Advertisement

“ಕಾಂಗ್ರೆಸ್‌ನಿಂದ ಅರಾಜಕತೆ ಸೃಷ್ಟಿ: ನಳಿನ್‌ ಕುಮಾರ್‌ ಕಟೀಲು

11:55 PM Apr 19, 2022 | Team Udayavani |

ಬಳ್ಳಾರಿ: ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಾಗಲೆಲ್ಲ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಬೆಂಗಳೂರಿನ ಕೆಜೆ ಹಳ್ಳಿ, ಡಿಜೆಹಳ್ಳಿಯಲ್ಲಿ ಗೊಂದಲ ಸೃಷ್ಟಿ ಮಾಡಿತ್ತು. ಘಟನೆಯಲ್ಲಿ ಕಾಂಗ್ರೆಸ್‌ ಶಾಸಕರ ಮನೆ ಮೇಲೆಯೇ ದಾಳಿ ನಡೆಯಿತು. ಈಚೆಗೆ ಹಿಂದೂ ಯುವಕ ಹರ್ಷನ ಕೊಲೆ ಬಳಿಕ ಸಮಾಜದಲ್ಲಿ ಗೊಂದಲ ಸೃಷ್ಟಿಸಿತ್ತು. ಇದೀಗ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಈ ಎಲ್ಲ ಘಟನೆಗಳ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂದರು.

ದೇಶದ ಅಭಿವೃದ್ಧಿಯಲ್ಲಿ ಕೇಂದ್ರ, ರಾಜ್ಯ ಸರಕಾರಗಳ ವೇಗ, ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವುದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಡುವಿನ ಒಳಜಗಳ, ಮುಂದಿನ ಚುನಾವಣೆಯಲ್ಲಿ ಸ್ಥಿತಿ ಹೇಗಾಗಲಿದೆ ಎಂಬ ಭಯ ಕಾಂಗ್ರೆಸ್‌ನವರಲ್ಲಿ ಆವರಿಸಿದೆ. ಇದರಿಂದ ಅಧಿಕಾರ ಕೈತಪ್ಪುವ ಭಯದಿಂದ ಕಾಂಗ್ರೆಸ್‌ ನವರು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದರು.

ಸಂಘಟನೆಗೆ ಮೂರು ತಂಡ ರಚನೆ
ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ತ ಪೂರ್ವ ತಯಾರಿಗಾಗಿ ವಿಭಾಗವಾರು ಮೂರು ತಂಡಗಳನ್ನು ರಚಿಸಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ, ಅರುಣ್‌ಸಿಂಗ್‌ ನೇತೃತ್ವದ ತಂಡ ಬೆಳಗಾವಿ ವಿಭಾಗದಲ್ಲಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಚಿವ ವಿ.ಸೋಮಣ್ಣ, ತೇಜಸ್ವಿನಿ ಅನಂತಕುಮಾರ್‌ ನೇತೃತ್ವದ ತಂಡ ಬಳ್ಳಾರಿ ವಿಭಾಗದಲ್ಲಿ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡ ಮಂಗಳೂರು, ಉಡುಪಿ ವಿಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next