Advertisement

ಕರವಸ್ತ್ರ ಪ್ರಕರಣಂ

06:00 AM Jan 19, 2018 | |

ನಮ್ಮ ದೈನಂದಿನ ಆವಶ್ಯಕತೆಗಳಲ್ಲಿ ಕರವಸ್ತ್ರವೂ ಒಂದು. ಕರವಸ್ತ್ರ ಅಥವಾ ಕೈಬಟ್ಟೆ ಒಂದು ನಾಲ್ಕೂ ಬದಿಯಲ್ಲಿ ಅಂಚುಳ್ಳ ಚೌಕವಾದ ತೆಳುಬಟ್ಟೆ. ಬೆವರೊರೆಸಲು, ಕಣ್ಣೀರೊರೆಸಲು, ಮೂಗೊರೆಸಲು, ಕೈಯೊರೆಸಲು, ಆಕ್ಸಿ ಬಂದಾಗ ಅಡ್ಡ ಹಿಡಿಯಲು, ಸೆಕೆಗೆ ಬೀಸಣಿಗೆಯಾಗಿ, ಬಸ್‌ ಹಾಗೂ ಟ್ರೇನ್‌ಗಳಲ್ಲಿ ಸೀಟುಗಳನ್ನು ಕಾದಿರಿಸಲು, ಹೆಲ್ಮೆಟ್‌ಧಾರಿಗಳ ತಲೆಗೆ ಒಳಉಡುಪಾಗಿ, ಮಕ್ಕಳಿಗೆ ಆಟದ ವಸ್ತುವಾಗಿ, ನೆಲಹಾಸಾಗಿ, ಗಾಯಕ್ಕೆ ಬ್ಯಾಂಡೇಜಾಗಿ, ತಲೆನೋವಿಗೆ ಪಟ್ಟಿಯಾಗಿ ಬಳಕೆಯಾಗುವ ಈ ಬಹೂಪಯೋಗಿ ಅಂಗೈಯಗಲದ ವಸ್ತ್ರ ನಮ್ಮ ದಿನಚರಿಯ ಒಂದು ಅವಿಭಾಜ್ಯ ವಸ್ತುವೆಂದರೆ ತಪ್ಪಾಗಲಾರದು. ಒಂದು ರೀತಿಯಲ್ಲಿ ಹೇಳುವುದಾದರೆ ಸ್ವತ್ಛತೆಯ ಉದ್ದೇಶದಿಂದ ಹಿಡಿದು ಎಲ್ಲಾ ವಿಧದಿಂದಲೂ ನಮಗೆ ರಕ್ಷಣೆ ನೀಡಬಲ್ಲ ಕಚೀìಫ್ ನಮ್ಮ ಏಕೈಕ ಗೆಳೆಯನೂ ಹೌದು, ಆಪ್ತರಕ್ಷಕನೂ ಹೌದು! 

Advertisement

ನಾವು ಮನೆಯಿಂದ ಹೊರಗೆ ಹೋಗುವಾಗ ಕಚೀìಪು ಒಯ್ಯಲು ಮರೆಯುವುದಿದೆ. ಎಷ್ಟೋ ಸಲ ಮದುವೆ, ಉಪನಯನ ಇಲ್ಲವೇ ಯಾವುದೇ ಸಮಾರಂಭಗಳಿಗೆ ತೆರಳಿದಾಗಲೂ ಅಲ್ಲಿ ಊಟ ಮಾಡಿ ಕೈತೊಳೆದು ಕೈ ಮತ್ತು ಮುಖ ಒರೆಸಿಕೊಳ್ಳಲು ಜೇಬಿನ ಕಿಸೆಗೆ ಕೈ ಹಾಕಿದರೆ ಕಚೀìಪು ಮಾಯ! ಒಂದೋ ಹೊರಡುವ ಗಡಿಬಿಡಿಯಲ್ಲಿ ಮರೆತಿರುತ್ತೇವೆ, ಇಲ್ಲವೇ ಕೆಲವೊಮ್ಮೆ ದಾರಿ ಮಧ್ಯೆ ಎಲ್ಲೋ ಕಳೆದುಕೊಂಡುಬಿಡುತ್ತೇವೆ. ಆಗೇನು ಮಾಡುವುದು? “ಅಯ್ಯೋ, ಕಚೀìಫ್ ಮರೆತೆನಲ್ಲ’ ಎಂದು ಪರಿತಪಿಸುವುದನ್ನು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ? ಶರ್ಟಿನ ತೋಳ್ಳೋ, ಸೆರಗಲ್ಲೋ ಒರೆಸಿಕೊಳ್ಳಲು ಮುಂದಾಗುತ್ತೇವೆ. ಯಾರಾದರೂ ನೋಡಿಬಿಟ್ಟರೆ ಎಂಬ ಭಯದೊಂದಿಗೇ ಒಮ್ಮೆ ಆಚೀಚೆ ಕಣ್ಣಾಡಿಸಿ ಯಾರಿಗೂ ಕಾಣದಂತೆ ಮುಖಮೂತಿ ತೀಡಿಕೊಂಡು ಬಿಡುತ್ತೇವೆ.

