Advertisement

ಹಂಚಿಕೆಯಾದ ನೀರು ಸದ್ಬಳಕೆಗೆ ಒತ್ತಾಯ

04:13 PM Dec 22, 2018 | |

ನರಗುಂದ: ಮಹದಾಯಿ ನ್ಯಾಯಾಧಿಕರಣ ಹಂಚಿಕೆ ಮಾಡಿದ ನೀರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯತೆಯಿಂದ ಕೂಡಿಕೊಂಡು ರೈತರ ಸದ್ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಮಹದಾಯಿ ಹೋರಾಟಗಾರರು ಉಭಯ ಸರ್ಕಾರಗಳಿಗೆ ಆಗ್ರಹಿಸಿದ್ದಾರೆ. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಿರಂತರ ಸತ್ಯಾಗ್ರಹ ಅಂಗವಾಗಿ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ರೈತ ಸೇನಾ ಕರ್ನಾಟಕ ಮತ್ತು ಮಲಪ್ರಭಾ ಸಮನ್ವಯ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

Advertisement

ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹದಾಯಿ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿ ತೀರ್ಪು ಪ್ರಕಟಿಸಿ ಈಗಾಗಲೇ ನಾಲ್ಕು ತಿಂಗಳು ಗತಿಸಿದೆ. ಆದರೂ ಇನ್ನೂ ಹಂಚಿಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು. ನ್ಯಾಯಾಧಿಕರಣ ತೀರ್ಪಿನಂತೆ ಆರು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಈ ಹಂತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾತ್ರ ಮಹತ್ವದ್ದಾಗಿದೆ. ಎರಡೂ ಸರ್ಕಾರಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ನ್ಯಾಯಾ ಧಿಕರಣದಲ್ಲಿ ದೊರೆತ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಉಭಯ ಸರ್ಕಾರಗಳ ವಿರುದ್ಧ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದೇ ವೇಳೆ ಕಲಬುರಗಿ ದಯಾನಂದ ಪಾಟೀಲ ಸಂಘಟನೆಯ ಸದಸ್ಯತ್ವ ಪಡೆದುಕೊಂಡರು. ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಉಪಾಧ್ಯಕ್ಷ ರಮೇಶ ನಾಯ್ಕರ, ಕೋಶಾಧ್ಯಕ್ಷ ಫಕೀರಪ್ಪ ಜೋಗಣ್ಣವರ, ವಾಸು ಚವ್ಹಾಣ, ಪರಶುರಾಮ ಜಂಬಗಿ, ಲಕ್ಷ್ಮಣ ಮನೇನಕೊಪ್ಪ, ಹನಮಂತ ಕೋರಿ, ಹನುಮಂತ ಸರನಾಯ್ಕರ, ಅರ್ಜುನ ಮಾನೆ, ಸೋಮಲಿಂಗಪ್ಪ ಆಯಟ್ಟಿ, ವಿರೂಪಾಕ್ಷಪ್ಪ ಪಾರಣ್ಣವರ, ಕಲ್ಲಪ್ಪ ಮೊರಬದ, ಮಲ್ಲಪ್ಪ ಐನಾಪುರ, ಯಲ್ಲಪ್ಪ ಗುಡದರಿ, ವೆಂಕಪ್ಪ ಹುಜರತ್ತಿ, ಹನುಮಂತಪ್ಪ ಪಡೇಸೂರ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾವಿ, ಚನ್ನವ್ವ ಕರ್ಜಗಿ, ಮಾಬೂಬಿ ಕೆರೂರ, ಬಸಮ್ಮ ಐನಾಪುರ ಸೇರಿದಂತೆ ಅಚ್ಚುಕಟ್ಟು ಪ್ರದೇಶದ 9 ತಾಲೂಕುಗಳ ನೂರಾರು ರೈತರು, ರೈತ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next