Advertisement

“ನಮ್ಮಮೆಟ್ರೋ’: ಲಕ್ಷದ ಗಡಿ ದಾಟಿದ ಪ್ರಯಾಣಿಕರ ಸಂಖ್ಯೆ

12:16 PM Dec 12, 2020 | Suhan S |

ಬೆಂಗಳೂರು: ಕೋವಿಡ್ ಮತ್ತು ಜಾರಿಯಾದ ಸುದೀರ್ಘ‌ ಲಾಕ್‌ಡೌನ್‌ ನಂತರ ಮೊದಲ ಬಾರಿಗೆ “ನಮ್ಮ ಮೆಟ್ರೋ’ ಪ್ರಯಾಣಿಕರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಕಳೆದ ಒಂದು ತಿಂಗಳಿಂದ ಪ್ರಯಾಣಿಕರ ಸಂಖ್ಯೆ70-80 ಸಾವಿರದ ಆಸುಪಾಸು ಇತ್ತು. ಬುಧವಾರ ಮತ್ತು ಗುರುವಾರ ಈ ಸಂಖ್ಯೆ ಒಂದು ಲಕ್ಷ ದಾಟಿದ್ದು, ಇದರೊಂದಿಗೆ ಆದಾಯ ಕೂಡ ಗಣನೀಯವಾಗಿ ಏರಿಕೆ ಕಂಡು ಬಂದಿದೆ.  ಇದು ಸಹಜವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌)ದಲ್ಲಿ ಸಂತಸ ಮೂಡಿಸಿದೆ.

Advertisement

ಲಾಕ್‌ಡೌನ್‌ ನಂತರ ಸೆ. 7ರಂದು ನೇರಳೆ ಮಾರ್ಗದಲ್ಲಿ ಸೀಮಿತ ಅವಧಿಯಲ್ಲಿ ಮೆಟ್ರೋ ಪುನಾರಂಭಗೊಂಡಿತ್ತು. ಅಂದು ಕೇವಲ 3,770 ಜನ ಪ್ರಯಾಣಿಸಿ ದ್ದರು. ಇದರಿಂದಬಂದಆದಾಯವುಕಾರ್ಯಾಚರಣೆಗೆಖರ್ಚಾದ ವಿದ್ಯುತ್‌ ದರಕ್ಕಿಂತ ಅರ್ಧದಷ್ಟೂ ಅಂದರೆ 3,770 ರೂ.ಬಂದಿತ್ತು. ಎರಡನೇಹಂತದಲ್ಲಿ ಸೆ.9ರಂದು ಹಸಿರು ಮಾರ್ಗ ಹಾಗೂ 11ರಂದು ಪೂರ್ಣ ಪ್ರಮಾಣ ಸಂಚಾರ ಶುರುವಾಗಿತ್ತು. ಅಲ್ಲಿಂದ ಸರಿಯಾಗಿ ಮೂರು ತಿಂಗಳಲ್ಲಿ “ನಮ್ಮ ಮೆಟ್ರೋ’ ಈ ಸಾಧನೆ ಮಾಡಿದೆ.

ಇದನ್ನೂ ಓದಿ : ವೇತನ ನೀಡದ ಆರೋಪ : ಕಾರ್ಮಿಕರ ಆಕ್ರೋಶಕ್ಕೆ ದೇಶದ ಮೊದಲ ಐಫೋನ್ ಕಂಪನಿ ಧ್ವಂಸ

ಒಂದೆಡೆ ನಗರದಲ್ಲಿ ಕೋವಿಡ್ ಹಾವಳಿ ತಗ್ಗಿದೆ. ಮತ್ತೂಂದೆಡೆ ನಿಧಾನವಾಗಿ ಕೆಲವು ಕಂಪೆನಿಗಳು ಮನೆಯಿಂದ ಕೆಲಸ ಮಾಡುವ ನಿಯಮ ಸಡಿಲಗೊಳಿಸುತ್ತಿವೆ. ಇದರೊಂದಿಗೆ ಬಿಎಂಆರ್‌ಸಿಎಲ್‌ನಲ್ಲಿ ಅನುಸರಿಸುತ್ತಿರುವಕ್ರಮಗಳುಇವೆಲ್ಲವೂಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಿವೆ. ಹಾಗಾಗಿ, ಜನ ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವವಿಶ್ವಾಸಇದೆಎಂದುನಿಗಮದನಿರ್ವಹಣೆ ಮತ್ತು ಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಪ್ರಯಾಣಿಕರ ಸಂಖ್ಯೆ ಏರಿಕೆ : ಈ ಮಧ್ಯೆ ಶುಕ್ರವಾರಕೂಡ ಬಸ್‌ ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ರಾತ್ರಿ 9.50ಕ್ಕೆ ಒಂದು ಲಕ್ಷ ತಲುಪಿತ್ತು. ಆದಾಯದ ನಿಖರ ಮಾಹಿತಿ ಲಭ್ಯ ಇರಲಿಲ್ಲ. ಸದ್ಯಕೊನೆಯ ಮೆಟ್ರೋ ರೈಲು ಸೇವೆ ರಾತ್ರಿ9 ಗಂಟೆಗೆ ನಾಲ್ಕೂ ದಿಕ್ಕುಗಳಿಂದ ಇದೆ.

Advertisement

50 ರೈಲು ಕಾರ್ಯಾಚರಣೆ :  ಬಸ್‌ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಿಎಂಆರ್‌ ಸಿಎಲ್‌ ಎಲ್ಲ 50 ಮೆಟ್ರೋ ರೈಲುಗಳನ್ನುಕಾರ್ಯಾಚರಣೆ ಮಾಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಶುಕ್ರವಾರದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ದಟ್ಟಣೆ ಅವಧಿಯಲ್ಲಿ ಎಲ್ಲ50 ರೈಲುಗಳ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಮೆಟ್ರೋ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಸ ಬಹುದು. ಹೊಸಕಾರ್ಡ್‌ಗಳನ್ನು ಡೆಬಿಟ್‌ ಅಥವಾಕ್ರೆಡಿಟ್‌ ಕಾರ್ಡ್‌ ಅಥವಾ ಯುಪಿಐ ಮೂಲಕ ನಿಲ್ದಾಣಗಳಲ್ಲಿ ಹಣಪಾವತಿ ಮಾಡಿ, ಆರಂಭಿಕ ಟಾಪ್‌ ಅಪ್‌ನೊಂದಿಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯ ಎಲ್ಲ ನಿಲ್ದಾಣಗಳಲ್ಲೂ ಲಭ್ಯ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next