Advertisement

New Version Bus: ಕೆಎಸ್ಸಾರ್ಟಿಸಿ ಬಳಗಕ್ಕೆ 2.0 ಮಾದರಿಯ ಐರಾವತ

01:01 AM Oct 09, 2024 | Team Udayavani |

ಬೆಂಗಳೂರು: ಕೆಎಸ್ಸಾರ್ಟಿಸಿಯ ಐರಾವತ ಕ್ಲಬ್‌ಕ್ಲಾಸ್‌ 2.0 ಮಾದರಿಯ 20 ಬಸ್‌ಗಳನ್ನು ತಿಂಗಳ ಕೊನೆಯಲ್ಲಿ ಪರಿಚಯಿಸಲು ಮುಂದಾಗಿದ್ದು, ಅವುಗಳಲ್ಲಿ ಪ್ರಯಾಣಿಕರ ಸುರಕ್ಷೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಫೈರ್‌ ಅಲಾರ್ಮ್ ಮತ್ತು ಪ್ರೊಟೆಕ್ಷನ್‌ ಸಿಸ್ಟಮ್‌ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಹೆಚ್ಚಿನ ಸುರಕ್ಷೆ ಇರುತ್ತದೆ.

Advertisement

ಹೊಸಕೋಟೆ ಬಳಿಯ ವೋಲ್ವೋ ಬಸ್‌ ತಯಾರಿ ಕಾರ್ಖಾನೆಗೆ ಸೋಮವಾರ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ನಿಗಮದ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್‌ ಭೇಟಿ ನೀಡಿ, ಈ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಬಸ್‌ಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, 2.0 ಮಾದರಿಯ ಐರಾವತ ಬಸ್‌ಗಳು ಇದೀಗ ಇರುವ ವೋಲ್ವೋ ಬಸ್‌ಗಳಿಗೆ ಹೋಲಿಸಿದರೆ ಶೇ. 3.5ರಷ್ಟು ಉದ್ದ ಮತ್ತು ಶೇ. 5.6ರಷ್ಟು ಎತ್ತರ ಇವೆ. ಶೇ. 20ರಷ್ಟು ಹೆಚ್ಚಿನ ಲಗೇಜು ಇಡುವ ಸೌಲಭ್ಯವಿದೆ. ಅತಿ ಹೆಚ್ಚು ಲಗೇಜು ಸ್ಥಳಾವಕಾಶವಿರುವ ಮೊದಲ ಬಸ್‌ ಇದಾಗಿದೆ ಎಂದರು.

ಬಸ್‌ನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್‌ಗ್ಳಿದ್ದು, 30 ನಾಜೈಲ್‌ಗ‌ಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next