Advertisement

ಓಂಕಾರ್‌ನಾಥ್‌ ಠಾಕೂರರ ನಾದೋಪಾಸನೆಯೂ ಲಾರಿಯ ಹಾರನ್‌ ಶಬ್ದವೂ

08:15 AM Feb 25, 2018 | Team Udayavani |

ತೀರಾ ಸ್ವಾಭಾವಿಕವಾದ, ಸಹಜ ಸಾಧಾರಣವಾದ ಮತ್ತು ಸಾಮಾನ್ಯ ನಡವಳಿಕೆ ಎಂದು ಎಲ್ಲರೂ ಒಪ್ಪುವ ಮತ್ತು ಅಪ್ಪಿಕೊಳ್ಳುವ ಗುಣವೊಂದಿರುತ್ತದೆ. ಬೆಳಗಾಗೆದ್ದು ಕೆಲಸಕ್ಕೆ ಹೋಗುವ ಪ್ರಿಯಕರ ತನಗಿಂತ ಮುಂಚೆ ಮನೆಗೆ ಬಂದು ತಾನು ತನ್ನ ಕೆಲಸದಿಂದ ಬರುವ ಮುಂಚೆ ತನಗಾಗಿ ಒಂದು ಕಪ್ಪು ಕಾಫಿ ಮಾಡಿಕೊಡಲಿ ಎಂದು ಬಯಸುತ್ತಾಳೆ ಅವನ ಪ್ರಿಯತಮೆ. ನಿತ್ಯ ಸ್ಕೂಟರಿನಲ್ಲಿ ಆಫೀಸಿಗೆ ಹೋಗುವ ತನ್ನನ್ನು ಒಂದು ದಿನವಾದರೂ ಅವನ ಸಂಗೀತದ ಸ್ಕೂಲಿನ ದಾರಿಗೆ ನನ್ನ ಆಫೀಸಿನ ದಾರಿಯನ್ನು ಜೋಡಿಸಬಾರದು ಏಕೆ ಇವನು ಅಂತ ಅವಳಿಗೆ ಅನ್ನಿಸುತ್ತಲೇ ಇರುತ್ತದೆ. ಅವನ ದಾರಿಯಲ್ಲದ ದಾರಿಯಲ್ಲಿ ದರ್ಶಿನಿಯ ಪಕ್ಕದ ಕುಂದಾಪುರದ ಬೀಡಾ ಹುಡುಗನಿಗೆ ಈ ಮನುಷ್ಯ ಆಗಾಗ ಸ್ವಲ್ಪ$ವಿಪರೀತವಾಗಿ ಕಾಣಿಸುತ್ತಾನೆ. “ಸಣ್ಣ ಮರ್ಲಿಬೇìಕು ಮಾರಾಯೆ’ ಎಂದನ್ನಿಸದೇ ಇರದು ಅವನಿಗೆ ವಾರಕ್ಕೆರಡು ಬಾರಿಯಾದರೂ. ಒಮ್ಮೊಮ್ಮೆ ಬೀಡಾ ತಯಾರಾಗುವಾಗ ಹುಚ್ಚಾಪಟ್ಟೆ ಮೋದಿಯಿಂದ ಮಹಾತ್ಮನವರೆಗೆ ಮಾತನಾಡುತ್ತ ಖಂಡಾಂತರ ಕ್ಷಿಪಣಿಗಳನ್ನು ಖಂಡವಿದೆಕೋ ಮಾಂಸವಿದೆಕೋ ಎಂದು ಹಾರಿಸುವ ಇವನು ಕೆಲವೊಮ್ಮೆ ದುಡ್ಡು ಕೊಡುವುದನ್ನೂ ಮರೆತುಬಿಡುತ್ತಾನೆ. ದಾರಿಯಲ್ಲಿ ನಿತ್ಯ ಸಿಕ್ಕುವ ಅದೇ ಹುಡುಗರ ಜೊತೆ ಮೊನ್ನೆ ಶನಿವಾರ  ಗ್ಯಾಸ್‌ ಸಿಲಿಂಡರಿನ ತೂಕದ ಮೋಸವನ್ನು ಬಗೆಹರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಾನು ಮಾಡಿದ್ದ ಗೂಢಚರ್ಯೆಯ ತನಿಖಾ ವರದಿಗಳನ್ನೆಲ್ಲ ಮೂಲವಾಗಿಟ್ಟುಕೊಂಡು ಆ ವಿಚಾರವಾಗಿ ಎಗ್ಗಿಲ್ಲದೆಯೇ ತನ್ನ ಜ್ಞಾನಧಾರೆಯನ್ನು ಓಣಿಯ ಆ ಹುಡುಗರಿಗೆರೆದಿದ್ದ ಆತ ಈಗ ಒಂದೆರಡು ದಿನದಿಂದ ಅಸಾಧಾರಣವಾದ ಮೌನವ್ರತವನ್ನು ತಳೆದಿ¨ªಾನೆ. 

