Advertisement

ನಾರಾವಿ : ಲಯನ್ಸ್‌ ಕ್ಲಬ್‌ ಪದಗ್ರಹಣ

08:05 AM Jul 27, 2017 | Team Udayavani |

ಬೆಳ್ತಂಗಡಿ: ಲಯನ್ಸ್‌ ಕ್ಲಬ್‌ ಸದಸ್ಯತನ ಎಂದರೆ ಕೇವಲ ಹೆಗ್ಗಳಿಕೆಗೆ ಅಲ್ಲ, ಸೇವೆಗಾಗಿ ಅರ್ಪಿಸಿಕೊಂಡ ಬಾಳು ಇರುವ ಸದಸ್ಯರನ್ನು ಹೊಂದಿದ ಅತಿ ಉನ್ನತ ಸಂಸ್ಥೆ ಇದು. ನಾರಾವಿ ಲಯನ್ಸ್‌ ಕ್ಲಬ್‌ ಈ ಹಿಂದೆ ಎಂಡೋಪೀಡಿತರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡದ್ದು ಶ್ಲಾಘನೀಯ ಎಂದು ಲಯನ್ಸ್‌  ಕ್ಲಬ್‌ ನಿಕಟಪೂರ್ವ ಸಿಇಪಿ ಸಮನ್ವಯಾಧಿಕಾರಿ ಡಾ| ಜೆ. ಆರ್‌. ಶೆಟ್ಟಿ ಹೇಳಿದರು. ಅವರು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ನಾರಾವಿ ಲಯನ್ಸ್‌ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

Advertisement

ಮುಖ್ಯ ಅತಿಥಿಗಳಾಗಿದ್ದ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತರು ಸೇವಾ ಪ್ರಕಲ್ಪಗಳ ಕಾರ್ಯಕ್ರಮ ಉದ್ಘಾಟಿಸಿದರು. ನಾರಾವಿ ಶ್ರೀ ಜಿನಚೈತ್ಯಾಲಯಗಳ ಆಡಳಿತ ಸಮಿತಿ ಅಧ್ಯಕ್ಷ ನಿರಂಜನ ಅಜ್ರಿ, ಲಯನ್ಸ್‌ ಕ್ಲಬ್‌ನ ಪ್ರವೀಣ್‌ ಕುಮಾರ್‌ ಇಂದ್ರ, ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ, ಲಯನ್ಸ್‌ ಗವರ್ನರ್‌ ಅವರ ಪ್ರಾಂತ್ಯ ಪ್ರತಿನಿಧಿ ಶಿವಪ್ರಸಾದ ಹೆಗ್ಡೆ, ವಲಯ 2ರ ಅಧ್ಯಕ್ಷ ವೆಂಕಟೇಶ ಎಂ., ವಲಯ ಅಧ್ಯಕ್ಷ ವಾಸು, ಅಳದಂಗಡಿ ಅಧ್ಯಕ್ಷ ವಿಜಯ ಕುಮಾರ್‌, ಬೆಳ್ತಂಗಡಿ ಅಧ್ಯಕ್ಷ ಧರಣೇಂದ್ರ ಜೈನ್‌, ಆಲಂಗಾರು ಅಧ್ಯಕ್ಷೆ ರೂಪಾ, ವೇಣೂರು ಅಧ್ಯಕ್ಷ ನಿತೇಶ್‌ ಎಸ್‌., ಗೀತಾ ಆರ್‌. ಶೆಟ್ಟಿ, ನಿರ್ಗಮನ ಕೋಶಾಧಿಕಾರಿ ಫಕೀರಬ್ಬ  ಮತ್ತಿತರರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ, ನ್ಯಾಯವಾದಿ ಮುರಳಿ ಬಿ. ಅವರಿಗೆ ಪ್ರವೀಣ್‌ ಇಂದ್ರ ಹಾಗೂ ನಿರ್ಗಮನ ಅಧ್ಯಕ್ಷ ಪ್ರೇಮ್‌ಕುಮಾರ್‌ ಹೊಸ್ಮಾರು ಅಧಿಕಾರದ ಸಂಕೇತವನ್ನು ಹಸ್ತಾಂತರಿಸಿದರು. ಈ ಸಂದರ್ಭ ಬಲಿಪ ನಾರಾಯಣ ಭಾಗವತರನ್ನು ಸಮ್ಮಾನಿಸಲಾಯಿತು. ಕೆ. ಶಶಿಕಾಂತ ಆರಿಗ, ಬಾಬು ಶೆಟ್ಟಿ ನಾರಾವಿ, ರಾಮಚಂದ್ರ ಭಟ್‌ ಅತಿಥಿಗಳನ್ನು ಪರಿಚಯಿಸಿದರು. ಧನಂಜಯ ಕುಮಾರ್‌ ಧ್ವಜವಂದನೆ ಮಾಡಿದರು. ನಿರ್ಗಮನ ಕಾರ್ಯದರ್ಶಿ ವಿಲಿಯಂ ಕೊಡ್ಡೆರೊ ವರದಿ ವಾಚನ ಮಾಡಿ, ನೂತನ ಕಾರ್ಯದರ್ಶಿ ಅಜಿತ್‌ ಕುಮಾರ್‌ ಕೊಕ್ರಾಡಿ  ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಕೆ. ಜಯರಾಜ ಕಾಡ ವಂದಿಸಿದರು. ಬಲಿಪ ನಾರಾಯಣ ಭಾಗವತರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಮದ್ದಳೆಯಲ್ಲಿ ಶಿತಿಕಂಠ ಭಟ್‌ ಸಹಕರಿಸಿದರು. ಇದನ್ನು ಮಂಜೇಶ್ವರ ಸತೀಶ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next