Advertisement
ಇದೇ ವೇಳೆ ಎಲ್ಲ ಸ್ಮಾರ್ಟ್ ಫೋನ್ ತಯಾರಕರು ನಿಗದಿತ ಅವಧಿಯೊಳಗೆ ಈ ವೈಶಿಷ್ಟವನ್ನು ಕಡ್ಡಾಯವಾಗಿ ಸಕ್ರಿಯಗೊಳಿಸಬೇಕು ಎಂದು ನಿರ್ದೇಶಿಸಿದೆ. ದೇಶದಲ್ಲಿ ಮಾರಾಟ ವಾಗುವ ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲಿ ಕಾಲಿಂಗ್ ನೇಮ್ ಪ್ರಸೆಂಟೇಶನ್(ಸಿಎನ್‌ಎಪಿ) ಸೇವೆ ಹೊಂದಿರಬೇಕು. ಈ ಸೇವೆ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ನಿಗದಿತ ಅವಧಿಯ ಮಿತಿಯನ್ನು ಹೇರಬೇಕು. ಭಾರತಾ ದ್ಯಂತ ಎಲ್ಲ ನೆಟ್‌ವರ್ಕ್ ಅಪರೇಟರ್‌ಗಳು ಈ ನಿಯಮಗಳನ್ನು ಪಾಲಿಸ ಬೇಕು ಎಂದು ಹೇಳಿರುವ ಟ್ರಾಯ್, ಈ ಕುರಿತು ಸರಕಾರಕ್ಕೆ ಶಿಫಾರಸು ಮಾಡಿದೆ.“ನಮಗೆ ಕರೆ ಮಾಡುತ್ತಿರುವವರು ಯಾರು ಎಂಬುದು ವ್ಯಕ್ತಿಗೆ ತಿಳಿಯಬೇಕು. ಸಾಮಾನ್ಯ ವಾಯ್ಸ ಕಾಲ್, ವಾಟ್ಸ್‌ಆಪ್ ಕಾಲ್, ಫೇಸ್‌ಟೈಮ್ ಅಥವಾ ಒಟಿಟಿ ಕಾಲ್ ಎಲ್ಲದಕ್ಕೂ ಇದು ಅನ್ವಯವಾಗಬೇಕು’ ಎಂದು ಇತ್ತೀಚೆಗೆ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.