Advertisement

ಏ.1ರಿಂದ ನಂದಿನಿ ಹಾಲು, ಮೊಸರು ದರ ಮತ್ತಷ್ಟು ದುಬಾರಿ; ಕೆಎಂಎಫ್ 

06:20 PM Mar 30, 2017 | Sharanya Alva |

ಬೆಂಗಳೂರು: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿದೆ.

Advertisement

ಕೆಎಂಎಫ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಹಾಲು ಮತ್ತು ಮೊಸರಿನ ದರ ಹೆಚ್ಚಳದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ವಿವಿಧ ದರ್ಜೆಯ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್‌ಗೆ ಎರಡು ರೂಪಾಯಿಯಷ್ಟು ಹೆಚ್ಚಿಸಲು ಕರ್ನಾಟಕ ಹಾಲು ಮಹಾಮಂಡಳಿ ನಿರ್ಧರಿಸಿದೆ.

ಲೀಟರ್ ಗೆ 36 ರೂಪಾಯಿ ಇದ್ದ ಮೊಸರಿನ ಬೆಲೆ 38 ರೂ.ಗೆ ಏರಿಕೆ, ಲೀಟರ್ ಗೆ 34 ರೂ. ಇದ್ದ ಹಾಲಿನ ಬೆಲೆ 36 ರೂ.ಗೆ ಏರಿಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next