Advertisement

ಅಂತಾರಾಷ್ಟ್ರೀಯ ಹಾಕಿಗೆ ಮತ್ತೆ ನರೀಂದರ್‌ ಬಾತ್ರಾ ಬಾಸ್‌

11:29 PM May 22, 2021 | Team Udayavani |

ಹೊಸದಿಲ್ಲಿ: ಭಾರತದ ನರೀಂದರ್‌ ಬಾತ್ರಾ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್ಐಎಚ್‌) ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

Advertisement

ವರ್ಚುವಲ್‌ ಚುನಾವಣೆಯಲ್ಲಿ ಅವರು ಬೆಲ್ಜಿಯಂ ಹಾಕಿ ಫೆಡರೇಶನ್‌ ಅಧ್ಯಕ್ಷ ಮಾರ್ಕ್‌ ಕೌಡ್ರನ್‌ ವಿರುದ್ಧ ಕೇವಲ 2 ಮತಗಳ ಜಯ ಸಾಧಿಸಿದರು. ಬಾತ್ರ 63 ಹಾಗೂ ಕೌಡ್ರನ್‌ 61 ಮತ ಪಡೆದರು. ಒಟ್ಟು 124 ಸದಸ್ಯ ರಾಷ್ಟ್ರಗಳು ಆನ್‌ಲೈನ್‌ ಚುನಾವಣೆಯಲ್ಲಿ ಪಾಲ್ಗೊಂಡಿದ್ದವು. 2024ರ ತನಕ ಬಾತ್ರಾ ಅಧಿಕಾರದಲ್ಲಿರುತ್ತಾರೆ.

ನರೀಂದರ್‌ ಬಾತ್ರಾ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಅಧ್ಯಕ್ಷರೂ ಆಗಿದ್ದಾರೆ. ಜತೆಗೆ ಅಂತಾ ರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಸದಸ್ಯರೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next