Advertisement
ತೆಕ್ಕಟ್ಟೆ: ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದ ನಾಲ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಮಳೆಗಾಲದ ಸಂದರ್ಭ ಸಂಪೂರ್ಣ ಕೆಸರುಮಯವಾಗಿ ವಾಹನ ಮಾತ್ರವಲ್ಲದೆ ಗ್ರಾಮಸ್ಥರು ನಡೆದು ಸಾಗಲು ಸಹ ಪ್ರಯಾಸಪಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಸುತ್ತ ಮುತ್ತಲಿನ ಪರಿಸರದಲ್ಲಿ ಸುಮಾರು 16 ಕುಟುಂಬಗಳಿದ್ದು ಮಳೆಗಾಲದ ಸಂದರ್ಭದಲ್ಲಿ ಸರಿ ಸುಮಾರು 300 ಮೀಟರ್‌ಗೂ ಅಧಿಕ ದೂರದ ಮಣ್ಣಿನ ರಸ್ತೆ ಎನ್ನುವುದು ತೋಡಾಗಿ ಪರಿವರ್ತನೆಗೊಳ್ಳುವ ಪರಿಣಾಮ ನಿತ್ಯ ಪ್ರಮುಖ ಪೇಟೆ ಹಾಗೂ ಇನ್ನಿತರ ಕೆಲಸಗಳಿಗಾಗಿ ತೆರಳುವವರು ನಿತ್ಯ ಸಂಕಷ್ಟ ಅನುಭವಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದನ್ನೂ ಓದಿ:12 ವಯಸ್ಸಿಗಿಂತ ಮೇಲ್ಪಟ್ಟ ಮಕ್ಕಳಿಗೆ ಸಿದ್ಧವಾದ ಮೊದಲ ಕೋವಿಡ್ ಲಸಿಕೆಗೆ ಭಾರತದಲ್ಲಿ ಅನುಮೋದನೆ
Related Articles
ಮಳೆ ಬರುವ ಸಂದರ್ಭದಲ್ಲಿ ನಾಲೂ¤ರಿನ ಮಣ್ಣಿನ ರಸ್ತೆಯು ಕೆಸರುಮಯವಾಗುವ ಪರಿಣಾಮ ಆಟೋ ಹಾಗೂ ಇನ್ನಿತರ ವಾಹನಗಳ ಚಕ್ರ ಕೆಸರಿನಲ್ಲಿ ಹೂತು ಹೋಗುತ್ತದೆ ಎನ್ನುವ ಕಾರಣ ನೀಡಿ ಬರಲು ಒಪ್ಪುವುದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದು, ಅನಾರೋಗ್ಯ ಪೀಡಿತ ಹಿರಿಯ ನಾಗರಿಕರಿಗೆ ತುರ್ತಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಕೂಡ ಕಷ್ಟಸಾಧ್ಯವಾಗಿದೆ ಎನ್ನುವುದು ಅವರ ಅಳಲು.
Advertisement
ಸಂಚಾರ ದುಸ್ತರನಾಲ್ತೂರು ಶ್ರೀ ಮಹಾ ಲಿಂಗೇಶ್ವರದ ದೇಗುಲ ಸಂಪರ್ಕ ಮಣ್ಣಿನ ರಸ್ತೆಯು ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗುವುದರಿಂದ ಗ್ರಾಮಸ್ಥರಿಗೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಅಲ್ಲದೆ ರಸ್ತೆಗೆ ಅಡ್ಡಲಾಗಿ ಸಮರ್ಪಕವಾದ ಮೋರಿ ಅಳವಡಿಸದೆ ಇರುವ ಪರಿಣಾಮ ಮಳೆ ನೀರು ನೇರವಾಗಿ ಮನೆಯೊಳಗೆ ಬಂದು ನುಗ್ಗುತ್ತಿದೆ. ಈಗಾಗಲೇ ಮನೆಯ ಹಿರಿಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದರೆ ಅವರನ್ನು ತುರ್ತು ಸಂದರ್ಭ ಆಸ್ತತ್ರೆಗೆ ಕೊಂಡೊಯ್ಯಲು ನೆರವಾದೀತು.
– ಗೋಪಾಲ ಮೊಗವೀರ ನಾಲ್ತೂರು,
ಸ್ಥಳೀಯ ನಿವಾಸಿ ಪ್ರಸ್ತಾವ ಸಲ್ಲಿಕೆ
ಯಡಾಡಿ ಮತ್ಯಾಡಿ ಗ್ರಾಮದ ನಾಲ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲ ಸಂಪರ್ಕ ರಸ್ತೆ ಅಭಿವೃದ್ಧಿಯ ಬಗ್ಗೆ ಗ್ರಾ.ಪಂ.ನ ಗಮನದಲ್ಲಿದ್ದು, ಅಭಿವೃದ್ಧಿಗಾಗಿ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಪಂಚಾಯತ್‌ನಿಂದ ಪ್ರಸ್ತಾವ ಸಲ್ಲಿಸಲಾಗುವುದು .
– ಚಂದ್ರಕಾಂತ್ ಬಿ., ಪಿಡಿಒ , ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಇತರ ಸಮಸ್ಯೆಗಳೇನು?
ಈಗಾಗಲೇ ನಾಲ್ತೂರು ಶ್ರೀ ಮಹಾ ಲಿಂಗೇಶ್ವರದ ದೇಗುಲದ ಸಂಪರ್ಕ ಮಾರ್ಗದಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದು, ಈ ವಿದ್ಯುತ್ ಕಂಬಗಳಿಗೆ ದಾರಿದೀಪ ಅಳವಡಿಸದೆ ಇರುವ ಪರಿಣಾಮ ರಾತ್ರಿ ವೇಳೆಯಲ್ಲಿ ಸಂಚರಿಸುವುದು ಕಷ್ಟ ವಾಗುತ್ತಿದೆ. ಆದ್ದರಿಂದ ತುರ್ತಾಗಿ ದಾರಿದೀಪ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. -ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