಅನುದಾನ: ಘನತ್ಯಾಜ್ಯ ನಿರ್ವಹಣೆಗೆ 44.50 ಲಕ್ಷ, ಬಿಸಿಎಂ ಹಾಸ್ಟೇಲ್‌ ಹಿಂಬದಿಯಲ್ಲಿ ಉದ್ಯಾನ ಅಭಿವೃದ್ಧಿಗೆ 17.80 ಲಕ್ಷ, ಸಾಯಿಬಾಬಗುಡಿ ಹತ್ತಿರ ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ 10.50 ಲಕ್ಷ, ನೀರು ಸರಬರಾಜು ಯೋಜನೆಗೆ 1.10 ಕೋಟಿ ಅನುದಾನ,ಬೀದಿ ದೀಪ ನಿರ್ವಹಣೆಗೆ 50.53 ಲಕ್ಷಅನುದಾನ ಕಾಯ್ದಿರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 7.71 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದ್ದು,ಒಟ್ಟಾರೆ ಪ್ರಸಕ್ತ ವರ್ಷದಲ್ಲಿ 22.68 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.

ನೂತನ ಸ್ಥಾಯಿ ಸಮಿತಿ ಚೇರ್‌ಮನ್‌ರಾಗಿ ಫಕೀರಪ್ಪ ಮಳ್ಳಿ ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ಪಪಂ ಸದಸ್ಯರು ನರೇಗಲ್‌ ಅಭಿವೃದ್ಧಿ ಬಗ್ಗೆ ಸಲಹೆನೀಡಿದರು. ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಮುಖ್ಯಾಧಿಕಾರಿಮಹೇಶ ನಿಡಶೇಶಿ, ಸದಸ್ಯರಾದಜ್ಯೋತಿ ಪಾಯಪ್ಪಗೌಡ್ರ, ದಾವುದಅಲಿಕುದರಿ, ರಾಚಯ್ಯ ಮಾಲಗಿತ್ತಿಮಠ,ವೀರಪ್ಪ ಜೋಗಿ, ಮಲಿಕಸಾಬ್‌ರೋಣದ, ಫಕೀರಪ್ಪ ಬಂಬ್ಲಾಪುರ,ಶ್ರೀಶೈಲಪ್ಪ ಬಂಡಿಹಾಳ, ವಿಶಾಲಾಕ್ಷಿಹೊಸಮನಿ, ವಿಜಯಲಕ್ಷ್ಮೀ ಚಲವಾದಿ,ಸುಮಿತ್ರಾ ಕಮಲಾಪುರ, ಮಂಜುಳಾಹುರುಳಿ, ಬಸೀರಾಬಾನು ನಧಾಪ್‌,ಮುತ್ತಪ್ಪ ನೂಲ್ಕಿ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next