Advertisement

ತನ್ನದೇ ಆದ ಅಂಥ¨ªೊಂದು ಲೋಕದಲ್ಲಿ ಕಳೆದುಹೋಗಿರುವಂಥ ಮನಃಸ್ಥಿತಿಯವರನ್ನು ನಾವು ಸಾಮಾನ್ಯವಾಗಿ ಸಾಧಕರ ಜಗತ್ತಿನಲ್ಲಿ ನೋಡುತ್ತೇವೆ. ಪಂಡಿತ್‌ ಓಂಕಾರ್‌ನಾಥ್‌ ಠಾಕೂರರು ಒಮ್ಮೆ ಅವರ ರಿಯಾಜಿನ ಕೋಣೆಯಿಂದ ಭಯಾನಕ ಸಿಟ್ಟಿನಲ್ಲಿ ಓಡಿಬಂದು ಹೊರಗೆ ನಿಂತಿದ್ದ ಲಾರಿಯ ಚಾಲಕನನ್ನು ಹಿಗ್ಗಾಮುಗ್ಗಾ ಬೈಯತೊಡಗುತ್ತಾರೆ. ಸುತ್ತ ಜನ ಸೇರುತ್ತಾರೆ. ತಮ್ಮತಮ್ಮಲ್ಲೆ ಗಲಾಟೆಯ ಕಾರಣವನ್ನು ಮಾತನಾಡಿಕೊಳ್ಳುತ್ತಾರೆ. ಯಾರಿಗೂ ವಿಷಯವೇನೆಂದು ಬಗೆಹರಿದಿರುವುದಿಲ್ಲ. ಕಡೆಗೆ ಲಾರಿಯ ಚಾಲಕನು ತನ್ನ ತಪ್ಪೇನೆಂದು ಬಗೆಬಗೆಯಾಗಿ ಬಿದ್ದು ಬಿನ್ನವಿಸಲು ಠಾಕೂರರು ಏನೂ ಮಾತನಾಡದೆ ಹೊರಟುಹೋಗುತ್ತಾರೆ. ಒಟ್ಟಿನಲ್ಲಿ ಸುತ್ತ ಸಾಮಾನ್ಯರಿಗೆ ಲಾರಿಯ ಚಾಲಕನು ಭಯಾನಕ ತಪ್ಪೇನನ್ನೋ ಮಾಡಿ¨ªಾನೆಂಬ ಭ್ರಮೆಯೊಂದು ಹುಟ್ಟಲು ಸಾಧ್ಯವಾಯಿತಷ್ಟೇ ಹೊರತು ನಿಜ ಯಾವುದು, ವಾಸ್ತವ ಸಂಗತಿ ಏನೆಂದು ಯಾರಿಗೂ ತಿಳಿಯಲಿಲ್ಲ- ಲಾರಿಯ ಚಾಲಕನಿಗೂ!

