Advertisement

ನರೇಗಾದಡಿ 69.38 ಲಕ್ಷ ಮಾನವ ದಿನ ಸೃಜನೆ

08:19 PM Feb 25, 2021 | Team Udayavani |

ತುಮಕೂರು: ನರೇಗಾ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ 10 ತಾಲೂಕುಗಳಿಂದ 2020-21ನೇ ಸಾಲಿನ ಜನವರಿ ಅಂತ್ಯದ ವೇಳೆಗೆ 69,38,341 ಮಾನವ ದಿನಗಳು ಸೃಜನೆಯಾಗಿವೆ ಎಂದು ಜಿಪಂ ಸಿಇಒ ಗಂಗಾಧರಸ್ವಾಮಿ ತಿಳಿಸಿದರು.

Advertisement

ನರೇಗಾ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ ನರೇಗಾ ಯೋಜನೆ  ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನರೇಗಾ ಯೋಜನೆಯಡಿ ಫ‌ಲಾನಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈಗಾಗಲೇ ಚಾಲನೆಯಲ್ಲಿರುವ ಕೃಷಿ ಹೊಂಡ, ಕಂದಕಬದು, ಕೃಷಿ ಅರಣ್ಯ, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ,ಏರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಜಾನುವಾರು, ಕೋಳಿ, ಕುರಿ,ಹಂದಿ ಶೆಡ್‌ ನಿರ್ಮಾಣ ಕಾಮಗಾರಿಗಳು ಅನುಷ್ಟಾನದಲ್ಲಿವೆ ಎಂದರು.

100 ದಿನಗಳ ಉದ್ಯೋಗ: ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (ಬರಪೀಡತ ಪ್ರದೇಶಗಳಲ್ಲಿ 150 ದಿನಗಳು) ಉದ್ಯೋಗ ಖಾತರಿ ನೀಡಲಾಗುತ್ತದೆ. ಎಲ್ಲದೇ, ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಪಾವತಿ (ದಿನಕ್ಕೆ 275ರೂ.) ಮಾಡಲಾಗುವುದು. ಉದ್ಯೋಗ ಚೀಟಿ ಇಲ್ಲದವರು ಹತ್ತಿರದ ಗ್ರಾಪಂ (ನಮೂನೆ-1ರಲ್ಲಿ) ಅರ್ಜಿ ಸಲ್ಲಿಸಿ ಉದ್ಯೋಗ ಚೀಟಿ ಪಡೆಯ ಬಹುದು ಎಂದು ಹೇಳಿದರು.

3,88,213 ಉದ್ಯೋಗ ಚೀಟಿ ವಿತರಣೆ: ಜಿಲ್ಲೆಯಲ್ಲಿ ಕಳೆದ 2019-20ನೇ ಸಾಲಿನಲ್ಲಿ ಒಟ್ಟು 38,8213 ಉದ್ಯೋಗ  ಚೀಟಿಗಳನ್ನು ಗ್ರಾಪಂ ವಾರು ವಿತರಿ ಸಲಾಗಿದೆ. ಇದರಲ್ಲಿ ಉದ್ಯೋಗ ಚೀಟಿ ಪಡೆದ ಪ.ಜಾತಿಯ 61,761, ಪ.ವರ್ಗದ 28,399 ಹಾಗೂ ಇತರೆ ವರ್ಗದ 2,98,042 ಸೇರಿದಂತೆ ಒಟ್ಟು 3,88,202 ಕುಟುಂಬಗಳು ನರೇಗಾ ಯೋಜ ನೆಯಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ 2.03.330 ಮಹಿಳಾ ಕಾರ್ಮಿಕರು ನರೇಗಾ ಯೋಜನೆ ಅನುಕೂಲ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

69,38,341 ಮಾನವ ದಿನಗಳ ಸೃಜನೆ: ಜಿಲ್ಲೆಯಾದ್ಯಂತ ಈ ಆರ್ಥಿಕ ವರ್ಷದಲ್ಲಿ 69,38, 341 ಮಾನವ ದಿನಗಳು ಸೃಜನೆಯಾಗಿ ನರೇಗಾ ಅನುಷ್ಠಾನದಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಬದು ನಿರ್ಮಾಣ ಮಾಸಾಚರಣೆ, ಬದು ಬೇಸಾಯ, ರೈತರ ಕ್ರಿಯಾ ಯೋಜನೆ, ತಾಂಡಾ ಗಳ ಸಮೀಕ್ಷೆ, ಮಹಿಳಾ  ಕಾಯಕೋತ್ಸವ ಅಭಿಯಾನ ಕಾರ್ಯಗಳನ್ನು ಹಮ್ಮಿಕೊಂಡಿದ್ದರಿಂದ ನರೇಗಾ ಯೋಜನೆಯಡಿ ಅಕುಶಲ ಕೂಲಿ ಕಾರ್ಮಿಕರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

Advertisement

ಕೃಷಿ ಆಧಾರಿತ ಕಾಮಗಾರಿಗೆ ಅವಕಾಶ: ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಬೋರ್‌ವೆಲ್‌ ಮರುಪೂರಣ, ಕೃಷಿ ಹೊಂಡ, ಅಜೋಲಾ ತೊಟ್ಟಿ, ಎರೆಹುಳು ತೊಟ್ಟಿ, ಸಾವಯವ ಗೊಬ್ಬರದ ತೊಟ್ಟಿ, ದನದ ಕೊಟ್ಟಿಗೆ, ಹಂದಿ, ಕೋಳಿ ಹಾಗೂ ರೇಷ್ಮೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳಿಂದ ಹಲವಾರು ಕೃಷಿ ಆಧಾರಿತ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಕೆಲಸ ಮಾಡುವ ಕುಟುಂಬ ಸದಸ್ಯರ ಖಾತೆಗೆ ಗರಿಷ್ಠ 100 ದಿನಗಳವರೆಗೆ ಹಣವನ್ನು ಪಾವತಿ ಮಾಡಲಾಗುವುದು. ಗೃಹ ನಿರ್ಮಾಣ ಕಾಮಗಾರಿಗಳಿಗೆ 90 ದಿನಗಳ ಕೂಲಿ ಹಣ ಪಡೆಯುವ ಅವಕಾಶವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next