Advertisement
ಗಣಪತಿ ಅಥರ್ವಶೀರ್ಷ ಅಥವಾ ಗಣೇಶೋಪನಿಷತ್ ಎಂದು ಕರೆಯಲ್ಪಡುವ ಗಣಪತಿಸ್ತುತಿಯ ಮಂತ್ರ ಪ್ರಸಿದ್ಧವಾದುದು. ಇದನ್ನು ಕೇಳುತ್ತಿದ್ದರೆ, ಕರ್ಣಾನಂದದ ಜೊತೆಗೆ ಮನಸ್ಸಿಗೂ ಆನಂದವಾಗುತ್ತದೆ. ನಿರ್ವಿಘ್ನದಾಯಕನಾದ ಗಣಪತಿ ಆದಿಪೂಜಿತನಾಗಿರುವುದರ ಜೊತೆಗೆ, ಹೆಚ್ಚಿನ ಜನರು ಇಷ್ಟಪಡುವ ದೇವನಾಗಿದ್ದಾನೆ. ಹಾಗಾಗಿಯೇ ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕ ದಂತಂ ಭಕ್ತಾನಾಮ್ ಏಕದಂತಮುಪಾಸ್ಮಹೇ ||, ಎಂಬ ಶ್ಲೋಕ ಹುಟ್ಟಿಕೊಂಡಿದ್ದು.
Related Articles
Advertisement
ಸಿದ್ಧಿಯನ್ನು ಪಡೆಯಲು ಸಾಧನೆ ಬೇಕೇಬೇಕು. ದೇವರ ನಂಬಿಕೆಯೂ ಅಂತಹ ಸಾಧನೆಯನ್ನೇ ಹೇಳುತ್ತದೆ. ಮಂತ್ರಗಳಲ್ಲಿನ ತಲ್ಲೀನತೆಯೂ ಒಂದು ಸಾಧನೆಯೇ. ಯಾಕೆಂದರೆ ಮರ್ಕಟನಂತಾಡುವ ಮನಸ್ಸನ್ನು ನಿಯಂತ್ರಿಸಿದರಷ್ಟೇ ಪಠಣ, ತಲ್ಲೀನತೆ ಎಲ್ಲವೂ ಸಾಧ್ಯ. ನಾವು ಗೊತ್ತಿ¨ªೋ, ಗೊತ್ತಿಲ್ಲದೆಯೋ ಬದುಕಿನ ಅನಿವಾರ್ಯತೆಗಾಗಿಯೋ ಒಂದಲ್ಲ ಒಂದು ಪಾಪಕಾರ್ಯದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಳ್ಳುತ್ತೇವೆ. ಅಂತಹ ಪಾಪಗಳನ್ನು ಕಳೆಯುವವನು ಗಣನಾಯಕ. ಆತನನ್ನು ಪಠಿಸುವ ಮೂಲಕ ನಮ್ಮ ಮನಸ್ಸನ್ನು ಶುದ್ಧವಾಗಿಸಿಕೊಳ್ಳಲು ಈ ಉಪನಿಷತ್ತು ಸಹಕಾರಿಯಾಗಿದೆ. ಪರಮಾತ್ಮನ ಸ್ವರೂಪವನ್ನು ಹಲವು ಬಗೆಗಳಲ್ಲಿ ನಾವು ಕಾಣುವವರು. ಮತ್ತು ಮಂತ್ರ ತಂತ್ರ ಮುಖೇನ ಪೂಜಿಸುವವರು. ಮನುಷ್ಯನ ಪ್ರಾರ್ಥನೆಯೆಂದರೆ ಮುಖ್ಯವಾಗಿ ಇಷ್ಟಾರ್ಥ ಸಿದ್ಧಿ. ಇಂತಹ ಉಪನಿಷತ್ತುಗಳನ್ನು ದೇವರು ತೋರಿದದಾರಿ ಎಂದು ಪರಿಗಣಿಸಿ ಪಠಿಸಿದರೆ, ಆಲಿಸಿದರೆ ನಾವು ವಿಘ್ನರಹಿತವಾದ ಜೀವನ ನಡೆಸಬಹುದು.