 ಆಗಿದ್ದಿಷ್ಟೆ. ಜಗತ್ತಿನ ಅತಿ ಪ್ರಖ್ಯಾತ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ಮಹಾನ್‌ ಸಾಧಕರು ನಾದೋಪಾಸಕರೂ ಆದ ಓಂಕಾರ್‌ನಾಥ್‌ ಠಾಕೂರರು ಅಂದು ಮೌನ ಸಾಧನೆಯಲ್ಲಿದ್ದರು. ಮಂತ್ರಸಾಧಕರನ್ನು ಹತ್ತಿರದಿಂದ ಗಮನಿಸಿದರೆ ನಮಗೆ ಗೊತ್ತಾಗುತ್ತದೆ. ತುಟಿಗಳ ಚಲನೆಯಿಲ್ಲದೆಯೇ ಅವರ ಮತ್ರೋಚ್ಚಾರಣೆ ನಡೆದಿರುತ್ತದೆ. ಕಣ್ಣು ಮುಚ್ಚಿರುತ್ತದೆ ಮತ್ತು ಬೆರಳುಗಳ ತುದಿಯ ಆಡುವ ಜಪಮಾಲೆಯ ಮುತ್ತಿನಂಥ ಮಣಿಗಳು ಸವೆಯುತ್ತಲೆ ಇರುತ್ತವೆ.  ಸಂಗೀತದಲ್ಲಿ ಅಂಥಾ¨ªೊಂದು ಸಾಧನೆಗೆ ಮೌನ ರಿಯಾಜ್‌ ಅಥವಾ ಮೌನ ಸಾಧನೆ ಎಂದು ಕರೆಯುತ್ತಾರೆ. 

ಓಂಕಾರ್‌ನಾಥ್‌ ಠಾಕೂರರ ಅಂದಿನ ಮೌನ ಸಾಧನೆಯ ಶ್ರುತಿಗೂ ಮತ್ತು ಹೊರಗಿನಿಂದ ಅವರ ಕಿವಿಗೆ ಅಪ್ಪಳಿಸಿದ ಲಾರಿಯ ಹಾರನ್‌ ಶಬ್ದದ ಶ್ರುತಿಗೂ ಹೊಂದಾಣಿಕೆಯಾಗದಿದ್ದುದೇ ಅವರ ಸಿಟ್ಟಿಗೆ ಕಾರಣವಾಗಿತ್ತು! ಮತ್ತು ಅದೇ ಕಾರಣಕ್ಕಾಗಿ ಅವರು ಅಂದು ಆ ಲಾರಿಯ ಚಾಲಕನ ಜೊತೆಗ ಜಗಳಕ್ಕೆ ಹೊರಟಿದ್ದರು! ಎರಡು ರಾಗಗಳನ್ನು ಕಲಿತ ಆರು ವರ್ಷದ ಮಗಳು ಮು¨ªಾಗಿ ಶಾರದೇ ದಯೆ ತೋರಿದೇ ಎಂದು ಹಾಡಿದರೆ ನೆಲದ ಮೆಲೆ ನಿಲ್ಲಲಾಗದ ಪರಿಸ್ಥಿತಿಯನ್ನು ಮುಟ್ಟಿ ಊರಿನ ಎಲ್ಲ ರಿಯಾಲಿಟೀ ಶೋಗಳ ಇ-ಮೇಲ… ವಿಳಾಸಕ್ಕೆ ಪತ್ರಬರೆದು ಆಕೆ ಹಾಡಿದ ಯೂಟ್ಯೂಬ… ಲಿಂಕನ್ನು ಕಳಿಸಿ ಮುಂದಿನ ವರ್ಷ ಮಗಳು ಇಂಡಿಯನ್‌ ಐಡಲ… ಆಗುತ್ತಾಳೆ ಎಂದು ಬಯಸುವ ನಮಗೆ  ಸಾಧನೆಯ ಆಳದಲ್ಲಿ ನಾದದ ಶ್ರುತಿಯ ನಿರಂತರತೆಯನ್ನು ಕಾಪಾಡಿಕೊಳ್ಳುತ್ತ ಸಂಗೀತದಲ್ಲೂ ಮೌನಸಾಧನೆಯ ಸಾಧ್ಯತೆಯನ್ನು ಮತ್ತು ಮಹಿಮೆಯನ್ನು ತೋರಿಸಿದ ಓಂಕಾರ್‌ನಾಥ್‌ ಥಾಕೂರರಂಥ ಸಂತರ ಸಂಗೀತಮಾರ್ಗವು ಅರ್ಥವಾಗುವುದು ಕಷ್ಟವೇ!

