Advertisement

 ಅಗ್ನಿಪಥ’ಕ್ಕೆ ವಿರೋಧ ಹಿನ್ನೆಲೆ: ದೇಶಹಿತಕ್ಕೆ ಕಾಂಗ್ರೆಸ್‌ ವಿರೋಧ: ನಳಿನ್‌ ಕುಮಾರ್‌ ಕಟೀಲು

01:32 AM Jun 26, 2022 | Team Udayavani |

ಮಂಗಳೂರು: ದೇಶಕ್ಕೆ ಒಳ್ಳೆಯದಾಗುವ ಯೋಜನೆಗಳನ್ನೆಲ್ಲ ವಿರೋಧಿ ಸುವುದು ಕಾಂಗ್ರೆಸ್‌ನ ಮಾನಸಿಕತೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಅಗ್ನಿಪಥ್‌ ಯೋಜನೆಗೆ ಕಾಂಗ್ರೆಸ್‌ ವಿರೋಧದ ಕುರಿತು ಮಂಗಳೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಅವರು, ದೇಶದಲ್ಲಿ 2014ರ ಅನಂತರ ಎನ್‌ಡಿಎ ಸರಕಾರ ಬಂದ ಮೇಲೆ ಪರಿವರ್ತನೆಯ ಹಾದಿ ಆರಂಭವಾಗಿದೆ. ರಾಷ್ಟ್ರಕ್ಕೆ ಉಪಯುಕ್ತವಾದ ಹತ್ತಾರು ಯೋಜನೆ ಗಳನ್ನು ಸರಕಾರ ತರುತ್ತಿದೆ. ಆದರೆ ಅವುಗಳನ್ನೆಲ್ಲ ವಿರೋಧಿಸುವುದು ಕಾಂಗ್ರೆಸ್‌ಗೆ ಅಭ್ಯಾಸವಾಗಿ ಬಿಟ್ಟಿದೆ.

ಸೇನೆಯಲ್ಲಿ ಯುವಜನತೆ ಬರಬೇಕು, ಯುವಸೈನ್ಯ ಇರಬೇಕು ಎಂಬುದು “ಅಗ್ನಿಪಥ’ದ ಉದ್ದೇಶ. ಎಲ್ಲರಿಗೂ ಮಿಲಿಟರಿ ಸಂಸ್ಕಾರ, ಶಿಕ್ಷಣ ಸಿಗಬೇಕು. ರಾಷ್ಟ್ರಭಕ್ತಿ ಜಾಗೃತ ವಾಗಬೇಕು. ಆಗಅವರ ಜೀವನದ ಜತೆಗೆ ರಾಷ್ಟ್ರಕ್ಕೂ ಒಳ್ಳೆಯದಾಗುತ್ತದೆ. ಇದಕ್ಕೆ ಕಾಂಗ್ರೆಸ್‌ನವ ರನ್ನು ಕೇಳಿಲ್ಲ. ಉದ್ಯೋಗ ಬಯ ಸುವವರಿಗೆ, ಸೇನೆ ಸೇರಲು ಬಯ ಸುವವರಿಗೆ, ರಾಷ್ಟ್ರಕ್ಕಾಗಿ ದುಡಿಯುವವರಿಗೆ ಅವಕಾಶವನ್ನು ಮಾಡಿ ಕೊಡಲಾಗುತ್ತಿದೆ. ಯುವಜನತೆಯ ಭವಿಷ್ಯಕ್ಕಾಗಿ ಅಗ್ನಿಪಥ ಯೋಜನೆ ಇದೆ. ಅಗ್ನಿಪಥದಲ್ಲಿ ಸೇವೆ ಸಲ್ಲಿಸಿದ ಅನಂತರವೂ ಅವರಿಗೆ ಉದ್ಯೋಗ ದೊರೆ ಯುವ ಅವಕಾಶವಿದೆ ಎಂದರು.

ಗಲಭೆಗೆ ಪ್ರಚೋದನೆ
ಕಾಂಗ್ರೆಸ್‌ ದ್ವೇಷದ ಭಾವನೆ ಮೂಡಿಸುತ್ತಿದೆ. ರಾಜ್ಯದಲ್ಲಿ ತನ್ನ ಸರಕಾರ ಇರುವಾಗಲೂ ನಿರಂತರ ವಾಗಿ ಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿದೆ. ಹಲವಾರು ಘಟನೆಗಳಲ್ಲಿ ಸೂತ್ರಧಾರಿಯಾಗಿ ಇರುವು ದನ್ನು ಕಂಡಿದ್ದೇವೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಹುಬ್ಬಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್‌ ಇದೆ. ಕಾಂಗ್ರೆಸ್‌ ದ್ವೇಷದ ರಾಜಕಾರಣ ಹರಡುತ್ತಿದೆ. ಪಠ್ಯ ಪುಸ್ತಕದಲ್ಲಿ ಏನಿದೆ ಎಂದು ಓದದೆ ಮೂರ್ಖತನದ ಪರಮಾವಧಿ ತೋರಿಸುತ್ತಿದೆ ಎಂದು ಹೇಳಿದರು.

ಕ್ಷಮೆ ಯಾಚನೆ ಇಲ್ಲ
ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ಆಡಳಿತ ನಡೆಸುವುದು ಹೇಗೆಂದುಗೊತ್ತಿದೆ. ಸಾಹಿತಿಗಳು ಕೂಡ ಯೋಚನೆ ಮಾಡಲಿ. ಅವರು ಯಾವ ಕಾಲಘಟ್ಟದಲ್ಲಿ ಯಾವ ಹೋರಾಟ ಮಾಡಿದ್ದಾರೆಂಬುದನ್ನು ನೆನಪು ಮಾಡಿಕೊಳ್ಳಲಿ. ಯಾರೇ ಆದರೂ ಕೂಡ ಪುಸ್ತಕದಲ್ಲಿರುವ ವಿಷಯಗಳನ್ನು ಮೊದಲು ತಿಳಿದುಕೊಳ್ಳಲಿ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next