Advertisement

ನಂಜನಗೂಡಿಗಿಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಪರಮೇಶ್ವರ್‌ ಭೇಟಿ

12:53 PM Mar 18, 2017 | Team Udayavani |

ನಂಜನಗೂಡು: ಶನಿವಾರ ಮಧ್ಯಾಹ್ನ ನಂಜನಗೂಡಿಗೆ ಕಾಂಗ್ರೆಸ್‌ ಪಕ್ಷದ ರಾಜ್ಯಾದ್ಯಕ್ಷ ಪರಮೇಶ್ವರ ಭೇಟಿ ನಿಡಲಿದ್ದಾರೆ ಎಂದು ಸಂಸದ ಆರ್‌ ಧ್ರುವನಾರಾಯಣ ತಿಳಿಸಿದರು. 

Advertisement

ಶುಕ್ರವಾರ ನಂಜನಗೂಡಿಗೆ ಆಗಮಿಸಿದ ಅವರು ಪಕ್ಷದ ಅಭ್ಯರ್ಥಿ ಕಳಲೆ ಕೇಶವ ಮುರ್ತಿಯವರೊಂದಿಗೆ ನಗರದಲ್ಲಿ ಸಿದ್ದಗೊಳ್ಳುತ್ತಿರುವ ಕಾಂಗ್ರೆಸ್‌ ಪ್ರಚಾರ ಕಾರ್ಯಾಲಯದ ಸಿದ್ಧತೆಗಳನ್ನು ಪರಿಶಿಲಿಸಿದ ನಂತರ ಹೆಡತಲೆ ಜಾತ್ರೆಗೆ ಬೇಟಿ ನೀಡಿ ಅಲ್ಲಿನ ಜನರೊಂದಿಗೆ ಚುನಾವಣೆ ಕುರುತು ಮಾತುಕತೆ ನಡೆಸಿದ ನಂತರ ನಂಜನಗೂಡಿಗೆ ಆಗಮಿಸಿ ಮಾತನಾಡಿದರು.

ಪಟ್ಟಣಕ್ಕೆ ಆಗಮಿಸುವ ಪûಾಧ್ಯಕ್ಷರು ತಾಲೂಕು ಕಾಂಗ್ರೆಸ್‌ ಪ್ರಮುಖರೊಂದಿಗೆ ಉಪ ಚುನಾವಣೆಯ ಕಾರ್ಯ ತಂತ್ರದ ಕುರಿತು ಮಹತ್ವದ ಮಾತುಕತೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಸಂಸದರು ಹೇಳಿದರು. 

ನಾಲ್ಕು ದಿನ ಮುಖ್ಯಮಂತ್ರಿಗಳ ಪ್ರಚಾರ- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣಾ ಪ್ರಚಾರಕ್ಕೆ ಇದೇ ತಿಂಗಳ 31 ರಂದು ಇಲ್ಲಿಗೆ ಆಗಮಿಸಲಿದ್ದು ನಾಲ್ಕು ದಿನಗಳ ಕಾಲ ನಂಜನಗೂಡು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಅವರು ಇದೇ ಸಮಯದಲ್ಲಿ ಹೇಳಿದರು.

ಕಾಂಗ್ರೆಸ್‌ ಈ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲಿದೆ ಎಂದ ಅವರು ಸಮರ್ಥ ಅಭ್ಯರ್ಥಿ, ಮುಖ್ಯ ಮಂತ್ರಿಗಳು ರಾಜ್ಯ ಹಾಗೂ ಈ ಕ್ಷೇತ್ರದಲ್ಲಿ  ಮಾಡಿದ ಅಭಿವೃದ್ದಿ ಕಾರ್ಯಗಳು ಕೇಶವ ಮೂರ್ತಿಯವರಿಗೆ ವಿಜಯ ಮಾಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು

Advertisement

ಕೇಶವಮೂರ್ತಿ ತಮ್ಮ ನಾಮಪತ್ರವನ್ನು ಸೋಮವಾರ ಸಲ್ಲಿಸಲಿದ್ದು, ನಂತರ  ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಚಾರ ಬಿರುಸಾಗಲಿದೆ ಎಂದು ಸ್ವತಃ ಈ ಉಪ ಚುನಾವಣೆಯ ಕೈ ಅಭ್ಯರ್ಥಿ ಕಳಲೆ ಕೇಶವ ಮೂರ್ತಿ ತಿಳಿಸಿದರು.

ಹಲವಾರು ಚುನಾವಣಾ ಸಿದ್ಧತೆಗಳನ್ನು ಮಾಡಿ ಅನುಭವ ಹೊಂದಿರುವ ತಾವು ಈಗ ಚುನಾವಣಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಸೋಮವಾರದ ನಂತರ ರಾಜ್ಯದ ಸಚಿವರು ಸಂಸದರು ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರು ಸಹ ಚುನಾವಣಾ ರಂಗಕ್ಕೆ ದುಮುಕಲಿದ್ದಾರೆ. ತಾಲೂಕಿನ ಜನತೆ ಈ ಬಾರಿ ಆಶೀರ್ವದಿಸುವುದು ನಿಶ್ಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next