Advertisement
ಇದರ ನಡುವೆಯೇ, ಸಂಶೋಧಕರ ತಂಡವೊಂದು ಈ ವೈರಸ್ ಅನ್ನೇ ಮೋಸದ ಬಲೆಗೆ ಬೀಳಿಸಿ ಕೊಲ್ಲುವಂಥ ವಿಧಾನವನ್ನು ಪತ್ತೆಹಚ್ಚಿದೆ.
Related Articles
Advertisement
ಏನಿದು ಡೆಕಾಯ್ ಟೆಕ್ನಿಕ್?: ಡೆಕಾಯ್ ಎಂದರೆ ಬಲೆಗೆ ಬೀಳಿಸುವುದು ಎಂದರ್ಥ. ಇಲ್ಲಿ ಮೊದಲಿಗೆ ಅತಿ ಸೂಕ್ಷ್ಮವಾದ ಜೈವಿಕ-ಸ್ನೇಹಿ ಪಾಲಿಮರ್ ಅನ್ನು ಸೃಷ್ಟಿಸಲಾಗುತ್ತದೆ. ನಂತರ ಅದನ್ನು ಶ್ವಾಸಕೋಶದ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಸಕ್ರಿಯ ಅಂಗಾಂಶದ ಕೋಶಗಳಿಂದ ಕವರ್ ಮಾಡಲಾಗುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ಸಂಬಂಧಿಯಿಂದ ಅತ್ಯಾಚಾರ ಯತ್ನ: ಧೃತಿಗೆಡದೆ ಪರೀಕ್ಷೆ ಬರೆದ ದಿಟ್ಟೆ
ಹೀಗಾಗಿ, ಹೊರಗಿನಿಂದ ನೋಡುವಾಗ ಈ ಪಾಲಿಮರ್‌ಗಳು (ನ್ಯಾನೋ ಕಣಗಳು) ಮಾನವನ ದೇಹದಲ್ಲಿನ ಸಕ್ರಿಯ ಜೀವಕೋಶದಂತೆಯೇ ಕಾಣುತ್ತದೆ. ಕೋವಿಡ್ 19 ವೈರಸ್ ಯಾಮಾರುವುದೇ ಇಲ್ಲಿ. ಮನುಷ್ಯದ ದೇಹದೊಳಗಿರುವ ಈ ಪಾಲಿಮರ್ ಅನ್ನು ನೈಜ ಜೀವಕೋಶವೆಂದೇ ಭಾವಿಸಿ, ಆ ಕೋಶದೊಳಗೆ ಕೊರೊನಾವೈರಸ್ ದಾಳಿಯಿಡುತ್ತದೆ. ಒಂದು ಬಾರಿ ಕೋಶದೊಳಗೆ ವೈರಸ್ ಹೊಕ್ಕಿತೆಂದರೆ ಅದು ಟ್ರ್ಯಾಪ್ ಆಯಿತು ಎಂದೇ ಅರ್ಥ.
ಜೀವಕೋಶದೊಳಗೆ ಏನಾಗುತ್ತದೆ?: ಸಾಮಾನ್ಯವಾಗಿ ಸೋಂಕು ಉಂಟಾದಾಗ ವೈರಸ್ ಮಾನವನ ಜೀವಕೋಶದೊಳಗೆ ಪ್ರವೇಶಿಸಿ, ಅಲ್ಲಿ ಅಗಾಧವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತದೆ. ಜತೆಗೆ, ವೈರಸ್ ಒಳಗೇ ಇದ್ದುಕೊಂಡು ಆ ಜೀವಕೋಶವನ್ನು ತಿನ್ನಲು ಆರಂಭಿಸುತ್ತದೆ. ಬಳಿಕ ಅಲ್ಲಿಂದ ನಿರ್ಗಮಿಸಿ ಮತ್ತೂಂದು ಜೀವಕೋಶದ ಮೇಲೆ ದಾಳಿ ಮಾಡುತ್ತದೆ.
ಈ ರೀತಿ ವೈರಸ್ ಜೀವಕೋಶಗಳನ್ನು ನಾಶ ಮಾಡುತ್ತಾ ಸಾಗುತ್ತದೆ. ಆದರೆ, ಇಲ್ಲಿ ಡೆಕಾಯ್ ಪಾಲಿಮರ್‌ಗಳು ನೈಜ ಹಾಗೂ ಸಜೀವ ಜೀವಕೋಶಗಳಾಗಿರುವುದಿಲ್ಲ. ಹೀಗಾಗಿ ಇದರೊಳಗೆ ಹೋಗುವ ರೋಗಕಾರಕ ವೈರಸ್‌ಗೆ ಒಳಗೆ ತಿನ್ನಲು ಏನೂ ಸಿಗದೇ, ತನ್ನ ಸಂಖ್ಯೆ ವೃದ್ಧಿಸಿಕೊಳ್ಳಲೂ ಆಗದೇ, ಕೊನೆಗೆ ಸಾವನ್ನಪ್ಪುತ್ತದೆ.