ಕ್ರಿಯೇಟಿವಿಟಿ ಎಂಬುದನ್ನು ಮುಖ್ಯವಾಗಿ ಇಟ್ಟುಕೊಂಡು ಜಗತ್ತಿನ ಜೀವವರ್ಗವನ್ನು ನೋಡಬೇಕು ಒಮ್ಮೆ. ಗುರುತುಪರಿಚಯವಿಲ್ಲದ ಜನರು ನಡೆದಾಡುವ ಮನೆಯ ಮುಂದಿನ ಓಣಿಯ ದಾರಿಯನ್ನು ಸೆಗಣಿಯ ನೀರಿನಿಂದ ಬಳಿದು ಚುಕ್ಕಿಗಳ ರಂಗೋಲಿಯ ಲೋಕವನ್ನು ಅನಾವರಣಗೊಳಿಸುವ ಮನೆಗಳ ಹೆಂಗಸರು! ತಳ್ಳುವ ಗಾಡಿಯ ತರಕಾರಿಗಳ ಬದಿಯಲ್ಲಿ ಒಪ್ಪವಾಗಿ ಅಲಂಕರಿಸಿಕೊಂಡ ಪುಟ್ಟ ಗಣೇಶನ ತಲೆಯ ಮೇಲೆ ಕುಳ್ಳಿರಿಸಿದ ಹೂಕೋಸಿನ ಹೂವು ಮತ್ತು ಅದರ ಹಿಂದಿನ ಸೃಜನಶೀಲ ಮನಸ್ಸು! ಹತ್ತುಬಣ್ಣದ ಪೆನ್ಸಿಲುಗಳನ್ನು ಅಂದವಾಗಿ ಜೋಡಿಸಿ ಮಧ್ಯದ ಬಿಂದುವಿನಲ್ಲಿ ಸರಿಯಾಗಿ ಮೆಂಡರನ್ನು ಇಟ್ಟು ಚಂದವನ್ನು ನೋಡುವ ಪುಟ್ಟ ಮಗುವಿನ ಮುಗ್ಧ ಮನಸ್ಸು ಮತ್ತು ಎದುರಿನ ರಸ್ತೆಯ ಕೊನೆಯ ಮಂಟಪದ ಮೇಲೆ ನಿಂತ ಆರ್ಕೆಸ್ಟ್ರಾದ ಬಗೆಬಗೆಯ ಹಾಡುಗಳ ತಾಳಕ್ಕೆ ಮನೆಯ ಮೂಲೆಯಲ್ಲೆಲ್ಲೋ ತಾಳತಟ್ಟುತ್ತ ಅಮ್ಮನ ಕಾಲಮೇಲೆ ಮಲಗಿದಲ್ಲೆ ಕುಣಿಯುವ ಕಂದಮ್ಮನ ಪ್ರತಿಭಾಪ್ರಪಂಚ!

