ಉಡುಪಿ: ಹಿರಿಯರು ಯಾವುದೇ ಫಲಾಪೇಕ್ಷೆಯಿಲ್ಲದೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಜಾತಿ ಮತ ಭೇದವಿಲ್ಲದೆ ಇಬ್ಬರು ಮಹನೀಯರಾದ ದಿ| ಪಿ. ವೆಂಕಟಕೃಷ್ಣ ರಾವ್, ದಿ| ಜನಾಬ್ ಆಲಿ ಸಾಹೇಬರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ನೂರು ವರುಷ ಪೂರೈಸುತ್ತಿದೆ. ಸಂಸ್ಥೆ ಸ್ಥಾಪಿಸಿದರ ಹಿಂದಿನ ಪರಿಶ್ರಮ ಬಹಳಷ್ಟಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಬಾಳಿ ಬೆಳಗಲಿ ಎಂದು ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಹೇಳಿದರು.
ಅ.27ರಂದು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಕೆಮ್ಮಣ್ಣು ಶತಾಭಿನಂದನಂ ಸಮಾರೋಪ ಸಂಭ್ರಮಾಚರಣೆಯ ಸಹಕಾರಿ ಜಾಥಾಕ್ಕೆ ಸಂಸ್ಥೆಯ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು. ಹಿರಿಯ ಸಹಕಾರಿ ಶಂಭು ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಟಿ. ಸತೀಶ್ ಶೆಟ್ಟಿ ಧ್ವಜಾರೋಹಣಗೈದರು.
ಸಹಕಾರಿ ಧ್ವಜ ಹಿಡಿದ ಮಕ್ಕಳು ಬ್ಯಾಂಡ್, ಡೋಳು, ಬಣ್ಣದ ಕೊಡೆಗಳು, ಪೂರ್ಣಕುಂಭ ಹಿಡಿದ ಮಹಿಳೆಯರು, ಕೊಂಬುವಾದ್ಯ ಚೆಂಡೆ ಭಜನಾ ತಂಡ, ಕಂಬಳದ ಕೋಣಗಳು, ವಿವಿಧ ವೇಷ ಭೂಷಣಗಳೊಂದಿಗೆ ಕೆಮ್ಮಣ್ಣು ಪೇಟೆಯ ಮೂಲಕ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದ ವರೆಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಕೋಳಿ, ನಾಯಿ, ದನ-ಕರು ಆಡು, ಕುರಿ, ಕೋಣ, ಹಳೆಯ ವಸ್ತುಗಳ ಸಂಗ್ರಾಹ ಇನ್ನಿತರ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಸ್ತು ಪ್ರದರ್ಶನ ನಡೆಯಿತು. ರಕ್ಷಿತಾ ತಂಡದವರಿಂದ ಯಕ್ಷನಾಟ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್‌ರವರಿಂದ ಸಂಗೀತ ರಸಮಂಜರಿ, ಕುದ್ರೋಳಿ ಗಣೇಶ್‌ರವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಿತು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್‌ಶೆಟ್ಟಿ ಇಂದ್ರಾಳಿ. ತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ರವೀಂದ್ರ, ಬಡಾನಿಡಿಯೂರು ಗ್ರಾ.ಪಂ ಅಧ್ಯಕ್ಷೆ ಯಶೋದಾ ಆಚಾರ್ಯ, ಉಪಾಧ್ಯಕ್ಷ ಬಿ.ಅಫ್ಜಲ್ ಸಾಹೇಬ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲ್ಯಾನ್, ನಿರ್ದೇಶಕರುಗಳಾದ ನಾರಾಯಣ ಎಸ್. ಬಂಗೇರ, ಟಿ. ಗೋಪಾಲಕೃಷ್ಣ ಹೆಗ್ಡೆ, ಹ್ಯೂಬರ್ಟ್ ಸಂತಾನ್ ಲೂವಿಸ್, ರಾಘವೇಂದ್ರ ಪ್ರಸಾದ್, ಉಮೇಶ್ ಅಮೀನ್, ಪುರುಷೋತ್ತಮ ಸಾಲ್ಯಾನ್, ಶ್ಯಾಮ ಎನ್., ಹರೀಶ್ ಶೆಟ್ಟಿ, , ಲೇನಿ ಫೆರ್ನಾಂಡಿಸ್, ಲತಾ ಪಿ.ರಾವ್, ಲಕ್ಷ್ಮೀ ಉಪಸ್ಥಿತದ್ದರು.