ಮೈಸೂರು : ರಾಜ್ಯದಲ್ಲಿ ಕೇವಲ ಬಿಜೆಪಿ ಸರಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿರುವುದಲ್ಲ ಬದಲಾಗಿ ಎಲ್ಲಾ ಸರಕಾರಗಳ ಅವಧಿಯಲ್ಲೂ ಬೆಲೆ ಏರಿಕೆಯಾಗಿದ್ದು ನಮ್ಮ ಮೋದಿ ಸರಕಾರ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ ಅಂತೆಯೇ ಬಿಜೆಪಿಯಲ್ಲೂ ಏರಿಕೆ ಆಗಿದೆ ಎಂದು ಹೇಳಿದರು.
ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವ ವಿಚಾರವಾಗಿ ಮಾತನಾಡಿದ ಕಟೀಲ್ ಕಾಂಗ್ರೆಸ್ ಲಾರ್ಡ್ ಮೆಕಾಲೆ ಶಿಕ್ಷಣ ಪದ್ದತಿಯಲ್ಲಿ ಇಷ್ಟು ವರ್ಷ ಆಡಳಿತ ನಡೆಸಿದ್ರು. ಆದ್ದರಿಂದ ಸ್ವಾಭಿಮಾನ ದೇಶ ನಿರ್ಮಾಣ ಮಾಡೊದಕ್ಕೆ ಅವರಿಗೆ ಆಗಲಿಲ್ಲ. ವಿದೇಶಿ ಸಂಸ್ಕೃತಿಯಲ್ಲೇ ಬೆಳೆದು ಬಂದಿರುವ ಕಾಂಗ್ರೆಸ್ ಗೆ ಸ್ವದೇಶೀ ಚಿಂತನೆ ಇಲ್ಲ. ಹಾಗಾಗಿ ಕಾಂಗ್ರೆಸ್ ನ ನೀತಿ ಎಲ್ಲವನ್ನೂ ವಿರೋಧ ಮಾಡೋದು. ಹಾಗೆಯೇ ಪ್ರಧಾನಿ ತರುವ ಒಳ್ಳೆಯ ನೀತಿಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ಇದನ್ನೂ ಓದಿ :ಕೆಲವರಿಗೆ ದೊಡ್ಡ ಸಮಾಜದ ನಾಯಕರಾಗಬೇಕು ಎಂಬ ಆಸೆ: ಎಂ.ಬಿ.ಪಾಟೀಲ್ ಗೆ ಸಿ.ಸಿ.ಪಾಟೀಲ್ ಟಾಂಗ್
ಇದುವರೆಗೆ ತೆಗೆದುಕೊಂಡ ಯಾವುದೇ ತೀರ್ಮಾನಕ್ಕೆ ರಾಷ್ಟ್ರದ ಹಿತದೃಷ್ಟಿಯಿಂದಲೂ ಬೆಂಬಲ ನೀಡಿಲ್ಲ. ಅಂದು ಸರ್ಜಿಕಲ್ ಸ್ಟ್ರೈಕ್ ಆದಾಗಲೂ ವಿರೋಧ ಮಾಡಿದ್ರೂ, ಚೀನಾ ಮೇಲೆ ಆಕ್ರಮಣವನ್ನೂ ವಿರೋಧ ಮಾಡಿದ್ರು.ಇಷ್ಟೆಲ್ಲಾ ವಿರೋಧ ಮಾಡಿದವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕಾಂಗ್ರೆಸ್ ನಾಯಕರಿಗೆ ಕಟೀಲ್ ತಿರುಗೇಟು ನೀಡಿದರು.