Advertisement

ವಾಸ್ತವದಲ್ಲಿ ಕ್ರಿಯೇಟಿವಿಟಿಯಿಲ್ಲದ ಜಗತ್ತಿನ ಜೀವಿಯಿಲ್ಲ. ಸಂಗೀತವೋ ಚಿತ್ರಕಲೆಯೋ ಕವಿತೆಯೋ ಅಥವಾ ಅಡುಗೆಯೋ. ಉಪ್ಪಿನ ಹದದಿಂದ, ಬಚ್ಚಲಿನ ಮನೆಗೆ ಒಟ್ಟುವ ಕಟ್ಟಿಗೆಯ ಪ್ರಮಾಣದಿಂದ ದರ್ಬಾರಿ ಹಾಡುವಾಗ ಹಚ್ಚಬೇಕಾದ ಕೋಮಲಗಾಮಾಂರದ ಪ್ರಮಾಣದವರೆಗೆ, ಆಕಾಶದ ಚಿತ್ರವನ್ನೂ ಬರೆಯುವಾಗ ಬಳಸುವ ನೀಲಿ ಬಣ್ಣದ ಹದದಿಂದ ಸಮುದ್ರದ ಅಲೆಯ ನೊರೆನೀಲಿಯವರೆಗೆ ! ಎಲ್ಲೆಲ್ಲೂ ಈ ಬಗೆಯ ಕಲಾವೈವಿಧ್ಯದ ಶೃಂಗಾರವಿದೆ. ಆದರೆ, ಈ ವೈವಿಧ್ಯದ ಹಿಂದಿನ ಮನಃಶಕ್ತಿಗೆ ಮತ್ತು ಅಂಥ ಮನಃಶಕ್ತಿಯನ್ನು ಸೃಷ್ಟಿಸುವ ಸೃಜನಶೀಲತೆಯ ವೈವಿಧ್ಯಕ್ಕೆ ಪರಸ್ಪರ ಪೋಷಕವಾಗಬೇಕಾದದ್ದು ಸಮಾಧಾನವೆಂಬ ಸ್ಥಿತಿ. ಅದು ಬಸವನಹುಳುವಿಗಿಂತಲೂ ನಿಧಾನವಾಗಿ ನಡೆಯಬೇಕಾದಾಗ ಪ್ರಕೃತಿಯನ್ನು ಪ್ರಶ್ನಿಸದೇ ಇರುವುದು ಮತ್ತು ಸಾಯುವ ಭಯದಲ್ಲಿ ಓಡಬೇಕಾಗಿ ಬಂದಾಗ ಬದುಕುವ ಒಂದೆ ಆಸೆಯನ್ನು ಇಟ್ಟುಕೊಂಡು ಓಡುವುದು- ಹೀಗೆ, ಎರಡೂ ಬಗೆಯ ಸಾವಧಾನವನ್ನು ಅರಗಿಸಿಕೊಳ್ಳುವ ಕ್ರಿಯೆಯಲ್ಲಿ ವ್ಯಕ್ತಿಯೊಬ್ಬ ಹಾಡುಗಾರನಿಂದ ಸೃಜನಶೀಲ ಕಲಾವಿದನಾಗುತ್ತಾನೆ ಮತ್ತು ಈ ಕಲಾವಿದನಾಗುವ ಪ್ರಕ್ರಿಯೆ ಎನ್ನುವುದು ಬೀಡಾ ಅಂಗಡಿಯವನ ಹಲವಾರು ಪ್ರಶ್ನೆಗಳಿಗೆ, ಗೆಳತಿಯ ಅಥವಾ ಗೆಳೆಯನ ಅಸಮಾಧಾನಗಳಿಗೆ ಕಾರಣವಾಗುತ್ತದೆ. 

ಸಾಧಕನಿಗೇನು ಬೇಕು ಎಂದು ಯೋಗದವರಲ್ಲಿ ಕೇಳಿದರೆ ಅಷ್ಟಾಂಗವನ್ನು ಹರಡಿಡುತ್ತಾರೆ, ತೆಂಡೂಲ್ಕರರಿಗೆ ಕೇಳಿದರೆ ಕೈಗೆ ಬ್ಯಾಟ… ಕೊಡುತ್ತಾರೆ, ಸಂಗೀತದವರನ್ನು ಕೇಳಿದರೆ ತಂಬೂರಿ ಕೊಡುತ್ತಾರೆ. ವಾಸ್ತವದಲ್ಲಿ ಈ ಎಲ್ಲ ಸಾಧಕರಿಗೂ ಒಂದಷ್ಟು ಕಾಲ ಬೇಕಾದದ್ದು, ತಮ್ಮ ಸಮಯದ ಮಿತಿಯನ್ನು ಮೀರಿ ನಿಲ್ಲಲು ಒಂದು ಸ್ಪೇಸ್‌ ಅಥವಾ ಒಂದರ್ಥದಲ್ಲಿ, ಪ್ರಮಾಣಬದ್ಧವಾದ ನಿರಂಕುಶತೆ.

ಕಣಾದ ರಾಘವ

Advertisement

Udayavani is now on Telegram. Click here to join our channel and stay updated with the latest news.

Next