Advertisement
ಕರ್ನಾಟಕದ ಅಸ್ಮಿತೆಗೆ ಧಕ್ಕೆ ತಂದಿರುವ ಪರಿಷ್ಕೃತ ಪಠ್ಯವನ್ನು ಹಿಂದಕ್ಕೆ ಪಡೆಯಲು ಮೇಲಿಂದ ಮೇಲೆ ಗೌರವಾನ್ವಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ವಿನಂತಿಸಿದ್ದೇನೆ. ಆದರೆ ಅವರು ಯಾರದೋ ಒತ್ತಡದಿಂದ ಸುಮ್ಮನಿದ್ದಾರೆ ಎನಿಸುತ್ತಿದೆ. ಇನ್ನು ತಡಮಾಡುವುದು ಸರಿಯಲ್ಲ. ಕೂಡಲೇ ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.
Related Articles
Advertisement
ಮುಖ್ಯಮಂತ್ರಿಗಳು ಜನರ ಅಹವಾಲಿಗೆ ಕಿವಿಗೊಡಬೇಕು, ಪ್ರಜಾಪ್ರಭುತ್ವದಲ್ಲಿ ಜನರೇ ದೊರೆಗಳು. ಸಂವಿಧಾನೇತರ ಶಕ್ತಿಗಳು ಸರ್ಕಾರವನ್ನು ನಿಯಂತ್ರಿಸಬಾರದು. ನಾಡಿನಾದ್ಯಂತ ಪ್ರಜ್ಞಾವಂತ ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಅವರ ಧ್ವನಿಯನ್ನು ಸರ್ಕಾರ ಗುರುತಿಸಬೇಕು. ಮಾನ್ಯತೆ ನೀಡಬೇಕು ಎಂದಿದ್ದಾರೆ.
ಬಸವಣ್ಣ, ಅಲ್ಲಮಪ್ರಭು, ವಾಲ್ಮೀಕಿ, ಕನಕದಾಸ, ಪುರಂದರದಾಸ, ಶಂಕರಾಚಾರ್ಯ, ಶಿಶುನಾಳ ಶರೀಫ, ಕುವೆಂಪು ಮೊದಲುಗೊಂಡು ಕರ್ನಾಟಕದ ದಾರ್ಶನಿಕರು, ಸಂತರಿಗೆ ಪರಿಷ್ಕೃತ ಪಠ್ಯದಲ್ಲಿ ಅಪಮಾನಿಸಲಾಗಿದೆ. ಕನ್ನಡತನ, ಕನ್ನಡಾಭಿಮಾನಕ್ಕೆ ಕುತ್ತು ತರಲಾಗಿದೆ. ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.
ದೇಶ ಇಂದು ಹಲವಾರು ಬಗೆಯ ಸಂಕಟ, ಸಂಘರ್ಷಗಳಲ್ಲಿ ಬೆಂದುಹೋಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಸರ್ಕಾರ ನಮ್ಮ ನಾಡಿನಲ್ಲಿ ಹೊಸದೊಂದು ಸಂಘರ್ಷದ ವಾತಾವರಣವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಸರ್ಕಾರದ ಒಣಹಟ, ಪ್ರತಿಷ್ಠೆಗೆ ರಾಜ್ಯ ಬೇಯುವುದು ಬೇಡ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಸರ್ವ ಧರ್ಮ, ಜಾತಿ, ಸಮುದಾಯಗಳ ಜನರು ಅನ್ಯೋನ್ಯವಾಗಿ ಶಾಂತಿಯಿಂದ ಬದುಕುತ್ತಿದ್ದಾರೆ. ಅವರ ಸಮುದಾಯಗಳ ಮಹಾಮಹಿಮರಿಗೆ ಅಪಮಾನವೆಸಗುವ ಮೂಲಕ ಸಂಘರ್ಷದ ವಾತಾವರಣ ನಿರ್ಮಿಸಲಾಗಿದೆ. ಸರ್ಕಾರ ವಿವೇಕದಿಂದ ವರ್ತಿಸಿ ಪರಿಷ್ಕೃತ ಪಠ್ಯ ಹಿಂದಕ್ಕೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.