Advertisement

ನಾರಾಯಣ ಗುರುಗಳ ಸಂದೇಶ ಎಲ್ಲರಿಗೂ ಪ್ರೇರಣೆ

01:55 AM Dec 22, 2021 | Team Udayavani |

ಕಾಸರಗೋಡು: ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಶಾಲೆಗಳಾಗಿವೆ. ಶಿಕ್ಷಣದ ಮೂಲಕ ಸುಸಂಸ್ಕೃತರಾಗಬೇಕೆನ್ನುವ ಶ್ರೀ ನಾರಾಯಣ ಗುರುಗಳ ಸಂದೇಶ ಸರ್ವರಿಗೂ ಪ್ರೇರಣೆಯಾಗಬೇಕೆಂದು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಹೇಳಿದರು.

Advertisement

ಪೆರಿಯದ ತೇಜಸ್ವಿನಿ ಹಿಲ್‌ನಲ್ಲಿ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದ ಐದನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನಗೈದು ಅವರು ಮಾತನಾಡಿದರು.

ಕೇರಳ ಮಾದರಿ
ಸಾಕ್ಷರತೆ, ಶಿಕ್ಷಣ, ಮಹಿಳಾ ಜಾಗೃತಿಯಲ್ಲಿ ಇತರ ರಾಜ್ಯಗಳಿಗಿಂತ ಮುಂದೆ ಇರುವ ಕೇರಳವು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೇರಳ ಗವರ್ನರ್‌ ಆರಿಫ್‌ ಮುಹಮ್ಮದ್‌ ಖಾನ್‌, ರಾಜ್ಯ ಅಬಕಾರಿ ಸಚಿವ ಎಂ.ವಿ. ಗೋವಿಂದನ್‌ ಮಾಸ್ತರ್‌ ಉಪಸ್ಥಿತರಿದ್ದರು.

ರಿಜಿಸ್ಟ್ರಾರ್‌ ಡಾ| ಎನ್‌. ಸಂತೋಷ್‌ ಕುಮಾರ್‌, ಪರೀಕ್ಷಾ ಕಂಟ್ರೋಲರ್‌ ಡಾ| ಎಂ. ಮುರಳೀಧರನ್‌ ನಂಬ್ಯಾರ್‌ ಮೊದಲಾದವರು ಉಪಸ್ಥಿತರಿದ್ದರು. ವೈಸ್‌ ಚಾನ್ಸಲರ್‌ ಪ್ರೊ| ಕೆ.ಸಿ. ಬೈಜು ಸ್ವಾಗತಿಸಿದರು.

Advertisement

ಭವ್ಯ ಸ್ವಾಗತ
ಕಾರ್ಯಕ್ರಮಕ್ಕೆ ಮುನ್ನ ಹೆಲಿಪ್ಯಾಡ್‌ನ‌ಲ್ಲಿ ಬಂದಿಳಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಗವರ್ನರ್‌ ಆರಿಫ್‌ ಮುಹಮ್ಮದ್‌ ಖಾನ್‌, ಸಚಿವ ಎಂ.ವಿ. ಗೋವಿಂದನ್‌ ಮಾಸ್ಟರ್‌, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‌ ರಣ್‌ವೀರ್‌ ಚಂದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಬಿ. ರಾಜೀವ್‌ ಮೊದ ಲಾ ದ ವರು ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next