ಬೆಂಗಳೂರು: ಗೊಟ್ಟಿಗೆರೆ-ನಾಗವಾರ ಮಾರ್ಗದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಹಲವು ತಿಂಗಳುಗಳಿಂದ ಬಹು ತೇಕ ಸ್ಥಗಿತಗೊಂಡಿದ್ದು, ಆ ಮಾರ್ಗದಲ್ಲಿನ ವಾಹನ ಸಂಚಾರ ಈಗ ಜನರಿಗೆ ಅಕ್ಷರಶಃ ನರಕಯಾತನೆಯಾಗಿದೆ.
ಸುಮಾರು ಒಂದು ವರ್ಷದ ಹಿಂದೆಯೇ ಈ ಮಾರ್ಗದಲ್ಲಿ ಮೆಟ್ರೋ ಕಂಬಗಳು ಎದ್ದುನಿಂತಿವೆ. ಆದರೆ, ಹಲವು ಕಾರಣಗಳಿಂದ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಇದರ ಬಿಸಿ ಜನರಿಗೆ ಅಷ್ಟಾಗಿ ತಟ್ಟಲಿಲ್ಲ. ಆದರೆ, ಅನ್‌ಲಾಕ್ ನಂತರದಲ್ಲಿ ಬಹುತೇಕ ಕಂಪನಿಗಳು ಪುನಾರಂಭಗೊಂಡಿದ್ದು, ಎಂದಿನಂತೆ ಸಂಚಾರ ದಟ್ಟಣೆಯೂ ವಿಪರೀತವಾಗಿದೆ. ಪರಿಣಾಮ ನಿತ್ಯ “ಪೀಕ್ ಅವರ್’ನಲ್ಲಿ ಹೆಜ್ಜೆ-ಹೆಜ್ಜೆಗೂ ಜನ ಪರದಾಡುವಂತಾಗಿದೆ.
“ಬನ್ನೇರುಘಟ್ಟ ರಸ್ತೆ ಕಾಮಗಾರಿ ಪ್ರಗತಿಯನ್ನು ನೋಡಿದರೆ, ಬಿಎಂಆರ್‌ಸಿಎಲ್ ಪಾಠ ಕಲಿತಂತಿಲ್ಲ. ಎತ್ತರಿಸಿದ ಮಾರ್ಗ ನಿರ್ಮಾಣಕ್ಕೇ ಇಷ್ಟೊಂದು ವಿಳಂಬ ಆಗುತ್ತಿದೆ. ಇನ್ನು ಸುರಂಗಮಾರ್ಗದ ಕತೆ ಏನಿದೆಯೋ? ಈ ಮಧ್ಯೆ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ’ ಎಂದು Óಳೀ§ ಯ ನಿವಾಸಿ ಕೆ. ಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಹೊಸ ಟೆಂಡರ್ ಆಹ್ವಾನ: ಈ ಮಧ್ಯೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಯು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಇದು ಕಾಮಗಾರಿ ಪ್ರಗತಿಕುಂಠಿತ ರೂಪದಲ್ಲಿ ಪರಿಣಮಿಸುತ್ತಿದೆ.ನಿಗದಿತ ಅವಧಿಯಲ್ಲಿ ಮುಗಿಸಬೇಕಾದಷ್ಟುಕಾಮಗಾರಿ ಆಗಿಲ್ಲ. ಕಳಪೆ ಕಾರ್ಯಾಚರಣೆಯಿಂದ ಈ ಟೆಂಡರ್ ಅನ್ನು ಬಿಎಂಆರ್‌ಸಿಎಲ್ ರದ್ದು ಮಾಡಿದ್ದು, ಈ ಬಾಕಿ ಉಳಿದಕಾಮಗಾರಿಗೆ ನಿಗಮವು ಹೊಸ ಟೆಂಡರ್ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏ. 21 ಕೊನೆ ದಿನ ಎಂದೂ ಹೇಳಿದೆ.
“ಗುತ್ತಿಗೆ ಪಡೆದ ಕಂಪೆನಿಯು ಷರತ್ತಿಗೆ ಅನುಗುಣವಾಗಿ ಕಾಲಮಿತಿಯಲ್ಲಿ ಕಾಮಗಾರಿಯನ್ನು ಮುಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ನೀಡಿದ್ದ ಗುತ್ತಿಗೆ ರದ್ದು ಮಾಡಿ, ಹೊಸಟೆಂಡರ್ ಕರೆಯಲಾಗಿದೆ. ಕೆಲಸ ಪುನಾರಂಭಕ್ಕೆ ಇನ್ನೂ 3ರಿಂದ 4 ತಿಂಗಳು ಆಗಬಹುದು’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸ್ಪಷ್ಟ ಪಡಿಸಿದ್ದಾರೆ.
2019ರ ಡಿಸೆಂಬರ್ ವೇಳೆಗೆ ಶೇ. 22 ಸಿವಿಲ್ ಕಾಮಗಾರಿಯನ್ನು ಕಂಪನಿ ಪೂರ್ಣ ಗೊಳಿಸಿತ್ತು.2021ರ ಫೆಬ್ರುವರಿಯಾದರೂ ಶೇ 37ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿತ್ತು.