ಅಪಾಯಕಾರಿಯಲ್ಲ: ಶ್ವಾಸಕೋಶದಲ್ಲಿನ ಜೀವಕೋಶಗಳಿಗೆ ಕೋವಿಡ್ 19 ವೈರಸ್ ಬೇಗನೆ ಆಕರ್ಷಿತವಾಗುವ ಕಾರಣ, ಅದನ್ನು ಬಲೆಗೆ ಬೀಳಿಸುವ ವಿಧಾನವನ್ನು ಅನುಸರಿಸುವಾಗ ಶ್ವಾಸಕೋಶದ ಅಂಗಾಂಶಗಳ ಪೊರೆಯನ್ನೇ ಬಳಸುವುದು ಸೂಕ್ತ ಎನ್ನುತ್ತಾರೆ ವಿಜ್ಞಾನಿಗಳು. ಕೋವಿಡ್ 19 ವೈರಸ್ ಅನ್ನು ಸೆಳೆಯಲು ಈ ಪಾಲಿಮರ್‌ಗಳು ನ್ಯಾನೋ ಸ್ಪಾಂಜ್‌ಗಳಾಗಿ ಕೆಲಸ ಮಾಡುತ್ತವೆ.
ವೈರಸ್ ನಾಶವಾದ ಬಳಿಕ ಅದರ ಅವಶೇಷವನ್ನು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯು ಹೇಗೆ ಹೊರಹಾಕುತ್ತದೋ ಅದೇ ರೀತಿ ನೈಸರ್ಗಿಕ ಪ್ರಕ್ರಿಯೆ ಮೂಲಕ ಈ ಪಾಲಿಮರ್ ಅನ್ನೂ ಹೊರಹಾಕುತ್ತದೆ. ಹಾಗಾಗಿ ಪಾಲಿಮರ್ ಬಳಕೆಯು ದೇಹಕ್ಕೆ ಅಪಾಯಕಾರಿ ಆಗಲಾರದು ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಎಬೋಲಾದಂಥ ಇತರೆ ಸೋಂಕುಗಳ ನಿರ್ಮೂಲನೆಗೂ ಈ ವಿಧಾನ ಅನುಸರಿಸಬಹುದಾಗಿದೆ. ಈಗ ಪ್ರಯೋಗಾಲಯದಲ್ಲಿ ಈ ವಿಧಾನ ಯಶಸ್ವಿಯಾಗಿದ್ದು, ಮುಂದಿನ ಹಂತದಲ್ಲಿ ಪ್ರಾಣಿಗಳ ಮೇಲೆ, ನಂತರ ಮಾನವನ ಮೇಲೆ ಇದರ ಪ್ರಯೋಗ ನಡೆಸಲಾಗುತ್ತದೆ ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಮೆದುಳಿನ ಮೇಲೆ ಆಕ್ರಮಣಕೋವಿಡ್ 19 ವೈರಸ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಬರೀ ಶಾರೀರಿಕ ಬಾಧೆ ಮಾತ್ರವಲ್ಲ, ಮಾನಸಿಕ ಏರುಪೇರುಗಳು ದೊಡ್ಡ ಮಟ್ಟದಲ್ಲಿಯೇ ಸಂಭವಿಸುತ್ತವೆ. ಹೀಗೆಂದು ಇಂಗ್ಲೆಂಡ್‌ನಲ್ಲಿ ನಡೆದ ಅಧ್ಯಯನವೊಂದರಲ್ಲಿ ಗೊತ್ತಾಗಿದೆ. 125 ರೋಗಿಗಳನ್ನು ಅಧ್ಯಯನ ನಡೆಸಿದ ವರದಿ ಲ್ಯಾನ್ಸೆಟ್ ಸೈಕಿಯಾಟ್ರಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಅದರಲ್ಲಿ ಹಲವು ಗಂಭೀರ ಸಂಗತಿಗಳು ಪ್ರಸ್ತಾಪವಾಗಿವೆ. ಮುಖ್ಯವಾಗಿ ಮೆದುಳಿನ ಮೇಲೆ ಆಕ್ರಮಣವಾಗುತ್ತದೆ. ಅಂದರೆ ರೋಗಿ ಪಾರ್ಶ್ವವಾಯುವಿಗೆ ತುತ್ತಾಗಬಹುದು, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆಯನ್ನು ಎದುರಿಸಬಹುದು. ಇನ್ನೂ ಒಂದು ಸಮಸ್ಯೆಯೆಂದರೆ ವಿಪರೀತ ಉಷ್ಣಾಂಶ. ಈ ಬಗ್ಗೆ ಇನ್ನೂ ವಿಸ್ತೃತ ಅಧ್ಯಯನ ನಡೆದರೆ ಕೋವಿಡ್ 19 ವೈರಸ್ ಗೆ ಚಿಕಿತ್ಸೆ ನೀಡಲು ಬಹಳ ಸುಲಭವಾಗುತ್ತದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಪ್ರೊಫೆಸರ್ ಸಾರಾ ಪೆಟ್ ತಿಳಿಸಿದ್ದಾರೆ.