ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೈತರಿಗೆ ನೆರವಾಗುವ ಮಹತ್ವದ ಉದ್ದೇಶದ ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ಸುಮಾರು 9.5 ಕೋಟಿ ಜನರಿಗೆ ಎಂಟನೇ ಕಂತು ಬಿಡುಗಡೆಯಾಗಿದೆ. ರಾಜ್ಯದ 51, 67,535 ರೈತರಿಗೆ ಪ್ರಯೋಜನ ಲಭಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿ ಜಿಲ್ಲೆಯಲ್ಲಿ 1592 ಪಾಸಿಟಿವ್ ಪ್ರಕರಣ ಪತ್ತೆ : ಹೆಚ್ಚಿದ ಆತಂಕ
ರಾಜ್ಯಕ್ಕೆ ಸುಮಾರು ರೂ 1,065.25 ಕೋಟಿ ನೆರವು ಲಭಿಸಲಿದೆ. ಆರ್ಥಿಕ ಸಂಕಷ್ಟದಿಂದ ತೊಂದರೆಗೊಳಗಾಗಿರುವ ರೈತರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಕೇರಳದ 33. 39 ಲಕ್ಷ ರೈತರಿಗೆ 684. 92 ಕೋಟಿ ರೂ, ತಮಿಳುನಾಡಿನ 37.15 ಲಕ್ಷ ರೈತರಿಗೆ 751.90 ಕೋಟಿ ರೂ, ಪಾಂಡಿಚೇರಿಯ 10, 154 ರೈತರಿಗೆ 2.03 ಕೋಟಿ ರೂ. ನೆರವು ಲಭಿಸುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 9.5 ಕೋಟಿ ರೈತರಿಗೆ ಸುಮಾರು 20. 667.75 ಕೋಟಿ ರೂ ಹಣಕಾಸಿನ ನೆರವು ಲಭಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.\
ಇದನ್ನೂ ಓದಿ : ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸರಣಿ ಅಪಘಾತ, ಇಬ್ಬರು ಸಾವು, ಮೂವರು ಗಂಭೀರ