Advertisement
ಶನಿವಾರ ಬಿಜೆಪಿ ಬರ ಅಧ್ಯಯನಕ್ಕಾಗಿ ತಮ್ಮ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನಿಗೆ ಭೇಟಿ ನೀಡಿದ ಬಳಿಕ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರು ಭೀಕರ ಬರದಿಂದ ಕಂಗೆಟ್ಟಿರುವ ಈ ಹಂತದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದ್ದು, ರಾಜ್ಯದ ಜನ ಆಕ್ರೋಶಗೊಳ್ಳುವಂತೆ ಮಾಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.
Related Articles
Advertisement
ಇದನ್ನೂ ಓದಿ:World Cup 2023; ಭಾರತ ವಿರುದ್ಧ ಹೀನಾಯ ಸೋಲು; ತಂಡದಿಂದ ವಿವರಣೆ ಕೇಳಿದ ಲಂಕಾ ಮಂಡಳಿ
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಪಂಪ್‍ಸೆಟ್ ಆಧಾರಿತ ರೈತರು ಬೆಳೆ ಬೆಳೆಯಲು ಈ ಸರ್ಕಾರ ಸೂಕ್ತ ಹಾಗೂ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಅಲ್ಪಸರ್ವಲ್ಪ ಬೆಳೆ ಬೆಳೆದುಕೊಂಡಿರುವ ತಮ್ಮ ಬೆಳೇ ಉಳಿಸಿ ಎಂದು ಪಂಪ್‍ಸೆಟ್ ಇರುವ ರೈತರು ಗೋಗರೆದರೂ ಅವರ ಬೇಡಿಕೆಗೆ ಸ್ಪಂದಿಸುವ ಸೌಜನ್ಯ ತೋರದ ಈ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಬಳಿಕ ಬಿಜೆಪಿ ತಂಡಗಳು ಬರ ಪರಿಸ್ಥಿತಿ ಕುರಿತು ಕೋರ ಸಮಿತಿ ಸಭೆಯಲ್ಲಿ ಚರ್ಚಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಾಸ್ತವಿಕ ವರದಿ ನೀಡಲಿದೆ. ಅಲ್ಲದೇ ತುರ್ತಾಗಿ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸುತ್ತದೆ ಎಂದರು.
ಈ ಹಂತದಲ್ಲಿ ರೈತರು ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು, ಬರ ಬಿದ್ದಿರುವ ಈಗ ಈರುಳ್ಳಿ, ಟೊಮ್ಯಾಟೋ ಬೆಲೆ ಏರಿಸಿದ್ದಾರೆ. ಹೋಟೆಲ್‍ಗಳಲ್ಲಿ ದರ ಏರಿಕೆ ಮಾಡಿದರೂ ರೈತರ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ. ಕನಿಷ್ಟ ಉತ್ತಮ ವಿದ್ಯುತ್ ನೀಡುತ್ತಿಲ್ಲ ಎಂದು ಅಶ್ಲೀಲ ಶಬ್ಧಗಳಿಂದಲೇ ನಿಂದಿಸಿ ಆಕ್ರೋಶ ಹೊರ ಹಾಕಿದಾಗ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ರೈತನ ಹೆಗಲು ನೇವರಿಸಿ ಸಮಾಧಾನಿಸಿದರು.
ಇದೇ ವೇಳೆ ಸ್ಥಳದಲ್ಲಿದ್ದ ಮಹಿಳೆಯರು ಉಚಿತ ಬಸ್ ಎಂದು ನಿತ್ಯ ಕೆಲಸ ಬಿಟ್ಟು ಊರೂರಿಗೆ ತಿರುಗಲು ಆಗುತ್ತಾ? ಮಾನ ಇರುವ ಯಾರೂ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅವಳಿ ಜಿಲ್ಲೆಗಳ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ,ಬೆಸ್.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಶಾಸಕರಾದ ರಮೇಶ ಭೂಸನೂರು, ಸೋಮನಗೌಡ ಸಾಸನೂರು, ಪಕ್ಷದ ಮುಖಂಡರಾದ ವಿಜುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಬಸವರಾಜ ಬಿರಾದಾರ ಇತರರು ಉಪಸ್ಥಿತರಿದ್ದರು.