Advertisement

‘ಕಂಬಳದ ನಂದಯ್ಯ’ಎಂದೇ ಪ್ರಸಿದ್ದಿ ಪಡೆದ ನಂದಯ್ಯ ಮಾಸ್ತಯ್ಯ ನಾಯ್ಕ ನಿಧನ

09:22 PM Feb 27, 2022 | Team Udayavani |

ಭಟ್ಕಳ: ತಾಲೂಕಿನ ಯಲ್ವಡಿಕವೂರು ನಿವಾಸಿ ನಂದಯ್ಯ ಮಾಸ್ತಯ್ಯ ನಾಯ್ಕ (75) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ನಿದನರಾದರು.

Advertisement

ಮೃತರು ತಾಲೂಕಿನಲ್ಲಷ್ಟೇ ಅಲ್ಲದೇ ಅವಿಭಜಿತ ದಕ್ಷಿಣ ಕನ್ನಡದಲ್ಲಿಯೂ ಕೂಡಾ ಕೋಣನ ಕಂಬಳದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಕೋಣನ ಕಂಬಳವನ್ನು ಯಲ್ವಡಿಕವೂರಿನಲ್ಲಿ ಆರಂಭಿಸಿ ಕಂಬಳದ ನಂದಯ್ಯ ಎಂದೇ ಹೆಸರು ಗಳಿಸಿದ್ದಲ್ಲದೇ ಅನೇಕ ವರ್ಷಗಳಿಂದ ಕಂಬಳವನ್ನು ಅತ್ಯಂತ ಯಶಸ್ವೀಯಾಗಿ ನಡೆಸಿಕೊಂಡು ಬಂದಿರುವುದು ಇವರ ಹೆಗ್ಗಳಿಕೆಯಾಗಿದೆ.

ಕೃಷಿಕರಾಗಿದ್ದ ಇವರು ಹಲವಾರು ವರ್ಷಗಳಿಂದ ಇಲ್ಲಿನ ಯಲ್ವಡಿಕವೂರು ಕಂಬಳವನ್ನು ಜನಪ್ರಿಯಗೊಳಿಸಿದ್ದ ಇವರು ಅವಿಭಜಿತ ದಕ್ಷಿಣ ಕನ್ನಡದ ಬಹುತೇಕ ಕಂಬಳಗಳಲ್ಲಿ ಭಾಗವಹಿಸಿದ್ದಲ್ಲದೇ ಕಂಬಳದಲ್ಲಿ ಗೆದ್ದು ಬಂದಿದ್ದರು.

ಮೃತರು ಪತ್ನಿ, ನಾಲ್ವರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ : ಜೆಡಿಯು ಅಭ್ಯರ್ಥಿ ಮೇಲೆ ಗುಂಡಿನ ದಾಳಿ : ಚುನಾವಣೆಗೆ ಒಂದು ದಿನ ಇರುವಾಗಲೇ ನಡೆಯಿತು ಘಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next