ಇಂತಹ ಒಂದು ಅನುಭವ ಎಲ್ಲರಿಗೂ ಒಂದಲ್ಲ ಒಂದು ಸಲ ಆಗಿಯೇ ಆಗಿರುತ್ತದೆ. ನಾವು ಎಷ್ಟೇ ಚೆನ್ನಾಗಿ ಡ್ರೆಸ್‌ ಮಾಡಿಕೊಂಡಿರಲಿ, ದುಬಾರಿ ಬೆಲೆಯ ಬಟ್ಟೆ ಧರಿಸಿರಲಿ, ನಮ್ಮ ಅಂಗೈಯಲ್ಲಿ ಕಚೀìಫ್ ಇಲ್ಲವೆಂದರೆ ಖಂಡಿತ ನಮ್ಮ ಪೆದ್ದುತನ ಎದ್ದು ತೋರುತ್ತದೆ. ನಮ್ಮ ವೈಯಕ್ತಿಕ ಸ್ವತ್ಛತೆಯ ಜೊತೆಗೆ ರಕ್ಷಣೆಗೂ ಬೇಕೆಂದು ಇಟ್ಟುಕೊಂಡ ಈ ಲಿಲ್ಲಿಪುಟ್ಟನಂತಹ ವಸ್ತ್ರ ನಮ್ಮ ಕೈಯಲ್ಲಿದ್ದರೆ ನಾವು ನೋಡುವವರ ಕಣ್ಣಿಗೂ  ನೀಟಾಗಿ, ಶಿಸ್ತಾಗಿ ಕಾಣಿಸುತ್ತೇವೆ. ಜತೆಗೆ ನಮ್ಮ ವ್ಯಕ್ತಿತ್ವಕ್ಕೂ ಒಂದು ಶೋಭೆ ಹಾಗೂ ಘನತೆಯನ್ನು ತಂದುಕೊಡುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಹಾಗಂದ ಮಾತ್ರಕ್ಕೆ ಇಡೀ ದಿನ ಅದನ್ನು ಕೈಯಲ್ಲೇ ಹಿಡಿದುಕೊಳ್ಳಬೇಕೆಂದಿಲ್ಲ, ಜೇಬು, ಪರ್ಸು ಇಲ್ಲವೇ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟು ಅಗತ್ಯಬಿದ್ದಾಗ ಹೊರತೆಗೆದು ಉಪಯೋಗಿಸಬಹುದು.