ಓಂ ನಮೋ ವ್ರಾತಪತಯೇ ನಮೋ ಗಣಪತೆಯೇ ನಮಃ ಪ್ರಮಥಪತೆಯೇ ನಮಸ್ತೇಸ್ತುಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀ ವರವರದಮೂರ್ತಯೇ ನಮಃ|| ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆತ್ಮವು ದೇವರನ್ನು ಸೇರಲು ಏನು ಮಾಡಬೇಕು? ಆತ್ಮವು ದೇಹದ ಒಳಗೆ ಇದ್ದಷ್ಟು ಹೊತ್ತು ಮಾತ್ರ ನಮ್ಮ ದೇಹಕ್ಕೆ ಬೆಲೆ. ಆತ್ಮವು ದೇಹವನ್ನು ತ್ಯಜಿಸಿದ ತಕ್ಷಣ ಅದು ಜೀವ ಎಂದು ಕರೆಸಿಕೊಳ್ಳದೆ ಶವ, ಕಳೇಬರ ಮೊದಲಾದ ಶಬ್ದಗಳಿಂದ ಕರೆಸಿಕೊಳ್ಳುತ್ತದೆ. ಆ ಕ್ಷಣದಿಂದ, ಅದೊಂದು ಬೇಗನೆ ಕೆಡುವ ವಸ್ತುವಾಗಿಬಿಡುತ್ತದೆ. ಆತ್ಮವೆಂಬುದೇ ನಮ್ಮ ಅಸ್ತಿತ್ವ. ಹಾಗಾಗಿ, ಜೀವನದ ಅಂತ್ಯದಲ್ಲಿ ಆತ್ಮವು ದೇವರನ್ನು ಸೇರಲಿ ಎಂದು ಪ್ರತಿಯೊಬ್ಬನೂ ಪ್ರಾರ್ಥಿಸುತ್ತಾನೆ. ಯೋಚಿಸುತ್ತಾನೆ. ಮತ್ತೂಂದು ಜನ್ಮ ಈ ಭುವಿಯಲ್ಲಿ ಬೇಡ ಎಂಬ ನಿರ್ಧಾರ ತಳೆಯುವವರೇ ಹೆಚ್ಚು. ಮಾನವ ಜನ್ಮ ದೊಡ್ಡದು ಎಂಬ ಮಾತಿದೆ. ಆದರೂ, ಮಾನವನು ಕೊನೆಯಲ್ಲಿ ಬಯಸುವುದು ಈ ದೇಹದಿಂದ ಬಿಡುಗಡೆ ಪಡೆಯುವುದು ಮತ್ತು ತನ್ನ ಆತ್ಮ ದೇವರನ್ನು ಸೇರುವುದು. ನಮ್ಮ ಆತ್ಮ ದೇವರನ್ನು ಸೇರಲು ಏನು ಮಾಡಬೇಕು? ಎಂಬ ಪ್ರಶ್ನೆ ಕೊನೆಯ ಘಳಿಗೆಯಲ್ಲಿ ಎಲ್ಲರಿಗೂ ಬರುವಂಥದ್ದು. ಪ್ರತಿಯೊಬ್ಬ ಹಿರಿಯರೂ ಅಂದರೆ ಸಾವಿನಂಚಿನಲ್ಲಿರುವವರು ದೇವರಪಾದವನ್ನು ಸೇರಿದರೆ ಸಾಕಪ್ಪ! ಎಂದು ಉದ್ಗರಿಸುವುದೇ ಇದಕ್ಕೆ ಉದಾಹರಣೆ. ಬದುಕಿನ ಕೊನೆಯಲ್ಲಿರುವ ಹಿರಿಯರು ಯಾವಾಗಲೂ ಶಿವಶಿವ ಅಂತಲೋ, ರಾಮರಾಮ ಅಂತಲೋ, ಕೃಷ್ಣಕೃಷ್ಣ ಅಂತಲೋ ಪ್ರಾಣ ಬಿಟ್ಟರೆ ಸಾಕು ಎಂದುಕೊಳ್ಳುವುದನ್ನು ಕೇಳಿರುತ್ತೇವೆ. ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆದರೆ, ಈ ದೇವರ ಸಾನಿಧ್ಯವನ್ನು ಸೇರಲು ಮಾಡಬೇಕಾದುದಾದರೂ ಏನು? ಹಿರಿಯರು ಅಂದುಕೊಂಡಂತೆ, ಪರಿಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸುತ್ತ ಸದ್ಭಾವವನ್ನು ಹೊಂದಿದ್ದಾಗ ಮಾತ್ರವೇ ನಮ್ಮ ಆತ್ಮ ದೇವರನ್ನ ಸೇರಲು ಸಾಧ್ಯ. ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಇದನ್ನೇ ಹೇಳುತ್ತಾನೆ.
ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯನೆ¤à ಕಲೇವರಮ… | ತಂ ತಮೇವೈತಿ ಕೌಂತೇಯ ಸದಾ ತದ್ಭಾವಿತಃ ||,
(ಅಧ್ಯಾಯ 8, ಶ್ಲೋಕ 6) ಅಂದರೆ, ಮನುಷ್ಯನು ತನ್ನ ದೇಹವನ್ನು ಬಿಡುವ ವೇಳೆಯಲ್ಲಿ ಯಾವ ಭಾವವನ್ನು ಸ್ಮರಿಸುತ್ತಾನೋ ಅದೇ ಭಾವವನ್ನು ಖಂಡಿತವಾಗಿಯೂ ಪಡೆಯುತ್ತಾನೆ ಎಂದರ್ಥ.
ಮರಣಕಾಲದಲ್ಲಿ ದೇವ ಸ್ಮರಣೆಯಂಥ ಆಧ್ಯಾತ್ಮಿಕ ಭಾವದಲ್ಲಿದ್ದರೆ ದೇಹವನ್ನು ಬಿಟ್ಟ ಆತ್ಮವು ದಿವ್ಯವಾದ ಭಾವವನ್ನೇ ಪಡೆಯುತ್ತದೆ ಮತ್ತು ದೇವರನ್ನು ಸೇರುತ್ತದೆ. ಇದಕ್ಕೆ ಎಲ್ಲರಿಗೂ ತಿಳಿದಿರುವ ಶ್ವೇತಕುಮಾರ ಚರಿತ್ರೆ ಸಾಕ್ಷಿಯಾಗಿದೆ. ಶ್ವೇತಕುಮಾರನು, ಸಾಯುವ ಸಮಯದಲ್ಲಿ ಶಿವಶಿವ ಎಂದು ಉಚ್ಚರಿಸಿದ ಕಾರಣದಿಂದಾಗಿ ಮತ್ತೆ ಅವನ ಆತ್ಮ ದೇಹವನ್ನು ಸೇರುತ್ತದೆ ಎಂಬುದು ಈ ಕಥೆಯ ಸಾರಾಂಶ. ಯದ್ಭಾವಂ ತದ್ಭವತಿ ಎಂಬಂತೆ ನಾವು ಏನನ್ನು ಅಂದುಕೊಳ್ಳುತ್ತೇವೆಯೋ ಅದೇ ಆಗುತ್ತಲೇ ಹೋಗುತ್ತದೆ. ನಮ್ಮ ಯೋಚನೆಗಳು ಸದಾ ಸಕಾರಾತ್ಮಕವಾಗಿರಬೇಕು. ಪ್ರತಿಯೊಂದು ಕ್ಷಣವೂ ನಮಗೆ ಹೊಸತೇ; ಕಳೆದ ಪ್ರತಿಯೊಂದು ಕ್ಷಣವೂ ಹಳೆಯದು, ಮರಳಿ ಪಡೆಯಲಾಗದ್ದು. ಹಾಗಾಗಿ, ಸದಾಕಾಲ ದೇವಚಿಂತನೆಯಿಂದ ಉತ್ತಮಭಾವವನ್ನು ಬೆಳಸಿಕೊಂಡಾಗ ಪ್ರತಿಕ್ಷಣವೂ ನಮಗೆ ಒಳ್ಳೆಯದಾಗುತ್ತದೆ. ಸಣ್ತೀಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವಿತಾವಧಿಯಲ್ಲೂ ಮರಣಾನಂತರದಲ್ಲೂ ದಿವ್ಯತೆಯನ್ನು ಹೊಂದಲು ಸಾಧ್ಯ. ವಿಷ್ಣು ಭಟ್ ಹೊಸ್ಮನೆ