Advertisement

ನಿಮ್ಮ ಬಳಿ ಬಂಡೆ ಇದ್ದರೆ ನಮ್ಮ ಬಳಿ ಕಾಂಗ್ರೆಸ್ ನಿಂದ ಬಂದ ಡೈನಮೈಟ್ ಗಳಿವೆ : ಕಟೀಲ್

07:18 PM Oct 18, 2020 | sudhir |

ಬೆಂಗಳೂರು : ಎಲ್ಲೆಲ್ಲಿಂದಲೋ ಬಂದು ಗೂಂಡಾಗಿರಿಯ ರಾಜಕಾರಣ ಮಾಡುವುದನ್ನು ನಿಲ್ಲಿಸಲು ರಾಜರಾಜೇಶ್ವರಿ ನಗರ ಕ್ಷೇತ್ರದ ಜನರು ನಿರ್ಧರಿಸಿದ್ದಾರೆ. ಈ ಬಾರಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು ಜನ ಬಿಜೆಪಿಗೆ ಬೆಂಬಲಿಸುವುದು ಖಚಿತವಾಗಿದೆ ಹಾಗಾಗಿ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ರವಿವಾರ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮಾಜಿ ಕಾರ್ಪೊರೇಟರ್ ಗಳು ಹಾಗೂ ಮುಖಂಡರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿ ಮಾತನಾಡಿದ ಕಟೀಲ್ “ಸ್ವಾಮಿ ನಿಮ್ಮ ಬಳಿ ಬಂಡೆ ಇರಬಹುದು ಆದರೆ ನಮ್ಮ ಬಳಿ ಕಾಂಗ್ರೆಸ್ ನಿಂದ ಬಂದ ಡೈನಮೈಟ್ ಗಳು ಇವೆ ಇದರಿಂದ ಬಂಡೆ ಪುಡಿ ಪುಡಿಯಾಗಲಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.

ಕಾಂಗ್ರೆಸ್ ಗೂಂಡಾಗಿರಿ ರಾಜಕಾರಣ ಜನ ಸಹಿಸುವುದಿಲ್ಲ ಹಾಗಾಗಿ ಕಾಂಗ್ರೆಸ್ ಮನೆ ಖಾಲಿಯಾಗುತ್ತಿದೆ ಎಂದರು. ರಾಜರಾಜೇಶ್ವರಿ ಕ್ಷೇತ್ರದ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ ಆದುದರಿಂದ ಈ ಕ್ಷೇತ್ರದಲ್ಲಿ ಮುನಿರತ್ನ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಹಿಂದಿನ ಆರು ವರ್ಷಗಳ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿತ್ತು, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದವು, ಸಮಾಜ ಒಡೆಯುವ ಪ್ರವೃತ್ತಿಯು ಹೆಚ್ಚಿತ್ತು ಆದರೆ ಬಿಜೆಪಿ ಪಕ್ಷದ ಮುಖಂಡರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು ಆದುದರಿಂದ ಯಾವ ಬಂಡೆಯೂ ನಮಗೆ ಲೆಕ್ಕಕ್ಕಿಲ್ಲ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next