ಹಿಂದೆ ಕರ್ಚಿಫ್ ಅಥವಾ ಕರವಸ್ತ್ರ ಹಿಡಿದುಕೊಳ್ಳುವುದು ಶೋಭೆಯಲ್ಲ ಎಂಬ ಗ್ರಹಿಕೆ ಇತ್ತು. ಪೇಟೆಗೆ ಹೋಗುವಾಗ, ಶಾಲೆೆಗೆ, ಉದ್ಯೋಗಕ್ಕೆ ಹೋಗುವಾಗ ಬರಿಗೈಯಲ್ಲೇ ಎಲ್ಲರೂ ಸಾಗುತ್ತಿದ್ದರು. ಕಚೀìಪು ಕೈಯಲ್ಲಿ ಹಿಡಿಯುವ ಕ್ರಮ ಇದ್ದದ್ದು ಎಂದರೆ ಎಲ್ಲಿಯಾದರೂ ನೆಂಟರ ಮನೆಗೆ ಹೋಗುವಾಗ, ಮದುವೆಯಂತಹ ಸಮಾರಂಭಗಳಿಗೆ ಹೋಗುವಾಗಲೋ ಮಾತ್ರ. ಕಚೀìಫ್ನ ಹಿಡಿಯುವ ಆಶೆಯಿದ್ದರೂ, ಈಗಿನ ಹಾಗೆ ಆಗ ಬಣ್ಣಬಣ್ಣದ ಕಚೀìಫ‌ುಗಳು ಎಲ್ಲಿದ್ದವು? ಹಳೆಯ ಪಂಚೆ ಇಲ್ಲವೇ ಸೀರೆಯ ಸೆರಗಿನ ಅಂಚನ್ನು ಚೌಕಾಕಾರವಾಗಿ ಹರಿದು ಕರವಸ್ತ್ರ ಮಾಡಿಕೊಂಡುಬಿಡುತ್ತಿದ್ದರು.
ಈಗ ಬಹುತೇಕ ಮಂದಿ ವಾಹನಗಳಲ್ಲಿ ಓಡಾಡುವವರು. ಹವಾನಿಯಂತ್ರಿತ ಕಾರು, ಹವಾನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡುವವರು. ಹಾಗಾಗಿ ಕಚೀìಫ್ನ ಅಗತ್ಯ ಕಡಿಮೆ. ಆದರೆ ನಡೆದಾಡುವವರು, ಬಸ್‌ನಲ್ಲಿ ಓಡಾಡುವವರು, ಏಸಿಯಿಲ್ಲದ ಪರಿಸರದಲ್ಲಿ ಕೆಲಸ ಮಾಡುವವರಿಗೆಲ್ಲ ಕಚೀìಫ್ ಬೇಕೇ ಬೇಕು. ತೀರಾ ಬೆವರುವ ಸೆಕೆಯ ದಿನಗಳಲ್ಲಂತೂ ಇದರ ಅಗತ್ಯ ತುಸು ಹೆಚ್ಚೆ ಇರುತ್ತದೆ. ತುಂಬಾ ಶೀತವಾಗಿ ಸೊರ ಸೊರ ಸುರಿಯುವ ಮೂಗನ್ನು ಒರೆಸಿಕೊಳ್ಳಲು ಕೈಯಲ್ಲಿ ಕಚೀìಫ್ ಇಲ್ಲದಿದ್ದರೂ ಅವಸ್ಥೆ ಹೇಳತೀರದು! ಶಾಲೆಗೆ ಹೋಗುವ ಪುಟ್ಟ ಮಕ್ಕಳ ಸುರಿಯುವ ಮೂಗನ್ನು ಒರೆಸಲು, ಹೆಣ್ಣುಮಕ್ಕಳಿಗೂ ಇದರ ಆವಶ್ಯಕತೆ ಇದ್ದೇ ಇದೆ. 

ಕೆಲವೊಮ್ಮೆ ನಾವು ಸೀರೆ ಖರೀದಿಗೆ ಹೋದಾಗ ಸೀರೆಯೊಂದಿಗೆ ಕಚೀìಫ‌ನ್ನು ಅಂಗಡಿಯವರು ಫ್ರೀಯಾಗಿ ಕೊಡುತ್ತಾರೆ. ನಾವು ಯಾರಿಗಾದರೂ ಸೀರೆಯನ್ನು ಉಡುಗೊರೆಯಾಗಿ ಕೊಡುವಾಗಲೂ ಕಚೀìಪ್‌ ಇಟ್ಟು ಕೊಡುವ ವಾಡಿಕೆಯಿದೆ.
ಮರೆಯುವ ಮತ್ತು ಕಳೆದುಕೊಳ್ಳುವ ಅಭ್ಯಾಸ ಶಾಲೆ-ಕಾಲೇಜು, ಆಫೀಸು, ಅಂಗಡಿ, ದೇವಸ್ಥಾನ, ಮದುವೆ- ಹೀಗೆ ಹೊರಗೆ ಹೋದಲೆಲ್ಲ ಕಚೀìಫ‌ನ್ನು ಕಳೆದುಕೊಳ್ಳುವವರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಕೆಲವೊಮ್ಮೆ ಸುಮ್ಮನೆ ಕುಳಿತು ಇತರರೊಂದಿಗೆ ಕುಶಲೋಪರಿ ಮಾತನಾಡುತ್ತ ಮೈಮರೆತಾಗಲೂ ಕಚೀìಫ್ ಕೈಯಿಂದ ಬಿದ್ದದ್ದು ಗೊತ್ತಾಗುವುದೇ ಇಲ್ಲ. ಇನ್ನು ಕೆಲವೊಮ್ಮೆ ಪ್ರಯಾಣ ಮಾಡುವಾಗ, ನಡೆದುಕೊಂಡು ಹೋಗುವಾಗ ಕಚೀìಫ್ ಕೈಯಿಂದ ಬಿದ್ದುಹೋಗಿಬಿಡುತ್ತದೆ. ಹಾಗಂತ ಕಚೀìಫ‌ನ್ನು ಬಿಡಲೂ ಸಾಧ್ಯವಿಲ್ಲ. ಆಗಾಗ ಕಚೀìಪು ಕಳೆದುಕೊಳ್ಳುವ ವಿಚಾರಕ್ಕೆ ಮಕ್ಕಳು ಅವರ ಅಮ್ಮಂದಿರಿಂದ, ಗಂಡಂದಿರು ತಮ್ಮ ಹೆಂಡತಿಯರಿಂದ ಬೈಸಿಕೊಳ್ಳುವುದು ಸಹ ಇದೆ. ಮೊಬೈಲ್‌, ಪರ್ಸ್‌ ಮರೆತರೆ ನಾವು ಗೆಳೆಯರು, ಸಹೋದ್ಯೋಗಿಗಳಿಂದ ಕೇಳಿ ಪಡೆಯಬಹುದು. ಆದರೆ ಕಚೀìಫ್ ಮರೆತರೆ?

Advertisement

ಕಚೀಫ್ಗಳಲ್ಲೂ ನಮೂನೆಯ ಕಚೀìಫ್ಗಳಿವೆ. ಪ್ಲೆ„ನ್‌, ಗೆರೆಗೆರೆ, ಪ್ರಿಂಟೆಡ್‌ ಹೀಗೆ ಹಲವಾರು ವಿನ್ಯಾಸಗಳಿವೆ. ಬಗೆಬಗೆಯ ಚಿತ್ರಗಳು, ಹೂಗಿಡ ಮರಬಳ್ಳಿಗಳು, ಪ್ರಾಣಿಪಕ್ಷಿಗಳು ಮೊದಲಾದ ಆಕೃತಿಗಳನ್ನೊಳಗೊಂಡ ನಾನಾ ಬಗೆಯ, ನಾನಾ ಬಣ್ಣಗಳ ಚಿತ್ರ-ವಿಚಿತ್ರ ವಿನ್ಯಾಸಗಳಲ್ಲೂ ಕಚೀìಫ‌ುಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಕ್ಕಳಿಗಾಗಿ ಚಿಕ್ಕದಾದ, ಮೃದುವಾದ ಟರ್ಕಿ ಬಟ್ಟೆಯ ಕಚೀìಫ‌ುಗಳು, ಹೆಣ್ಣು ಮಕ್ಕಳಿಗೆ ನಾಜೂಕಾದ ಬಣ್ಣಬಣ್ಣದ ಹೂಹೂ ವಿನ್ಯಾಸದವು, ಗಂಡುಮಕ್ಕಳಿಗೆ ಪ್ಲೆ„ನ್‌ನವು ಹೆಚ್ಚು ಸೂಕ್ತ. ಅಲ್ಲದೆ ಬೇರೆ ಬೇರೆ ಮೆಟೀರಿಯಲ್‌ನಲ್ಲೂ ದೊರೆಯುತ್ತವೆ. ಪ್ಲೆ„ನ್‌ನಲ್ಲಿ ಬಿಳಿ ಮತ್ತು ನಸು ಹಳದಿ ಕಚೀìಫ್ಗಳಿಗೆ ಬೇಡಿಕೆ ಹೆಚ್ಚು.
 
ಇನ್ನು ಕಚೀìಫ‌ುಗಳೂ ಹಳತಾದರೂ ಉಪಯೋಗಕ್ಕೆ ಬರುತ್ತವೆ. ಹೆಣ್ಣು ಮಕ್ಕಳ ಕಚೀìಫ‌ುಗಳು ಹೆಚ್ಚು ಆಕರ್ಷಕವಾಗಿರುವುದರಿಂದ ಅವುಗಳನ್ನು ಬೇಕಾದಂತೆ ಹೊಲಿದು ಮಗುವಿನ ಗೊಂಬೆಗೆ ಅಂದದ ಬಟ್ಟೆಗಳನ್ನು ಸಿದ್ಧಪಡಿಸಿಕೊಳ್ಳಬಹುದು, ಕರವಸ್ತ್ರಗಳನ್ನು ಒಂದಕ್ಕೊಂದು ಹೊಲಿದು ಆಕರ್ಷಕ ತಲೆದಿಂಬು ತಯಾರಿಸಬಹುದು, ನಾಲ್ಕೂ ಬದಿಯಲ್ಲಿ ಮಡಚಿ ಸಣ್ಣದಾದ ಪರ್ಸ್‌ ತಯಾರಿಸಿಕೊಳ್ಳಬಹುದು. ಹಳೆಯ ಪರಸ್ಪರ ಹೊಲಿದು ಕಿಟಕಿಗೆ ಕರ್ಟನ್‌ನಂತೆಯೂ ಬಳಸಬಹುದು.

ಕಚೀìಫ‌ನ್ನು ಬಳಸುವಾಗ ನಾವು ಕೆಲವು ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಾವಶ್ಯಕ.
.ಪ್ರತಿದಿನ ಒಗೆದು ಶುಭ್ರಗೊಳಿಸಿದ ಕಚೀìಫ‌ವನ್ನೇ ಉಪಯೋಗಿಸಬೇಕು.
.ನಾವು ಬಳಸುವ ಕರವಸ್ತ್ರಗಳು ಬೆವರನ್ನು , ನೀರನ್ನು ಹೀರುವಂತಿರಬೇಕು. ಹತ್ತಿ ಬಟ್ಟೆಯಲ್ಲದೆ ಬೇರಾವುದನ್ನೂ ಕರವಸ್ತ್ರವನ್ನಾಗಿ ಬಳಸಬಾರದು, ಕರವಸ್ತ್ರ  ದೊರಗಾಗಿರಬಾರದು.
.ಕಚೀìಫ‌ನ್ನು ಒಟ್ಟಾರೆ ಮುದ್ದೆ ಮುದ್ದೆ ಮಾಡಿ ಹಿಡಿಯದೆ ಫೋಲ್ಡ್‌ ಮಾಡಿ ಹಿಡಿದುಕೊಂಡರೆ ನೀಟಾಗಿ ಕಾಣಿಸುತ್ತದೆ. ಜೇಬಿನಲ್ಲಿ ಇಟ್ಟುಕೊಳ್ಳುವಾಗಲೂ ನೀಟಾಗಿ ಮಡಚಿ ಇಟ್ಟುಕೊಳ್ಳಬೇಕು.
.ಕೆಲವರು ಇಡೀ ಕೈವಸ್ತ್ರವನ್ನು ಬಿಚ್ಚಿ ಮುಖ ಕೈಗಳಿಗೆ ಉಜ್ಜಿಕೊಳ್ಳುತ್ತಾರೆ. ಇದರಿಂದ ಒಂದೆಡೆಯ ಕೊಳೆ ಇನ್ನೊಂದು ಕಡೆಗೆ ಅಂಟಿ ಕಿರಿಕಿರಿ ಆಗುವುದೇ ಹೆಚ್ಚು. ಕಚೀìಫ್ನ್ನು ಮಡಚಿದ ಸ್ಥಿತಿಯಲ್ಲಿ ಮುಖಕ್ಕೆ ಒತ್ತಿಕೊಳ್ಳಬೇಕೇ ಹೊರತು ಇಡೀ ಕಚೀìಫ‌ನ್ನು ಮುಖಕ್ಕೆ ಉಜ್ಜುವುದು ಸರಿಯಲ್ಲ.
.ನಮ್ಮಲ್ಲಿ ಕಚೀìಫ್ ಇಲ್ಲದಿದ್ದರೆ ಎಂದೂ ಇತರ‌ರ ಕಚೀìಫ‌ನ್ನು ಪಡೆಯಬಾರದು. ಹಾಗೆ ಬೇರೆಯವರಿಗೆ ನಮ್ಮ ಕರವಸ್ತ್ರವನ್ನು ನೀಡಬಾರದು.

– ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next